Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Womens Asia Cup 2024: ಟೀಮ್‌ ಇಂಡಿಯಾ ಅಭಿಮಾನಿಗಳ ಹೃದಯ ಗೆದ್ದ ನೇಪಾಳ ನಾಯಕಿ!

ಜುಲೈ 24 ಬುಧವಾರ, 2024ರ ಮಹಿಳಾ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ವನಿತೆಯರ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಭಾರತ ತಂಡ ಏಷ್ಯಾಕಪ್‌ನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿರುವುದು ವಿಶೇಷ.

ಈಗ ಭಾರತ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸುವ ನಿರೀಕ್ಷೆಯಿದೆ. ಇಂದು ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ಮಹಿಳಾ ತಂಡಗಳ ನಡುವೆ ಪಂದ್ಯ ನಡೆಯಲಿದೆ.

Womens Asia Cup 2024 Indu Barma won Indian cricket fans hearts

ಈ ಪಂದ್ಯದ ಬಳಿಕ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆಯನ್ನು ಯಾವ ತಂಡ ಎದುರಿಸಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಆದರೆ ಸೆಮಿಫೈನಲ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ.

ಟೀಮ್‌ ಇಂಡಿಯಾ ತನ್ನ ಕೊನೆಯ ಪಂದ್ಯದಲ್ಲಿ ನೇಪಾಳವನ್ನು ಎದುರಿಸಿತು. ಈ ಪಂದ್ಯದಲ್ಲಿ ಭಾರತ ತಂಡ ನೇಪಾಳವನ್ನು 82 ರನ್‌ಗಳ ಭಾರೀ ಅಂತರದಿಂದ ಸೋಲಿಸಿತು. ಈ ಸೋಲಿನ ನಂತರವೂ ನೇಪಾಳ ಕ್ರಿಕೆಟ್ ತಂಡ ಭಾರತೀಯ ಅಭಿಮಾನಿಗಳ ಮನ ಗೆದ್ದಿದೆ.

ಈ ಪಂದ್ಯದಲ್ಲಿ ಭಾರತ ತಂಡದ ನಾಯಕಿಯಾಗಿದ್ದ ಸ್ಮೃತಿ ಮಂಧಾನ ಅವರಿಗೆ ನೇಪಾಳ ತಂಡದ ನಾಯಕಿ ಇಂದು ಬರ್ಮಾ ಅವರು ಸುಂದರವಾದ ಉಡುಗೊರೆಯನ್ನು ನೀಡಿದರು. ಇಂದು ಬರ್ಮಾ ಅವರು ಮಂಧಾನಕ್ಕೆ ಭಗವಾನ್ ಬುದ್ಧನ ಸುಂದರವಾದ ವಿಗ್ರಹವನ್ನು ಹಸ್ತಾಂತರಿಸಿದರು.

ಬುದ್ದನ ವಿಗ್ರಹ ಮೇಲೆ 'ಪ್ರೀತಿಯ ಟೋಕನ್' ಎಂದು ಬರೆಯಲಾಗಿದೆ. ನೇಪಾಳ ನಾಯಕಿ ಈ ಸುಂದರವಾದ ಗೆಸ್ಚರ್ ನೀಡಿದ ನಂತರ ಟೀಮ್ ಇಂಡಿಯಾದ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಭಾರತ vs ನೇಪಾಳ ಪಂದ್ಯ

ನೇಪಾಳ ವಿರುದ್ಧ ಟಾಸ್ ಗೆದ್ದು ಮೊದಲು ಭಾರತ ಬ್ಯಾಟ್ ಮಾಡಿತು. ಶೆಫಾಲಿ ವರ್ಮಾ (81), ದಯಾಲನ್ ಹೇಮಲತಾ (47) ಮತ್ತು ಜೆಮಿಮಾ ರೋಡ್ರಿಗಸ್ (28) ಅವರ ನೆರವಿನಿಂದ 178 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು.

ಈ ಗುರಿಯನ್ನು ಬೆನ್ನಟ್ಟಿದ ನೇಪಾಳ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 96 ರನ್‌ಗಳಿಗೆ ಪತನಗೊಂಡಿತು. ಇದರೊಂದಿಗೆ ಭಾರತ 82 ರನ್‌ಗಳ ಭರ್ಜರಿ ಜಯ ಸಾಧಿಸಿತು.

ನೇಪಾಳ ಪರ ಸೀತಾ ರಾಣಾ ಮಗರ್ (18) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್‌ ಪಡೆದು ಮಿಂಚಿದರೆ, ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಉರುಳಿಸಿದರು.

ಭಾರತ vs ನೇಪಾಳ ಪ್ಲೇಯಿಂಗ್‌-11

ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ (ನಾಯಕಿ), ದಯಾಲನ್ ಹೇಮಲತಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಎಸ್ ಸಜ್ನಾ, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್, ಅರುಂಧತಿ ರೆಡ್ಡಿ.

ನೇಪಾಳ: ಸಂಝೌತಾ ಖಡ್ಕಾ, ಸೀತಾ ರಾಣಾ ಮಗರ್, ಕಬಿತಾ ಕುನ್ವರ್, ಇಂದು ಬರ್ಮಾ (ನಾಯಕಿ), ಡಾಲಿ ಭಟ್ಟ, ರುಬಿನಾ ಛೆಟ್ರಿ, ಪೂಜಾ ಮಹತೋ, ಕಬಿತಾ ಜೋಶಿ, ಕಾಜಲ್ ಶ್ರೇಷ್ಠಾ (ವಿಕೆಟ್ ಕೀಪರ್), ಸಬ್ನಮ್ ರೈ, ಬಿಂದು ರಾವಲ್.

Story first published: Wednesday, July 24, 2024, 14:45 [IST]
Other articles published on Jul 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+