For Quick Alerts
ALLOW NOTIFICATIONS  
For Daily Alerts
 

Womens Asia Cup 2024: ಬಾಂಗ್ಲಾ ಸೋಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ ವನಿತೆಯರು; ಎಷ್ಟನೇ ಬಾರಿ ಗೊತ್ತಾ?

ಜುಲೈ 26 ಶುಕ್ರವಾರ, ರಂಗಿರಿ ದಂಬುಲ್ಲಾ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ ಏಷ್ಯಾ ಕಪ್ 2024 ರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸಿ ತನ್ನ ವಿಜಯ ಯಾತ್ರೆ ಮುಂದುವರೆಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಭಾರತಕ್ಕೆ 80 ರನ್ ಗಳ ಗೆಲುವಿನ ಗುರಿ ನೀಡಿತ್ತು. ಭಾರತದ ಆರಂಭಿಕ ಜೋಡಿ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ 83 ರನ್‌ಗಳ ಅದ್ಭುತ ಜೊತೆಯಾಟವಾಡುವ ಮೂಲಕ ಭಾರತಕ್ಕೆ ಸುಲಭ ಜಯ ತಂದು ಕೊಟ್ಟರು.

Womens Asia Cup 2024 Semi Final India win against Bangladesh

ಈ ಮೂಲಕ ಮಹಿಳೆಯರ ಏಷ್ಯಾ ಕಪ್‌ನಲ್ಲಿ 9ನೇ ಬಾರಿಗೆ ಫೈನಲ್‌ ತಲುಪಿದ ಸಾಧನೆಯನ್ನು ಟೀಮ್‌ ಇಂಡಿಯಾ ಮಾಡಿದೆ. ಭಾರತ ತಂಡ ಇಲ್ಲಿಯವರೆಗೆ ನಡೆದ ಎಲ್ಲಾ 7 ಏಷ್ಯಾ ಕಪ್‌ಗಳಲ್ಲಿ ಫೈನಲ್‌ಗೆ ಪ್ರವೇಶಿಸಿದೆ.

ಈ ಪೈಕಿ ಭಾರತ 7 ಬಾರಿ ಏಷ್ಯಾಕಪ್‌ನ ಚಾಂಪಿಯನ್ ಆಗಿದೆ. ಒಮ್ಮೆ ಬಾಂಗ್ಲಾದೇಶ ತಂಡ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ಪರ ನಾಯಕಿ ನಿಗರ್ ಸುಲ್ತಾನ 51 ಎಸೆತಗಳಲ್ಲಿ 2 ಬೌಂಡರಿಗಳ ಸಹಿತ 32 ರನ್ ಹಾಗೂ ಶರ್ನಾ ಅಖ್ತರ್ ಅವರ 19 ರನ್‌ಗಳನ್ನು ಕಲೆ ಹಾಕಿದರು. ಇದರ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 8 ರನ್‌ಗಳನ್ನು ಗಳಿಸಿತು.

ಭಾರತ ತಂಡ 11 ಓವರ್‌ಗಳಲ್ಲಿ ಶೆಫಾಲಿ ವರ್ಮಾ 26 ಮತ್ತು ಸ್ಮೃತಿ ಮಂಧಾನ 55 ರನ್‌ಗಳ ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೆ ಈ ಗುರಿಯನ್ನು ಸಾಧಿಸಿತು.

ಪಂದ್ಯ ಶ್ರೇಷ್ಠಪ್ರಶಸ್ತಿ

ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಮ್‌ ಇಂಡಿಯಾ ವೇಗಿ ರೇಣುಕಾ ಸಿಂಗ್ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದರು. ರೇಣುಕಾ 4 ಓವರ್ ಗಳಲ್ಲಿ 10 ರನ್ ನೀಡಿ 3 ವಿಕೆಟ್ ಪಡೆದರು.

ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠಪ್ರಶಸ್ತಿ ಸಿಕ್ಕಿತ್ತು. ಇದರೊಂದಿಗೆ ರೇಣುಕಾ ತಮ್ಮ 50 ಟಿ20 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪೂರೈಸಿದರು.

ಇನ್ನು ಬ್ಯಾಟಿಂಗ್‌ನಲ್ಲಿ ಮಿಂಚಿ ಹರಿಸಿದ ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 39 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಅಜೇಯ 55 ರನ್ ಗಳಿಸಿದರು.

ಫೈನಲ್‌ ಯಾವಾಗ?

ಜುಲೈ 28 ರಂದು ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಟೀಮ್‌ ಇಂಡಿಯಾ 2024ರ ಏಷ್ಯಾ ಕಪ್‌ನ ಫೈನಲ್ ಪಂದ್ಯವನ್ನು ಆಡಲಿದೆ. ಆದರೆ ಫೈನಲ್‌ನಲ್ಲಿ ಭಾರತ ಯಾರನ್ನು ಎದುರಿಸಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಇಂದು ಸಂಜೆ ಆತಿಥೇಯ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತ ತಂಡದೊಂದಿಗೆ ಟೀಮ್‌ ಇಂಡಿಯಾ ಫೈನಲ್‌ನಲ್ಲಿ ಆಡಲಿದೆ.

ಭಾರತ vs ಬಾಂಗ್ಲಾದೇಶ ಪ್ಲೇಯಿಂಗ್‌- 11

ಭಾರತ: ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಛೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್‌ ಕೀಪರ್‌), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್.

ಬಾಂಗ್ಲಾದೇಶ: ದಿಲಾರಾ ಅಖ್ತರ್, ಮುರ್ಷಿದಾ ಖಾತೂನ್, ನಿಗರ್ ಸುಲ್ತಾನಾ (ನಾಯಕಿ ಮತ್ತು ವಿಕೆಟ್‌ ಕೀಪರ್‌), ರುಮಾನಾ ಅಹ್ಮದ್, ಇಷ್ಮಾ ತಂಜಿಮ್, ರಿತು ಮೋನಿ, ರಬೇಯಾ ಖಾನ್, ಶೋರ್ನಾ ಅಖ್ತರ್, ನಹಿದಾ ಅಖ್ತರ್, ಜಹಾನಾರಾ ಆಲಂ, ಮಾರುಫಾ ಅಖ್ತರ್.

Story first published: Friday, July 26, 2024, 16:54 [IST]
Other articles published on Jul 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+