Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's Asia Cup 2024: ಫೈನಲ್‌ನಲ್ಲಿ ಭಾರತಕ್ಕೆ ಆಘಾತ ನೀಡಿ ಚೊಚ್ಚಲ ಪ್ರಶಸ್ತಿ ಗೆದ್ದ ಲಂಕಾ ಮಹಿಳೆಯರು

ಭಾನುವಾರ, ಜುಲೈ 29ರಂದು ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2024ರ ಮಹಿಳಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಆತಿಥೇಯ ಶ್ರೀಲಂಕಾ ತಂಡ ತನ್ನ ಚೊಚ್ಚಲ ಪ್ರಶಸ್ತಿಯನ್ನು ಎತ್ತಿಹಿಡಿಯಿತು.

ಪಂದ್ಯಾವಳಿಯ ಗುಂಪು ಹಂತ ಮತ್ತು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಮಹಿಳಾ ತಂಡ ಸುಲಭವಾಗಿ ಗೆದ್ದುಕೊಂಡಿತ್ತು. ಆದರೆ, ಫೈನಲ್‌ನಲ್ಲಿ ಶ್ರೀಲಂಕಾ ಮಹಿಳೆಯರು ಭಾರತೀಯ ವನಿತಾ ತಂಡಕ್ಕೆ ಬೆವರಿಳಿಸಿದರು.

Women s Asia Cup 2024 Sri Lanka Women s Shock India Women s in Final to Win Maiden Title

ಹೈ-ವೋಲ್ಟೇಜ್ ಪಂದ್ಯದಲ್ಲಿ ಚಾಮರಿ ಅಥಾಪತ್ತು ಮತ್ತು ಹರ್ಷಿತಾ ಸಮರವಿಕ್ರಮ ಅವರು ಭಾರತ ತಂಡದ ಸವಾರಿ ಮಾಡಿದರು ಮತ್ತು ಅಂತಿಮವಾಗಿ ತಮ್ಮ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್‌ಗೆ 165 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

ಉಪನಾಯಕಿ ಸ್ಮೃತಿ ಮಂಧಾನ ಅವರು ಬಾಂಗ್ಲಾದೇಶದ ವಿರುದ್ಧ ನಿಲ್ಲಿಸಿದ್ದ ಆಟವನ್ನು ಫೈನಲ್‌ನಲ್ಲಿ ಮುಂದುವರೆಸಿದರು. 47 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 60 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಉಮಾ ಚೆಟ್ರಿ ಮತ್ತು ಹರ್ಮನ್‌ಪ್ರೀತ್ ಕೌರ್ ಮಧ್ಯಮ ಕ್ರಮಾಂಕದ ಪ್ರದರ್ಶನ ನೀಡಲು ವಿಫಲರಾದರು. ಆದರೆ ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಭಾರತ ಯಾವುದೇ ಆವೇಗವನ್ನು ಕಳೆದುಕೊಳ್ಳದಂತೆ ನೋಡಿಕೊಂಡರು.

ಜೆಮಿಮಾ ರೋಡ್ರಿಗಸ್ 16 ಎಸೆತಗಳಲ್ಲಿ 29 ರನ್ ಗಳಿಸಿದರೆ, ರಿಚಾ ಘೋಷ್ 14 ಎಸೆತಗಳಲ್ಲಿ 30 ರನ್ ಗಳಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.

Women s Asia Cup 2024 Sri Lanka Women s Shock India Women s in Final to Win Maiden Title

ಕವಿಶಾ ದಿಲ್ಹಾರಿ 4 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್‌ಗಳೊಂದಿಗೆ ಶ್ರೀಲಂಕಾ ಪರ ಮಿಂಚಿದರು. ಉದೇಶಿಕಾ ಪ್ರಬೋಧನಿ, ಸಚಿನಿ ನಿಸಂಸಲಾ, ಚಾಮರಿ ಅಥಾಪತ್ತು ತಲಾ ಒಂದೊಂದು ವಿಕೆಟ್ ಪಡೆದರು.

ನಂತರ 166 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭಿಕ ಆಟಗಾರ್ತಿ ವಂಶಿ ಗುಣರತ್ನೆ ಕೇವಲ 1 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಚಾಮರಿ ಅಥಾಪತ್ತು ಮತ್ತು ಹರ್ಷಿತಾ ಸಮರವಿಕ್ರಮ ತಂಡವನ್ನು ಗೆಲುವಿನ ಗುರಿಯತ್ತ ಮುನ್ನಡೆಸಿದರು.

ಚಾಮರಿ ಅಥಾಪತ್ತು 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 61 ರನ್ ಬಾರಿಸಿದರೆ, ಹರ್ಷಿತಾ ಸಮರವಿಕ್ರಮ 51 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 69 ರನ್ ಗಳಿಸಿದರು. ಇನ್ನು ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ ಅಜೇಯ 30 ರನ್ ಗಳಿಸಿದರು.

Story first published: Monday, July 29, 2024, 8:32 [IST]
Other articles published on Jul 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+