Women's Emerging Asia Cup: ಯುಎಇ ವಿರುದ್ಧ ಸೋತ ಭಾರತ ವನಿತೆಯರು
ಮಹಿಳಾ ಏಷ್ಯಾ ಕಪ್ ಉದಯೋನ್ಮುಖ ಆಟಗಾರರ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿದೆ. ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ "ಎ" ತಂಡ, ಯುಎಇ ವಿರುದ್ಧ ಸೋಲು ಕಂಡಿದೆ. ಸಾಧಾರಣ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿದ ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡುವ ನಿರ್ಧಾರವನ್ನು ಮಾಡಿತು. ಆದರೆ ತಂಡದ ಭರವಸೆಯ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಹುಮೈರಾ ಕಾಜಿ ಹಾಗೂ ದಿನೇಶ್ ವೃಂದಾ ರನ್ ಬರವನ್ನು ಅನುಭವಿಸಿದರು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಯುಎಇ ಸಫಲವಾಯಿತು. ಭಾರತ "ಎ" ತಂಡ ಪವರ್ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ನಾಯಕಿ ರಾಧಾ ಯಾದವ್ ಸಹ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಟೀಮ್ ಇಂಡಿಯಾದ ಪರ ಜೊತೆಯಾಟಗಳು ಬಾರದೇ ಇರುವುದು ತಂಡಕ್ಕೆ ಸಂಕಷ್ಟಕ್ಕೆ ಸಿಲುಕಿಸಿತು. ಭಾರತದ ಪರ ಅನುಷ್ಕಾ ಶರ್ಮಾ 45 ಎಸೆತಗಳಲ್ಲಿ 7 ಬೌಂಡರಿ ಸೇರಿದಂತೆ 47 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಕೆಳ ಕ್ರಮಾಂಕದಲ್ಲಿ ತನುಜಾ ಕನ್ವರ್ 34 ರನ್ ಸಿಡಿಸಿದರು. ಉಳಿದಂತೆ ಟೀಮ್ ಇಂಡಿಯಾದ ಪರ ಯಾವೊಬ್ಬ ಬ್ಯಾಟರ್ ಎರಡಂಕಿಯನ್ನು ದಾಟಲಿಲ್ಲ. ಪರಿಣಾಮ ಭಾರತ "ಎ" 20 ಓವರ್‌ಗಳಲ್ಲಿ 9 ವಿಕೆಟ್‌ಗೆ 130 ರನ್ ಸೇರಿಸಿತು. ಯುಎಇ ತಂಡದ ಪರ ಸಮೈರಾ 3 ವಿಕೆಟ್ ಕಬಳಿಸಿದರು. ವೈಷ್ಣವಿ ಮಹೇಶ್ ಮತ್ತು ಇಶಾ ಓಜಾ ತಲಾ 2 ವಿಕೆಟ್ ಉರುಳಿಸಿದರು.
ಇಶಾ ಅರ್ಧಶತಕದ ಆಟ
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಯುಎಇ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ತೀರ್ಥ ಸತೀಶ್ 10 ರನ್‌ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್‌ಗೆ ಇಶಾ ಓಜಾ ಹಾಗೂ ಸಮೈರಾ (34) ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಇಶಾ ಓಜಾ 61 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 72 ರನ್ ಬಾರಿಸಿದರು. ಅಂತಿಮವಾಗಿ ಯುಎಇ 19.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಸೇರಿಸಿತು. ಭಾರತ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications