For Quick Alerts
ALLOW NOTIFICATIONS  
For Daily Alerts
 

Women's Hundred League: ದಿ ಹಂಡ್ರೆಡ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಸ್ಮೃತಿ ಮಂಧಾನ

ಭಾರತ ತಂಡದ ಉಪನಾಯಕಿ ಮತ್ತು ಸದರ್ನ್ ಬ್ರೇವ್ ತಂಡದ ಬ್ಯಾಟರ್ ಸ್ಮೃತಿ ಮಂಧಾನ ಅವರು ದಿ ಹಂಡ್ರೆಡ್ ಮಹಿಳಾ ಪಂದ್ಯಾವಳಿಯಲ್ಲಿ 500 ರನ್ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ವೆಲ್ಷ್ ಫೈರ್ ತಂಡದ ವಿರುದ್ಧ ಲೀಗ್‌ನ 5ನೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ ಅದ್ಭುತ ಸಾಧನೆ ಮಾಡಿದರು.

ಈವರೆಗೆ 2023ರ ದಿ ಹಂಡ್ರೆಡ್ ಪಂದ್ಯಾವಳಿಯಲ್ಲಿ ಸದರ್ನ್ ಬ್ರೇವ್ ಜೆರ್ಸಿ ಧರಿಸಿ ಆಡಿದ ಸ್ಮೃತಿ ಮಂಧಾನ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಸ್ಮೃತಿ ಮಂಧಾನ ಟ್ರೆಂಟ್ ರಾಕೆಟ್ಸ್ ಮತ್ತು ವೆಲ್ಷ್ ಫೈರ್ ವಿರುದ್ಧ ಕ್ರಮವಾಗಿ 55 ಮತ್ತು ಅಜೇಯ 70 ರನ್ ಗಳಿಸಿದರು.

ಇದೇ ವೇಳೆ ಭಾರತದ ಬ್ಯಾಟರ್ ಮಹಿಳಾ ದಿ ಹಂಡ್ರೆಡ್ ಸ್ಪರ್ಧೆಯಲ್ಲಿ 500 ರನ್ ಗಡಿ ದಾಟಿದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿದರು. ತನ್ನ ಮೊದಲ ಋತುವಿನಲ್ಲಿ ಸ್ಮೃತಿ ಮಂಧಾನ ಏಳು ಪಂದ್ಯಗಳಲ್ಲಿ 167 ರನ್ ಗಳಿಸಲು ಯಶಸ್ವಿಯಾದರು ಮತ್ತು 2022ರ ಪಂದ್ಯಾವಳಿಯ ಎಂಟು ಪಂದ್ಯಗಳಲ್ಲಿ 211 ರನ್ ಗಳಿಸಿದ್ದರು.

smriti-mandhana

ಈ ಬಾರಿ ಆಡಿದ ಎರಡು ಪಂದ್ಯಗಳಲ್ಲಿ 125 ರನ್‌ಗಳೊಂದಿಗೆ ಸ್ಮೃತಿ ಮಂಧಾನ 160.25 ಸ್ಟ್ರೈಕ್‌ರೇಟ್ ಕಾಯ್ದುಕೊಂಡು ಪಂದ್ಯಾವಳಿಯಲ್ಲಿ ಪ್ರಸ್ತುತ ಹೆಚ್ಚಿನ ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.

ಸ್ಮೃತಿ ಮಂಧಾನ ಸಹ ಆಟಗಾರ್ತಿ ಡೇನಿಯಲ್ ವ್ಯಾಟ್ ಎರಡು ಪಂದ್ಯಗಳಲ್ಲಿ 47.00ರ ಸರಾಸರಿಯಲ್ಲಿ ಒಂದು ಅರ್ಧಶತಕದೊಂದಿಗೆ 94 ರನ್‌ ಗಳಿಸಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಪಂದ್ಯದ ಕುರಿತು ಹೇಳುವುದಾದರೆ, ವೆಲ್ಷ್ ಫೈರ್ ತಂಡ ತಮ್ಮ ನಿಗದಿತ 100 ಎಸೆತಗಳಲ್ಲಿ 165 ರನ್‌ಗಳ ಸ್ಪರ್ಧಾತ್ಮಕ ರನ್ ಕಲೆ ಹಾಕಿದರು. ಹೇಯ್ಲಿ ಮ್ಯಾಥ್ಯೂಸ್ 171.05 ಸ್ಟ್ರೈಕ್ ರೇಟ್‌ನಲ್ಲಿ 38 ಎಸೆತಗಳಲ್ಲಿ 13 ಬೌಂಡರಿ ಒಳಗೊಂಡ 65 ರನ್ ಗಳಿಸಿ ತಮ್ಮ ತಂಡದ ಪರ ಗರಿಷ್ಠ ರನ್ ಗಳಿಸಿದರು.

ಚೇಸಿಂಗ್ ವೇಳೆ, ಸ್ಮೃತಿ ಮಂಧಾನ 42 ಎಸೆತಗಳಲ್ಲಿ ಎದುರಿಸಿ ಅಜೇಯ 70 ರನ್ ಬಾರಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳನ್ನು ಚಚ್ಚುವ ಮೂಲಕ ತಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದರು.

ಸ್ಮೃತಿ ಮಂಧಾನ ಇನ್ನಿಂಗ್ಸ್ ಜೊತೆಗೆ, ಡ್ಯಾನಿ ವ್ಯಾಟ್ 37 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 67 ರನ್ ಗಳಿಸಿದರು.

ಈ ಇಬ್ಬರ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ, ವೆಲ್ಷ್ ಫೈರ್ ತಂಡದ ಉತ್ಸಾಹಭರಿತ ಬೌಲಿಂಗ್ ಪ್ರದರ್ಶನ ತಮ್ಮ ಮೊತ್ತವನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡಿತು. ಅಲೆಕ್ಸ್ ಗ್ರಿಫಿತ್ಸ್ ಎರಡು ವಿಕೆಟ್ ಪಡೆದರೆ, ಹೇಯ್ಲಿ ಮ್ಯಾಥ್ಯೂಸ್ ಒಂದು ವಿಕೆಟ್ ಪಡೆದರು. ವೆಲ್ಷ್ ಫೈರ್ ತಂಡವು ಪಂದ್ಯವನ್ನು ರೋಚಕ 4 ರನ್‌ಗಳಿಂದ ಗೆದ್ದರು.

ಸದರ್ನ್ ಬ್ರೇವ್ ತಮ್ಮ ಮುಂದಿನ ಪಂದ್ಯವನ್ನು ನಾರ್ದರ್ನ್ ಸೂಪರ್‌ಚಾರ್ಜರ್ಸ್ ವಿರುದ್ಧ ಭಾನುವಾರ, ಆಗಸ್ಟ್ 6ರಂದು ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ಆಡಲಿದೆ. ಅನ್ಯಾ ಶ್ರಬ್‌ಸೋಲ್ ನಾಯಕತ್ವದ ಸದರ್ನ್ ಬ್ರೇವ್ ತಂಡವು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತದೆ.

Story first published: Saturday, August 5, 2023, 19:35 [IST]
Other articles published on Aug 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+