For Quick Alerts
ALLOW NOTIFICATIONS  
For Daily Alerts
 

ICC Women's World Cup: ದೀಪ್ತಿ ಶರ್ಮಾ ಮಿಂಚು: ಟೀಮ್ ಇಂಡಿಯಾ ಶುಭಾರಂಭ

ಗುವಾಹಟಿ: ಭರವಸೆಯ ಆಲ್‌ರೌಂಡರ್‌ ಆಟಗಾರ್ತಿಯಾದ ದೀಪ್ತಿ ಶರ್ಮಾ ಹಾಗೂ ಅಮನ್‌ಜೋತ್‌ ಕೌರ್‌ ಅವರ ಸೊಗಸಾದ ಆಟದ ನೆರವಿನಿಂದ ಟೀಮ್ ಇಂಡಿಯಾ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 59 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಭಾರತದ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಆಸ್ಟ್ರೇಲಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ಸ್ಮೃತಿ ಮಂಧನಾ 8 ರನ್‌ಗಳಿಗೆ ಔಟ್ ಆದರು. ಎರಡನೇ ವಿಕೆಟ್‌ಗೆ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್‌ ಹಾಗೂ ಹರ್ಲಿನ್‌ ಡಯೋಲ್‌ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ವಿಕೆಟ್‌ ಬೀಳದಂತೆ ಕಾಯ್ದುಕೊಂಡು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು.

Women s ODI World Cup 2025 India vs Sri Lanka match report

14 ರನ್‌ಗಳಿಗೆ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ರಾವಲ್‌ ಹಾಗೂ ಹರ್ಲಿನ್‌ ಜೋಡಿ ಆಧಾರವಾಯಿತು. ಈ ಜೋಡಿ 96 ಎಸೆತಗಳಲ್ಲಿ 67 ಎಸೆತಗಳನ್ನು ಬಾರಿಸಿ ತಂಡಕ್ಕೆ ನೆರವಾಯಿತು. ಈ ವೇಳೆ ಪ್ರತಿಕಾ ರಾವಲ್‌ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 37 ರನ್‌ ಸಿಡಿಸಿ ಅಬ್ಬರಿಸಿದರು. ಹರ್ಲಿನ್ ಡಯೋಲ್‌ 64 ಎಸೆತಗಳಲ್ಲಿ 48 ರನ್‌ ಬಾರಿಸಿ ಔಟ್ ಆದರು.

ಪಂದ್ಯದ 26ನೇ ಓವರ್‌ ಬೌಲ್‌ ಮಾಡಲು ಬಂದ ಇನೋಕಾ ರಣವೀರ ಆರ್ಭಟಿಸಿದರು. ಇವರು ಮೊದಲ ಎಸೆತದಲ್ಲಿ ಹರ್ಲಿನ್‌ ಅವರನ್ನು, ಎರಡನೇ ಎಸೆತದಲ್ಲಿ ಜೆಮಿಮಾ ರೋಡ್ರಿಗಸ್‌ರನ್ನು, ಐದನೇ ಎಸೆತದಲ್ಲಿ ನಾಯಕಿ ಹರ್ಮನ್‌ ಪ್ರೀತ್ ಕೌರ್‌ ಅವರಿಗೆ ಪೆವಿಲಿಯನ್ ಹಾದಿ ತೋರಿಸಲು ಸಫಲರಾದರು.

7ನೇ ವಿಕೆಟ್‌ಗೆ ಶತಕದ ಜೊತೆಯಾಟ

124 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಮನ್‌ಜೋತ್ ಕೌರ್ ಹಾಗೂ ದೀಪ್ತಿ ಶರ್ಮಾ ಜೋಡಿ ಆಸರೆಯಾಯಿತು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಶ್ರೀಲಂಕಾ ಬೌಲರ್‌ಗಳು ವಿಫಲರಾದರು. ಶ್ರೀಲಂಕಾ ಫೀಲ್ಡರ್‌ಗಳು ನೀಡಿದ ಜೀವದಾನದ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ಜೊಡಿ ಅಬ್ಬರಿಸಿತು. ಈ ಜೋಡಿ 7ನೇ ವಿಕೆಟ್‌ಗೆ ಶತಕದ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 99 ಎಸೆತಗಳಲ್ಲಿ 103 ರನ್‌ ಬಾರಿಸಿತು. ಅಮನ್‌ಜೋತ್ ಕೌರ್ 5 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 57 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಆಲ್‌ರೌಂಡರ್‌ ದೀಪ್ತಿ ಶರ್ಮಾ 3 ಬೌಂಡರಿ ನೆರವಿನಿಂದ 53 ರನ್‌ ಬಾರಿಸಿದರು. ಕೊನೆಯಲ್ಲಿ ಸ್ನೇಹಾ ರಾಣಾ ಬಿರುಸಿನ ಆಟವನ್ನು ಆಡಿ ಅಜೇಯ 28 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಭಾರತ ಮಳೆ ಬಾಧಿತ ಪಂದ್ಯದಲ್ಲಿ 47 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 269 ರನ್‌ ಬಾರಿಸಿತು.

Women s ODI World Cup 2025 India vs Sri Lanka match report

ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡದ ಪರ ನೀಲಕ್ಷಿಕಾ ಸಿಲ್ವ (35), ಹರ್ಷಿತ ಸಮರವಿಕ್ರಮ (29) ಹಾಗೂ ನಾಯಕಿ ಚಮರಿ ಅಟ್ಟಪಟ್ಟು 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಲಂಕಾ 45.4 ಓವರ್‌ಗಳಲ್ಲಿ 211 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ದೀಪ್ತಿ ಶರ್ಮಾ 54 ರನ್‌ ನೀಡಿ ಮೂರು ವಿಕೆಟ್‌ ಪಡೆದರೆ, ಸ್ನೇಹಾ ರಾಣಾ ಮತ್ತು ಶ್ರೀ ಚರಣಿ ತಲಾ 2 ವಿಕೆಟ್‌ ಕಬಳಿಸಿ ಜಯದಲ್ಲಿ ಮಿಂಚಿದರು.

Story first published: Tuesday, September 30, 2025, 23:48 [IST]
Other articles published on Sep 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+