ಇಂದಿನಿಂದ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್: ಇಲ್ಲಿದೆ ಹರ್ಮನ್ ಪಡೆಯ ವೇಳಾಪಟ್ಟಿ
ದುಬೈನಲ್ಲಿ ಇತ್ತೀಚಿಗೆ ಏಷ್ಯಾ ಕಪ್ ಟಿ20 ಟೂರ್ನಿ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ್ದ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಟೂರ್ನಿ ಮುಗಿದ ಎರಡು ದಿನಗಳ ಅಂತರದಲ್ಲಿ ಭಾರತದಲ್ಲಿ ಮತ್ತೊಂದು ವಿಶ್ವಕಪ್ ನಡೆಯಲಿದೆ. ಇಂದು (ಸೆ.30) ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಹರ್ಮನ್ ಪ್ರೀತ್ ಪಡೆ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಅಂಗಳವನ್ನು ಪ್ರವೇಶಿಸಲಿದೆ.
ಭಾರತದಲ್ಲಿ ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 31 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ 28 ಪಂದ್ಯಗಳು ನಡೆದರೆ, ಸೆಮಿಫೈನಲ್‌ನಲ್ಲಿ 2 ಹಾಗೂ ಫೈನಲ್‌ನಲ್ಲಿ ಪಂದ್ಯ ನಡೆಯಲಿವೆ. ಭಾರತದಲ್ಲಿ 4 ಹಾಗೂ ಶ್ರೀಲಂಕಾದಲ್ಲಿ ಒಂದು ಮೈದಾನದಲ್ಲಿ ಈ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಭಾರತ, ನೆರೆಯ ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದಲ್ಲಿ ಕಾದಾಟವನ್ನು ನಡೆಸಲಿದೆ. ಈ ಪಂದ್ಯಕ್ಕೆ ಗುವಾಹಟಿ ಮೈದಾನ ಸಾಕ್ಷಿಯಾಗಲಿದೆ.

ತಟಸ್ಥ ಸ್ಥಳದಲ್ಲಿ ಪಾಕ್ ಆಟ
ಪಾಕಿಸ್ತಾನ ಭಾರತ ಪ್ರವಾಸವನ್ನು ಕೈಗೊಳ್ಳದೆ ಇರುವುದರಿಂದ ಈ ಬಾರಿ ಈ ತಂಡ ತಟಸ್ಥ ಸ್ಥಳದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ ಈ ಹಿಂದೆಯೆ ಉಭಯ ದೇಶಗಳು ಐಸಿಸಿ ಟೂರ್ನಿಗಳನ್ನು ಆಯೋಜಿಸಿದಲ್ಲಿ, ಉಭಯ ದೇಶಗಳ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಒಂದು ವೇಳೆ ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯದೇ ಇದ್ದರೆ, ಆ ಎರಡೂ ಪಂದ್ಯಗಳಿಗೆ ಭಾರತ ಆತಿಥ್ಯ ನೀಡಲಿದೆ.
ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ನಿರಾಸೆ ಅನುಭವಿಸಿತ್ತು. ಆದರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು.
ಏಕದಿನ ವಿಶ್ವಕಪ್‌ಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಉಮಾ ಛೆಟ್ರಿ, ರೇಣುಕಾ ಸಿಂಗ್ ಠಾಕೂರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ರಾಧಾ ಯಾದವ್, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಅರುಂಧತಿ ರೆಡ್ಡಿ.
ಭಾರತದ ಪಂದ್ಯಗಳ ವಿವರ
ಶ್ರೀಲಂಕಾ ವಿರುದ್ಧ, ಗುವಹಾಟಿ, ಮಧ್ಯಾಹ್ನ 3ಕ್ಕೆ
ಪಾಕಿಸ್ತಾನ ವಿರುದ್ಧ, ಕೊಲಂಬೊ, ಮಧ್ಯಾಹ್ನ 3ಕ್ಕೆ
ದಕ್ಷಿಣ ಆಫ್ರಿಕಾ ವಿರುದ್ಧ, ವಿಶಾಖಪಟ್ಟಣಂ, ಮಧ್ಯಾಹ್ನ 3ಕ್ಕೆ
ಆಸ್ಟ್ರೇಲಿಯಾ ವಿರುದ್ಧ, ವಿಶಾಖಪಟ್ಟಣಂ, ಮಧ್ಯಾಹ್ನ 3ಕ್ಕೆ
ಇಂಗ್ಲೆಂಡ್ ವಿರುದ್ಧ, ಇಂದೋರ್, ಮಧ್ಯಾಹ್ನ 3ಕ್ಕೆ
ನ್ಯೂಜಿಲೆಂಡ್ ವಿರುದ್ಧ, ಮುಂಬೈ, ಮಧ್ಯಾಹ್ನ 3ಕ್ಕೆ
ಬಾಂಗ್ಲಾದೇಶ ವಿರುದ್ಧ, ಮುಂಬೈ, ಮಧ್ಯಾಹ್ನ 3ಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications