WPL 2025: ಎದುರಾಳಿಗಳನ್ನು ಕಾಡಿದ RCB ಬೌಲರ್ಸ್: ಈ ಪಟ್ಟಿಯಲ್ಲಿ ಕನ್ನಡತಿಗೂ ಸ್ಥಾನ
ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಮೆಗಾ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಈಗಾಗಲೇ ಐದು ತಂಡಗಳು ಕಠಿಣ ತಾಲೀಮು ನಡೆಸಿವೆ. ವಿಶ್ವ ಕ್ರಿಕೆಟ್ ರಂಗದಲ್ಲಿ ಹೆಸರು ಮಾಡಿರುವ ಆಟಗಾರ್ತಿಯರು ಈ ಲೀಗ್‌ನಲ್ಲಿ ಆಡುತ್ತಾರೆ. ಅಲ್ಲದೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುತ್ತಾರೆ. ದೇಶದ ಪರ ಆಡುವಾಗ ಎದುರಾಳಿಗಳಂತೆ ಕಾಣುವ ಆಟಗಾರ್ತಿಯರು, ಒಂದೇ ತಂಡದ ಪರ ಆಡುವಾಗ ಹೊಂದಾಣಿಕೆಯಿಂದ ಆಡುತ್ತಾರೆ. ಈ ಲೀಗ್‌ನ ವಿಶೇಷವೇ ಅದು.
ಸಾಮಾನ್ಯವಾಗಿ ಟಿ20 ಕ್ರಿಕೆಟ್ ಅಂದರೆ ಅಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿರುತ್ತದೆ. ಈ ವೇಳೆ ಇವರ ಆರ್ಭಟಕ್ಕೆ ಬ್ರೇಕ್ ಹಾಕಲು ತಂಡಗಳು ಬಲಿಷ್ಠ ಬೌಲಿಂಗ್ ಲೈನ್ ಅಪ್ ಹೊಂದಿರುತ್ತವೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಈ ಟೂರ್ನಿಗೆ ಸಿದ್ಧತೆ ನಡೆಸಿದೆ. ಈ ಟೂರ್ನಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಆರ್‌ಸಿಬಿ ಮತ್ತೊಮ್ಮೆ ಕಪ್ ಗೆಲುವಿನ ಕನಸು ಕಾಣುತ್ತಿದೆ. ಈ ಕನಸು ನನಸಾಗಬೇಕಾದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳು ಹಿಂದಿನ ಆವೃತ್ತಿಗಳಲ್ಲಿ ನೀಡಿದ ಪ್ರದರ್ಶನವನ್ನೇ ನೀಡಬೇಕಾಗುತ್ತದೆ. ಹಾಗಿದ್ದರೆ ಒಟ್ಟಾರೆ ಮಹಿಳಾ ಲೀಗ್‌ನಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಸ್
ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಶ್ರೇಯಾಂಕಾ ಪಾಟೀಲ್ ಅವರಿಗೆ ಅಗ್ರ ಸ್ಥಾನ. ಕನ್ನಡತಿ ಶ್ರೇಯಾಂಕಾ ಆರ್‌ಸಿಬಿ ಪರ ಆಡಿದ 15 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದಾರೆ. ಈ ವೇಳೆ ಇವರ 8.51ರ ಅಮೋಘ ಎಕಾನಮಿಯನ್ನು ಹೊಂದಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇದೇ ಪಟ್ಟಿಯಲ್ಲಿ ಎದ್ದು ಕಾಣುವ ಇನ್ನೊಂದು ಹೆಸರು ಭಾರತದ ಪ್ರತಿಭಾನ್ವಿತ ಆಟಗಾರ್ತಿ ಆಶಾ ಶೋಭನಾ. ಇವರು ಸಹ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿಎದುರಾಳಿ ಬ್ಯಾಟರ್‌ಗಳನ್ನು ಕಾಡುವಲ್ಲಿ ಸಫಲರಾಗಿದ್ದಾರೆ. ಇವರು ಆಡಿದ 15 ಪಂದ್ಯಗಳಲ್ಲಿ 7.60 ಎಕನಾಮಿಯಲ್ಲಿ 17 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇವರು ಈ ಟೂರ್ನಿಯಲ್ಲಿ ಟೂರ್ನಿಯಲ್ಲಿ ಒಮ್ಮೆ ಐದು ವಿಕೆಟ್ ಪಡೆದಿದ್ದಾರೆ.
ವಿದೇಶಿ ಆಟಗಾರರು ಕಮಾಲ್
ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ್ತಿ ಸೋಫಿ ಮೊಲಿನೆಕ್ಸ್ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿ ಮಿಂಚಿದ್ದಾರೆ. ಇವರು ಕರಾರುವಾಕ್ ದಾಳಿ ಎದುರಾಳಿ ಬ್ಯಾಟರ್‌ಗಳ ಚಿತ್ತವನ್ನು ಕೆಡಿಸಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ, 12 ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಈ ವೇಳೆ ಇವರು 7.31 ಎಕನಾಮಿ ಹೊಂದಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಆಟಗಾರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲ್ಲಿಸಾ ಪೆರ್ರಿಗೂ ಸ್ಥಾನ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡಕ್ಕೆ ಆಧಾರವಾಗುವ ಸ್ಟಾರ್ ಪ್ಲೇಯರ್. ಇವರು ಆಡಿದ 17 ಪಂದ್ಯಗಳಲ್ಲಿ 11 ವಿಕೆಟ್ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇವರು ಅಗತ್ಯ ವಿದ್ದಾಗ ವಿಕೆಟ್ ಪಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ನ್ಯೂಜಿಲೆಂಡ್ ತಂಡದ 35 ವರ್ಷದ ಆಟಗಾರ್ತಿ ಸೋಫಿಯಾ ಡಿವೈನ್ ಮಹಿಳಾ ಲೀಗ್‌ನಲ್ಲಿ 18 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ಈ ವೇಳೆ 9 ವಿಕೆಟ್ ಪಡೆದ ಹಿರಿಮೆ ಇವರದ್ದಾಗಿದೆ. ಇವರು ಸಹ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೆರವಾಗಬಲ್ಲ ಪ್ಲೇಯರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications