For Quick Alerts
ALLOW NOTIFICATIONS  
For Daily Alerts
 

WPL 2025: ಟಾಪ್‌ 5 ರನ್‌ ಕಲೆ ಹಾಕಿದ ಆಟಗಾರ್ತಿಯರ ಪಟ್ಟಿ: RCB ಸ್ಟಾರ್‌ಗೂ ಇದೆ ಸ್ಥಾನ

ಇನ್ನೇನು ಕೆಲವೇ ದಿನಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಐದು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ ಎಲ್ಲರ ಗಮನ ಸೆಳೆದಿದೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿಸಹ ಆರ್‌ಸಿಬಿ ಬಲಿಷ್ಠ ತಂಡವನ್ನು ಕಟ್ಟಿದ್ದು, ಮತ್ತೊಮ್ಮೆ ಕಪ್‌ ಗೆಲ್ಲುವ ಕನಸು ಕಾಣುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸದ್ದು ಮಾಡಿದ ಐವರು ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

ಟಿ20 ಕ್ರಿಕೆಟ್‌ ಅಂದರೆ ಅಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿ ಇರುತ್ತದೆ. ಈ ಟೂರ್ನಿಯಲ್ಲಿ ಬ್ಯಾಟರ್‌ಗಳು ಅಬ್ಬರಕ್ಕೆ ಬೌಲರ್‌ಗಳು ಕಂಗಾಲಾಗಿದ್ದಾರೆ. ಡೆಲ್ಲಿ ತಂಡದ ಪರ ಆಡುವ ಮೆಗ್ ಲ್ಯಾನಿಂಗ್‌ ಡಬ್ಲ್ಯುಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಆಡಿದ 18 ಪಂದ್ಯಗಳಲ್ಲಿ 42,25ರ ಸರಾಸರಿಯಲ್ಲಿ 676 ರನ್‌ ಸಿಡಿಸಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ.

Women s Premier League Top 5 Batters Who Dominated the WPL with Stellar Performances

ಆರ್‌ಸಿಬಿ ಪ್ಲೇಯರ್‌ಗೂ ಸ್ಥಾನ

ಈ ಪಟ್ಟಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ್ತಿಗೂ ಸ್ಥಾನವಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್‌ ಎಲಿಸಾ ಪೆರ್ರಿ ಲೀಗ್‌ನಲ್ಲಿ ಆರ್‌ಸಿಬಿ ಪರ ಆಡುತ್ತಾರೆ. ಇವರು ಆಡಿದ 17 ಪಂದ್ಯಗಳಲ್ಲಿ 54.54ರ ಸರಾಸರಿಯಲ್ಲಿ 600 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಸ್ಥಿರ ಪ್ರದರ್ಶನ ನೀಡಿ ಹೆಚ್ಚಿನ ಸರಾಸರಿಯನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಆಲ್‌ರೌಂಡರ್‌ ಪೆರ್ರಿಗೂ ಸ್ಥಾನ.

ಭಾರತದ ಪರ ಶಫಾಲಿ ಅಬ್ಬರ

ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಶಫಾಲಿ ವರ್ಮಾ ಅವರಿಗೆ ಸಲ್ಲುತ್ತದೆ. ಇವರು ಆಡಿದ 18 ಪಂದ್ಯಗಳಲ್ಲಿ 124ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದ್ದಾರೆ. ಈ ವೇಳೆ 5 ಅರ್ಧಶತಕ ಸಿಡಿಸಿದ್ದು, ಇವರ ಖಾತೆಯಲ್ಲಿ 561 ರನ್‌ಗಳಿವೆ. ಇನ್ನು ಶಫಾಲಿ ಬೆಸ್ಟ್‌ ಸ್ಕೋರ್‌ 84 ರನ್‌ ಆಗಿದೆ.

Women s Premier League Top 5 Batters Who Dominated the WPL with Stellar Performances

ಟೀಮ್ ಇಂಡಿಯಾವನ್ನು ಬಹು ದಿನಗಳ ಕಾಲ ಮುನ್ನಡೆಸಿದ ಹೆಗ್ಗಳಿಕೆಯನ್ನು ಹೊಂದಿರುವ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್‌ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಮುಂಬೈ ಇಂಡಿಯನ್ಸ್‌ ಪರ ಬ್ಯಾಟ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇವರು ಆಡಿದ 17 ಪಂದ್ಯಗಳಲ್ಲಿ 549 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 45.75 ಆಗಿದ್ದು, ಡಬ್ಲ್ಯುಪಿಎಲ್‌ನಲ್ಲಿ 5 ಅರ್ಧಶತಕ ಬಾರಿಸಿದ್ದಾರೆ.

ಇನ್ನು ಇದೇ ಪಟ್ಟಿಯಲ್ಲಿ ಸ್ಥಾನ ಪಡೆದ ಇನ್ನೊಬ್ಬ ಮುಂಬೈ ತಂಡದ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್. ಇವರು ತಮ್ಮ ಕ್ಲಾಸಿಕ್ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇವರು ಆಡಿದ 19 ಪಂದ್ಯಗಳಲ್ಲಿ 504 ರನ್‌ ಸಿಡಿಸಿದ್ದಾರೆ. ಈ ವೇಳೆ ಮೂರು ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.

Story first published: Thursday, February 6, 2025, 10:00 [IST]
Other articles published on Feb 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+