2ನೇ ಆವೃತ್ತಿಯ 2024ರ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಹರಾಜು ಪ್ರಕ್ರಿಯೆಯು ಡಿಸೆಂಬರ್ 9ರಂದು ಮುಂಬೈನಲ್ಲಿ ನಡೆಯಲಿದೆ. ಎಲ್ಲಾ ತಂಡಗಳು ತಮ್ಮ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ನವೆಂಬರ್ 24ರ ಶುಕ್ರವಾರದಂದು ನಿರ್ಧಾರವನ್ನು ಪ್ರಕಟಿಸಿದೆ.

5 ತಂಡಗಳು ಭಾಗವಹಿಸಿದ ಉದ್ಘಾಟನಾ ಋತುವಿನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಆಸಕ್ತಿಯನ್ನು ಮೂಡಿಸಿತ್ತು.
2023ರ ಮಹಿಳಾ ಪ್ರೀಮಿಯರ್ ಲೀಗ್, ದೇಶದ ಮಹಿಳಾ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲು ಗುರುತಿಸಿತು ಮತ್ತು ರೋಮಾಂಚಕ ಟಿ20 ಪಂದ್ಯಾವಳಿಗಾಗಿ ಜಗತ್ತಿನಾದ್ಯಂತದ ಉನ್ನತ ಪ್ರತಿಭೆಗಳನ್ನು ಒಟ್ಟುಗೂಡಿಸಿತು.
2023ರ ಮಾರ್ಚ್ 4ರಿಂದ ಮಾರ್ಚ್ 26ರವರೆಗೆ ನಡೆದ ಟೂರ್ನಿ ಕೇವಲ ಕ್ರಿಕೆಟ್ ಆಗಿರದೆ, ಇದು ಮಹಿಳಾ ಕ್ರೀಡೆಗಳ ಆಚರಣೆಯಾಗಿದೆ. ಕೌಶಲ್ಯ, ತಂಡದ ಕಾರ್ಯ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಿದೆ.
ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ವಿಜಯಶಾಲಿಯಾಗಿ ಹೊರಹೊಮ್ಮಿತು. ಅತ್ಯಂತ ನಿಕಟ ಪೈಪೋಟಿಯುತ ಪಂದ್ಯಗಳ ಸರಣಿಯ ನಂತರ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಮಾರ್ಚ್ 26ರಂದು ನಡೆದ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಮೂರು ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳಿಂದ ಅಮೋಘ ಗೆಲುವು ಸಾಧಿಸಿತು. ಟೂರ್ನಿಯುದ್ದಕ್ಕೂ ತಂಡದ ಸ್ಥಿರ ಪ್ರದರ್ಶನಕ್ಕೆ ಚಾಂಪಿಯನ್ ಪಟ್ಟ ಸಾಕ್ಷಿಯಾಗಿದೆ.
ಮುಂಬೈ ಇಂಡಿಯನ್ಸ್‌ನ ಹೇಲಿ ಮ್ಯಾಥ್ಯೂಸ್ ತಮ್ಮ ಅತ್ಯುತ್ತಮ ಆಲ್‌ರೌಂಡ್ ಕೊಡುಗೆಗಳಿಗಾಗಿ ಅತ್ಯಂತ ಮೌಲ್ಯಯುತ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
ಮತ್ತೊಂದು ಪ್ರಮುಖ ಅಂಶವೆಂದರೆ, ಸೋಫಿ ಡಿವೈನ್ ಅವರು ಟಾಟಾ ಸಫಾರಿ ಕಾರನ್ನು ಹ್ಯಾರಿಯರ್ ಸೂಪರ್ ಸ್ಟ್ರೈಕರ್ ಪ್ರಶಸ್ತಿಗಾಗಿ ಗೆದ್ದರು. ಇದು ಅವರ ಅಸಾಧಾರಣ ಬ್ಯಾಟಿಂಗ್ ಪರಾಕ್ರಮವನ್ನು ಗುರುತಿಸಿದ ಪ್ರಶಸ್ತಿಯಾಗಿದೆ.
ಈ ಪಂದ್ಯಾವಳಿಗೂ ಮುನ್ನ ನಡೆದ ಹರಾಜು ಪ್ರಕ್ರಿಯೆ ಪಂದ್ಯಗಳಂತೆಯೇ ರೋಮಾಂಚನಕಾರಿಯಾಗಿತ್ತು. ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರು 3.4 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು.
ಇತರ ಗಮನಾರ್ಹ ಬಿಡ್‌ನಲ್ಲಿ ಅಶ್ಲೇಗ್ ಗಾರ್ಡ್ನರ್, ನ್ಯಾಟ್ ಸ್ಕೈವರ್-ಬ್ರಂಟ್ ಮತ್ತು ಬೆತ್ ಮೂನಿ ಸೇರಿದ್ದಾರೆ. ಇವರು ದೊಡ್ಡ ಮೊತ್ತಕ್ಕೆ ಸಾಗರೋತ್ತರ ಒಪ್ಪಂದಗಳಲ್ಲಿ ಸೇರಿದ್ದಾರೆ.
ಐದು ವುಮೆನ್ಸ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಈ ಕೆಳಗಿನ ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಉಳಿಸಿಕೊಂಡಿರುವ ಆಟಗಾರ್ತಿಯರು: ಆಲಿಸ್ ಕ್ಯಾಪ್ಸಿ, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸ್ಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಾಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತನಿಯಾ ಭಾಟಿಯಾ, ಟಿಟಾಸ್ ಸಾಧು.
ಬಿಡುಗಡೆಯಾದ ಆಟಗಾರ್ತಿಯರು: ಅಪರ್ಣಾ ಮೊಂಡಲ್, ಜಸಿಯಾ ಅಖ್ತರ್, ತಾರಾ ನಾರ್ರಿಸ್.
ಉಳಿಸಿಕೊಂಡಿರುವ ಆಟಗಾರ್ತಿಯರು: ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ದಯಾಳನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ್ ರಾಣಾ, ತನುಜಾ ಕನ್ವರ್.
ಬಿಡುಗಡೆಯಾದ ಆಟಗಾರ್ತಿಯರು: ಅನ್ನಾಬೆಲ್ ಸದರ್ಲ್ಯಾಂಡ್, ಅಶ್ವನಿ ಕುಮಾರಿ, ಜಾರ್ಜಿಯಾ ವೇರ್ಹ್ಯಾಮ್, ಹರ್ಲಿ ಗಾಲಾ, ಕಿಮ್ ಗಾರ್ತ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಪರುಣಿಕಾ ಸಿಸೋಡಿಯಾ, ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲೆ, ಸುಷ್ಮಾ ವರ್ಮಾ.
ಉಳಿಸಿಕೊಂಡಿರುವ ಆಟಗಾರ್ತಿಯರು: ಅಮನ್ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಹುಮೈರಾ ಕಾಜಿ, ಇಸಾಬೆಲ್ಲಾ ವಾಂಗ್, ಜಿಂತಿಮಣಿ ಕಲಿತಾ, ನಟಾಲಿ ಸ್ಕೈವರ್, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ.
ಬಿಡುಗಡೆಯಾದ ಆಟಗಾರ್ತಿಯರು: ಧಾರಾ ಗುಜ್ಜರ್, ಹೀದರ್ ಗ್ರಹಾಂ, ನೀಲಂ ಬಿಷ್ಟ್, ಸೋನಮ್ ಯಾದವ್.
ಉಳಿಸಿಕೊಂಡಿರುವ ಆಟಗಾರ್ತಿಯರು: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್,
ಬಿಡುಗಡೆಯಾದ ಆಟಗಾರ್ತಿಯರು: ಡೇನೆ ವ್ಯಾನ್ ನೀಕರ್ಕ್, ಎರಿನ್ ಬರ್ನ್ಸ್, ಕೋಮಲ್ ಝಂಜಾದ್, ಮೇಗನ್ ಶುಟ್, ಪೂನಂ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್.
ಉಳಿಸಿಕೊಂಡಿರುವ ಆಟಗಾರ್ತಿಯರು: ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್.
ಬಿಡುಗಡೆಯಾದ ಆಟಗಾರ್ತಿಯರು: ದೇವಿಕಾ ವೈದ್ಯ, ಶಬ್ನಿಮ್ ಇಸ್ಮಾಯಿಲ್, ಶಿವಾಲಿ ಶಿಂಧೆ, ಸಿಮ್ರಾನ್ ಶೇಖ್