2024ರ ಮಹಿಳಾ ಪ್ರೀಮಿಯರ್ ಲೀಗ್ (WPL) ಎರಡನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯು ಫೆಬ್ರವರಿ 23ರಿಂದ ಮಾರ್ಚ್ 17ರವರೆಗೆ ನಡೆಯಲಿದೆ. ಫೈನಲ್ ಪಂದ್ಯವನ್ನು ಮಾರ್ಚ್ 17ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಡಲು ನಿಗದಿಪಡಿಸಲಾಗಿದೆ.
ಈ ವರ್ಷದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದರೆ, ಫೈನಲ್ ಪಂದ್ಯ ಮಾರ್ಚ್ 17ರಂದು ದೆಹಲಿಯಲ್ಲಿ ಆಯೋಜಿಸಲಾಗಿದೆ.

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿವೆ. ಮಾರ್ಚ್ 15ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಕಳೆದ ಬಾರಿಯ ಆವೃತ್ತಿಯಂತಯೇ, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತವರು ಮತ್ತು ಎದುರಾಳಿ ನೆಲದ ಫಾರ್ಮ್ಯಾಟ್ ಇರುವುದಿಲ್ಲ. ಆದರೆ, ಮುಂಬರುವ ಋತುವಿನಲ್ಲಿ ದೆಹಲಿ ಮತ್ತು ಬೆಂಗಳೂರು ನಗರಗಳಲ್ಲಿ ಪಂದ್ಯಾವಳಿಯನ್ನು ಆಡಲಾಗುತ್ತದೆ.
ಮಹಿಳಾ ಪ್ರೀಮಿಯರ್ ಲೀಗ್‌ನ 2024ರ ಋತುವು ಕಳೆದ ವರ್ಷದಂತೆ ಅದೇ ಸ್ವರೂಪವನ್ನು ಅನುಸರಿಸುತ್ತದೆ. ಲೀಗ್ ಹಂತದಲ್ಲಿ ಅಗ್ರ ಮೂರು ತಂಡಗಳು ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯುತ್ತವೆ.

ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಮಾರ್ಚ್ 15ರಂದು ಎಲಿಮಿನೇಟರ್‌ನಲ್ಲಿ ಸೆಣಸಾಡಲಿವೆ.
ಕಳೆದ ವರ್ಷ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಋತುವಿನಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ 345 ರನ್ ಗಳಿಸುವ ಮೂಲಕ ಪಂದ್ಯಾವಳಿಯ ಅಗ್ರ ರನ್ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಪಡೆದರು. ಇನ್ನು ಮುಂಬೈ ಇಂಡಿಯನ್ಸ್‌ನ ಹೇಲಿ ಮ್ಯಾಥ್ಯೂಸ್ 10 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್ ಗೆದ್ದರು.
ಫೆಬ್ರವರಿ 23 - ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು
ಫೆಬ್ರವರಿ 24 - ಆರ್‌ಸಿಬಿ vs ಯುಪಿ ವಾರಿಯರ್ಜ್, ಬೆಂಗಳೂರು
ಫೆಬ್ರವರಿ 25 - ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್, ಬೆಂಗಳೂರು
ಫೆಬ್ರವರಿ 26 - ಯುಪಿ ವಾರಿಯರ್ಜ್ vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು
ಫೆಬ್ರವರಿ 27 - ಆರ್‌ಸಿಬಿ vs ಗುಜರಾತ್ ಜೈಂಟ್ಸ್, ಬೆಂಗಳೂರು
ಫೆಬ್ರವರಿ 28 - ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್, ಬೆಂಗಳೂರು
ಫೆಬ್ರವರಿ 29 - ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು
ಮಾರ್ಚ್ 1 - ಯುಪಿ ವಾರಿಯರ್ಜ್ vs ಗುಜರಾತ್ ಜೈಂಟ್ಸ್, ಬೆಂಗಳೂರು
ಮಾರ್ಚ್ 2 - ಆರ್‌ಸಿಬಿ vs ಮುಂಬೈ ಇಂಡಿಯನ್ಸ್, ಬೆಂಗಳೂರು
ಮಾರ್ಚ್ 3 - ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು
ಮಾರ್ಚ್ 4 - ಯುಪಿ ವಾರಿಯರ್ಜ್ vs ಆರ್‌ಸಿಬಿ, ಬೆಂಗಳೂರು
ಮಾರ್ಚ್ 5 - ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, ದೆಹಲಿ
ಮಾರ್ಚ್ 6 - ಗುಜರಾತ್ ಜೈಂಟ್ಸ್ vs ಆರ್‌ಸಿಬಿ, ದೆಹಲಿ
ಮಾರ್ಚ್ 7 - ಯುಪಿ ವಾರಿಯರ್ಜ್ vs ಮುಂಬೈ ಇಂಡಿಯನ್ಸ್, ದೆಹಲಿ
ಮಾರ್ಚ್ 8 - ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಜ್, ದೆಹಲಿ
ಮಾರ್ಚ್ 9 - ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್, ದೆಹಲಿ
ಮಾರ್ಚ್ 10 - ಡೆಲ್ಲಿ ಕ್ಯಾಪಿಟಲ್ಸ್ vs ಆರ್‌ಸಿಬಿ, ದೆಹಲಿ
ಮಾರ್ಚ್ 11 - ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಜ್, ದೆಹಲಿ
ಮಾರ್ಚ್ 12 - ಆರ್‌ಸಿಬಿ vs ಮುಂಬೈ ಇಂಡಿಯನ್ಸ್, ದೆಹಲಿ
ಮಾರ್ಚ್ 13 - ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್, ದೆಹಲಿ
ಮಾರ್ಚ್ 15 - ಎಲಿಮಿನೇಟರ್ ಪಂದ್ಯ, ದೆಹಲಿ
ಮಾರ್ಚ್ 17 - ಫೈನಲ್ ಪಂದ್ಯ, ದೆಹಲಿ