Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೂಪರ್‌ನೋವಾಸ್ ಸೋಲಿಸಿ ಟ್ರೋಫಿ ಗೆದ್ದ ಟ್ರಯಲ್‌ಬ್ಲೇಸರ್ಸ್

Womens T20 Challenge 2020 Final: Trailblazers beat Supernovas

ಶಾರ್ಜಾ: ಶಾರ್ಜಾ ಸ್ಟೇಡಿಯಂನಲ್ಲಿ ಸೋಮವಾರ (ನವೆಂಬರ್ 9) ನಡೆದ ವಿಮೆನ್ಸ್ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಸೂಪರ್‌ನೋವಾಸ್ ತಂಡವನ್ನು 16 ರನ್‌ನಿಂದ ಸೋಲಿಸಿರುವ ಟ್ರಯಲ್‌ಬ್ಲೇಸರ್ಸ್ ಚಾಂಪಿಯನ್ಸ್ ಪಟ್ಟಕ್ಕೇರಿದೆ. ನಾಯಕಿ ಸ್ಮೃತಿ ಮಂಧಾನ ಅರ್ಧ ಶತಕ, ಸಲ್ಮಾ ಖತುನ್ ಮಾರಕ ಬೌಲಿಂಗ್ ದಾಳಿಯಿಂದ ಬ್ಲೇಸರ್ಸ್ ಗೆಲುವನ್ನು ಸಂಭ್ರಮಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟ್ರಯಲ್‌ಬ್ಲೇಸರ್ಸ್, ದಿಯಾಂಡ್ರಾ ಡಾಟಿನ್ 20, ಸ್ಮೃತಿ ಮಂಧಾನ 68 (49 ಎಸೆತ), ರಿಚಾ ಘೋಷ್ 10, ದೀಪ್ತಿ ಶರ್ಮಾ 9, ಹರ್ಲೀನ್ ಡಿಯೋಲ್ 4 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 118 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಸೂಪರ್‌ನೋವಾಸ್‌ನಿಂದ ಚಮರಿ ಅತಾಪಟು 6, ಜೆಮಿಮಾ ರೋಡ್ರಿಗಸ್ 14, ಹರ್ಮನ್‌ಪ್ರೀತ್ ಕೌರ್ 30, ಶಶಿಕಲಾ ಸಿರಿವರ್ಧನೆ, ಅನುಜಾ ಪಾಟಿಲ್ 8, ರಾಧಾ ಯಾದವ್ 4 ರನ್‌ ಸೇರಿಸಿದರು. ನೋವಾಸ್ 20 ಓವರ್‌ಗೆ 7 ವಿಕೆಟ್ ಕಳೆದು 102 ರನ್ ಗಳಿಸಿತು.

ಟ್ರಯಲ್‌ಬ್ಲೇಸರ್ಸ್ ಇನ್ನಿಂಗ್ಸ್‌ನಲ್ಲಿ ಸೂಪರ್‌ನೋವಾಸ್‌ನ ರಾಧಾ ಯಾದವ್ 16 ರನ್‌ಗೆ 5, ಪೂನಂ ಯಾದವ್ 1, ಶಶಿಕಲಾ ಸಿರಿವರ್ಧನೆ 1 ವಿಕೆಟ್ ಪಡೆದರೆ, ನೋವಾಸ್ ಇನ್ನಿಂಗ್ಸ್‌ನಲ್ಲಿ ಸೋಫಿ ಎಕ್ಲೆಸ್ಟೋನ್ 1, ದೀಪ್ತಿ ಶರ್ಮಾ 2, ಸಲ್ಮಾ ಖತುನ್ 18ಕ್ಕೆ 3 ವಿಕೆಟ್ ಪಡೆದು ಮಿಂಚಿದರು.

Story first published: Monday, November 9, 2020, 23:08 [IST]
Other articles published on Nov 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+