
ಶಾರ್ಜಾ: ವಿಮೆನ್ಸ್ ಟಿ20 ಚಾಲೆಂಜ್ 2020ಯ ಫೈನಲ್ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ. ಟ್ರಯಲ್‌ಬ್ಲೇಸರ್ಸ್ ಮತ್ತು ಸೂಪರ್‌ನೋವಾಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ. ಇತ್ತಂಡಗಳು ಟ್ರೋಫಿಗಾಗಿ ಜಿದ್ದಾಜಿದ್ದಿ ಸ್ಪರ್ಧೆ ನಡೆಸಲಿವೆ.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ವೆಲಾಸಿಟಿ ಗೆದ್ದಿತ್ತು. ದ್ವಿತೀಯ ಪಂದ್ಯದಲ್ಲಿ ಟ್ರಯಲ್‌ಬ್ಲೇಸರ್ಸ್ 9 ವಿಕೆಟ್ ಸುಲಭ ಜಯ ಗಳಿಸಿತ್ತು. ಮೂರನೇ ಪಂದ್ಯದಲ್ಲಿ ಸೂಪರ್ ನೋವಾಸ್ 2 ರನ್ ರೋಚಕ ಗೆಲುವು ಕಂಡಿತ್ತು. ನೆಟ್ ರನ್ ರೇಟ್ ಆಧಾರದಲ್ಲಿ ಟ್ರಯಲ್‌ಬ್ಲೇಸರ್ಸ್ ಮತ್ತು ಸೂಪರ್‌ನೋವಾಸ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಪಂದ್ಯ 7.30 pmಗೆ ಆರಂಭವಾಗಲಿದೆ.
ಟ್ರಯಲ್‌ಬ್ಲೇಸರ್ಸ್ ಸಂಭಾವ್ಯ ತಂಡ: ಸ್ಮೃತಿ ಮಂದಾನಾ (ಸಿ), ದೀಪ್ತಿ ಶರ್ಮಾ, ಜೂಲಾನ್ ಗೋಸ್ವಾಮಿ, ರಿಚಾ ಘೋಷ್ (ವಿಕೆ), ರಾಜೇಶ್ವರಿ ಗಾಯಕ್ವಾಡ್, ದಿಯಾಂಡ್ರಾ ಡೊಟಿನ್, ನಟ್ಟಕನ್ ಚಾಂಟಮ್, ಹರ್ಲೀನ್ ಡಿಯೋಲ್, ಡಿ ಹೇಮಲತಾ, ಸೋಫಿ ಎಕ್ಲೆಸ್ಟೋನ್, ಸಲ್ಮಾ ಖತುನ್.
ಸೂಪರ್‌ನೋವಾಸ್ ಸಂಭಾವ್ಯ ತಂಡ: ಹರ್ಮನ್‌ಪ್ರೀತ್ ಕೌರ್ (ಸಿ) ಚಮತಿ ಅಥಾಪತ್ತು, ಪ್ರಿಯಾ ಪುನಿಯಾ, ಜೆಮಿಮಾ ರೊಡ್ರಿಗಸ್, ಶಶಿಕಲಾ ಸಿರಿವರ್ಧನೆ, ಪೂಜಾ ವಸ್ತ್ರಕರ್, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೆ), ಶಕೇಲಾ ಸೆಲ್ಮನ್, ಅಯಾಬೊಂಗಾ ಖಕಾ, ಪೂನಂ ಯಾದವ್.