
ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ವಿಮೆನ್ಸ್ ಟಿ20 ಚಾಲೆಂಜ್ ಟುರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಪ್ರಶಸ್ತಿ ಸುತ್ತಿನಲ್ಲಿ ಟ್ರಯಲ್‌ಬ್ಲೇಸರ್ಸ್ ಮತ್ತು ಸೂಪರ್‌ನೋವಾಸ್ ತಂಡಗಳು ಕಾದಾಡಲಿವೆ. ಟಾಸ್ ಗೆದ್ದಿರುವ ಸೂಪರ್‌ನೋವಾಸ್ ಬೌಲಿಂಗ್ ಆಯ್ದುಕೊಂಡಿದೆ.
ಆರಂಭಿಕ ಪಂದ್ಯದಲ್ಲಿ ವೆಲಾಸಿಟಿ 5 ವಿಕೆಟ್‌ನಿಂದ ಗೆದ್ದಿತ್ತು. ದ್ವಿತೀಯ ಪಂದ್ಯದಲ್ಲಿ ಟ್ರಯಲ್‌ಬ್ಲೇಸರ್ಸ್ 9 ವಿಕೆಟ್ ಸುಲಭ ಜಯ ಗಳಿಸಿತ್ತು. ಮೂರನೇ ಪಂದ್ಯದಲ್ಲಿ ಸೂಪರ್ ನೋವಾಸ್ 2 ರನ್ ರೋಚಕ ಗೆಲುವು ಕಂಡಿತ್ತು. ಆದರೆ ನೆಟ್ ರನ್ ರೇಟ್ ಆಧಾರದಲ್ಲಿ ಟ್ರಯಲ್‌ಬ್ಲೇಸರ್ಸ್ ಮತ್ತು ಸೂಪರ್‌ನೋವಾಸ್ ಪ್ರಶಸ್ತಿ ಸುತ್ತಿನಲ್ಲಿ ಸ್ಪರ್ಧಿಸುತ್ತಿವೆ.
ಟ್ರಯಲ್‌ಬ್ಲೇಸರ್ಸ್ ಪ್ಲೇಯಿಂಗ್ XI: ದಿಯಾಂಡ್ರಾ ಡೊಟಿನ್, ಸ್ಮೃತಿ ಮಂಧಾನ (ಸಿ), ರಿಚಾ ಘೋಷ್ (ವಿಕೆ), ನುಝಾಟ್ ಪರ್ವೀನ್, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಸೋಫಿ ಎಕ್ಲೆಸ್ಟೋನ್, ನಟ್ಟಕನ್ ಚಾಂಟಮ್, ಸಲ್ಮಾ ಖತುನ್, ರಾಜೇಶ್ವರಿ ಗಾಯಕ್ವಾಡ್, ಜೂಲನ್ ಗೋಸ್ವಾಮಿ.
ಸೂಪರ್‌ನೋವಾಸ್ ಪ್ಲೇಯಿಂಗ್ XI: ಚಮರಿ ಅಥಾಪಟು, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ಶಶಿಕಲಾ ಸಿರಿವರ್ಧನೆ, ಅನುಜಾ ಪಾಟೀಲ್, ರಾಧಾ ಯಾದವ್, ಪೂಜಾ ವಸ್ತ್ರಕರ್, ಶಕೇರಾ ಸೆಲ್ಮನ್, ತಾನಿಯಾ ಭಾಟಿಯಾ (ವಿಕೆ), ಪೂನಂ ಯಾದವ್, ಅಯಬೊಂಗಾ ಖಕಾ.