For Quick Alerts
ALLOW NOTIFICATIONS  
For Daily Alerts
 

ವಿಮೆನ್ಸ್ ಟಿ20: ಟ್ರಯಲ್‌ಬ್ಲೇಸರ್ಸ್-ಸೂಪರ್ ನೋವಾಸ್ ಮುಖಾಮುಖಿ

Womens T20 Challenge 2020: Trailblazers vs Supernovas, Preview

ಶಾರ್ಜಾ: ವಿಮೆನ್ಸ್ ಟಿ20 ಚಾಲೆಂಜ್ ತೃತೀಯ ಪಂದ್ಯದಲ್ಲಿ ಟ್ರಯಲ್‌ಬ್ಲೇಸರ್ಸ್ ಮತ್ತು ಸೂಪರ್ ನೋವಾಸ್ ತಂಡಗಳು ಮುಖಾಮುಖಿಯಾಗಲಿವೆ. ನವೆಂಬರ್ 7ರ ಶನಿವಾರ ಈ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. 7.30 pmಗೆ ಪಂದ್ಯ ನಡೆಯಲಿದ್ದು, 7 pmಗೆ ಟಾಸ್ ನಡೆಯಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಸೂಪರ್ ನೋವಾಸ್ ವಿರುದ್ಧ ವೆಲಾಸಿಟಿ 5 ವಿಕೆಟ್‌ನಿಂದ ಗೆದ್ದಿತ್ತು. ದ್ವಿತೀಯ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಟ್ರಯಲ್‌ಬ್ಲೇಸರ್ಸ್ 9 ವಿಕೆಟ್‌ಗಳ ಗೆಲುವಾಚರಿಸಿತ್ತು. ಇಂದಿನ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಉಳಿಯುವ ತಂಡಗಳು ಫೈನಲ್‌ನಲ್ಲಿ ಸ್ಪರ್ಧಿಸಲಿವೆ. ಫೈನಲ್‌ ಪಂದ್ಯ ನವೆಂಬರ್ 9ರಂದು ನಡೆಯಲಿದೆ.

ಸೂಪರ್ ನೋವಾಸ್ ಸಂಭಾವ್ಯ ತಂಡ: ಪ್ರಿಯಾ ಪುನಿಯಾ, ಚಮರಿ ಅತಪಟ್ಟು, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಶಶಿಕಲಾ ಸಿರಿವರ್ಧನೆ, ತಾನಿಯಾ ಭಾಟಿಯಾ, ರಾಧಾ ಯಾದವ್, ಪೂನಂ ಯಾದವ್, ಅರುಂಧತಿ ರೆಡ್ಡಿ, ಶಕೇರಾ ಸೆಲ್ಮನ್ ಮತ್ತು ಅಯಬೊಂಗಾ ಖಕಾ.

ಟ್ರಯಲ್‌ಬ್ಲೇಸರ್ಸ್ ಸಂಭಾವ್ಯ ತಂಡ: ಸ್ಮೃತಿ ಮಂದಾನಾ (ನಾಯಕಿ), ದಿಯಾಂಡ್ರಾ ಡೊಟಿನ್, ರಿಚಾ ಘೋಷ್, ಹಾರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದಯಾಲನ್ ಹೇಮಲತಾ, ನಟ್ಟಕನ್ ಚಾಂಟಮ್, ಸೋಫಿ ಎಕ್ಲೆಸ್ಟೋನ್, ಸಲ್ಮಾ ಖತುನ್, ರಾಜೇಶ್ವರಿ ಗಾಯಕ್ವಾಡ್ ಮತ್ತು ಜೂಲಾನ್ ಗೋಸ್ವಾಮಿ.

Story first published: Saturday, November 7, 2020, 10:42 [IST]
Other articles published on Nov 7, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+