ವಿಮೆನ್ಸ್ ಟಿ20 ಚಾಲೆಂಜ್: ವೆಲಾಸಿಟಿ vs ಟ್ರೈಬ್ಲೇಜರ್ಸ್, ಸಂಭಾವ್ಯ ತಂಡಗಳು

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ವಿಮೆನ್ಸ್ ಟಿ20 ಚಾಲೆಂಜ್ ಎರಡನೇ ಪಂದ್ಯದಲ್ಲಿ ವೆಲಾಸಿಟಿ ಮತ್ತು ಟ್ರೈಬ್ಲೇಜರ್ಸ್ ತಂಡಗಳು ಕಾದಾಡಲಿವೆ. ಮೊದಲ ಪಂದ್ಯದಲ್ಲಿ ಸೂಪರ್ ನೋವಾಸ್ ವಿರುದ್ಧ ವೆಲಾಸಿಟಿ 5 ವಿಕೆಟ್ ರೋಚಕ ಗೆಲುವನ್ನಾಚರಿಸಿತ್ತು. ಇಂದಿನ ಪಂದ್ಯದಲ್ಲೂ ವೆಲಾಸಿಟಿ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಬುಧವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಸೂಪರ್ ನೋವಾಸ್ ಪರವಾಗಿ ಚಮರಿ ಅತಪಟು 44, ನಾಯಕಿ ಹರ್ಮನ್‌ಪ್ರೀತ್ ಕೌರ್ 31, ಶಕಿಕಲಾ ಸಿರಿವರ್ಧನೆ 18 ರನ್ ಬಾರಿಸಿದ್ದರೆ (126 ಒಟ್ಟು ರನ್), ವೆಲಾಸಿಟಿ ಪರ ಕನ್ನಡತಿ ವೇದಾ ಕೃಷ್ಣಮೂರ್ತಿ 29, ಸುಷ್ಮಾ ವರ್ಮಾ 34, ಸುನೆ ಲೂಸ್ 37 ಬಾರಿಸಿ (129 ಒಟ್ಟು ರನ್ ) ಗೆಲುವಿಗೆ ಕಾರಣರಾಗಿದ್ದರು.
ಟ್ರೈಬ್ಲೇಸರ್ಸ್ ಸಂಭಾವ್ಯ ತಂಡ: ಸ್ಮೃತಿ ಮಂಧಾನ (ಸಿ), ದೀಪ್ತಿ ಶರ್ಮಾ, ರಿಚಾ ಘೋಷ್, ನುಝಾತ್ ಪರ್ವೀನ್, ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜೂಲನ್ ಗೋಸ್ವಾಮಿ, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ನಥಾಕನ್ ಚಾಂಥಮ್, ದಿಯಾಂಡ್ರಾ ಡೊಟ್ಟಿನ್.
ವೆಲಾಸಿಟಿ ಸಂಭಾವ್ಯ ತಂಡ: ಮಿಥಾಲಿ ರಾಜ್, ಶಫಾಲಿ ವರ್ಮಾ, ವೇದಾ ಕೃಷ್ಣಮೂರ್ತಿ, ಸುಷ್ಮಾ ವರ್ಮಾ, ಏಕ್ತಾ ಬಿಶ್ತ್, ಶಿಖಾ ಪಾಂಡೆ, ದೇವಿಕಾ ವೈದ್ಯ, ಲೇ ಕಾಸ್ಪೆರೆಕ್, ಡೇನಿಯಲ್ ವ್ಯಾಟ್, ಸುನೆ ಲೂಸ್, ಜಹನಾರಾ ಆಲಂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications