Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಮೆನ್ಸ್ ಟಿ20 ಚಾಲೆಂಜ್: ಸೂಪರ್‌ನೋವಾಸ್ vs ವೆಲಾಸಿಟಿ, ಟಾಸ್ ವರದಿ ಹಾಗೂ ಪ್ಲೇಯಿಂಗ್ 11

womens t20 challenge: Supernovas vs Velocity toss report and playing 11

ಇಂದಿನಿಂದ ವಿಮೆನ್ಸ್ ಟಿ20 ಚಾಲೆಂಜ್ ಆರಂಭವಾಗಿದೆ. ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್‌ನೊವಾಸ್ ಹಾಗೂ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡಗಳು ಹೋರಾಟಕ್ಕೆ ಇಳಿದಿವೆ. ಟಾಸ್ ಗೆದ್ದಿರುವ ವೆಲಾಸಿಟಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಈ ಚುಟುಕು ಟೂರ್ನಿಯಲ್ಲಿ ಮೂರು ತಂಡಗಳು ಭಾಗಿಯಾಗುತ್ತಿದೆ. ಲೀಗ್ ಹಂತದಲ್ಲಿ ಮೂರು ಪಂದ್ಯಗಳು ನಡೆಯಲಿದ್ದು ಟಾಪ್ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಹೋರಾಟವನ್ನು ನಡೆಸಲಿದೆ. ನವೆಂಬರ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ವಿಮೆನ್ಸ್ ಟಿ20 ಚಾಲೆಂಜ್‌ನ ಎಲ್ಲಾ ಪಂದ್ಯಗಳು ಕೂಡ ಶಾರ್ಜಾ ಅಂಗಳದಲ್ಲಿ ನಡೆಯಲಿದೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ತಂಡ ಹಿಂದಿನ ಎರಡು ಆವೃತ್ತಿಗಳಲ್ಲೂ ಚಾಂಪಿಯನ್ ತಂಡ ಎನಿಸಿಕೊಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಮಿಥಾಲಿ ರಾಜ್ ತಂಡಕ್ಕಿಂತ ಬಲಿಷ್ಠವಾಗಿರುವಂತೆ ಸೂಪರ್‌ನೋವಾಸ್ ತಂಡ ಕಾಣಿಸುತ್ತಿದೆ.

ಸೂಪರ್‌ನೋವಾಸ್ ಪ್ಲೇಯಿಂಗ್ 11: ಪ್ರಿಯಾ ಪುನಿಯಾ, ಚಮರಿ ಅಥಾಪತ್ತು, ಜೆಮಿಮಾ ರೊಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಶಶಿಕಲಾ ಸಿರಿವರ್ಧನೆ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಕರ್, ರಾಧಾ ಯಾದವ್, ಪೂನಂ ಯಾದವ್, ಶಕೇರಾ ಸೆಲ್ಮನ್, ಅಯಬೊಂಗಾ ಖಕಾ

ವೆಲಾಸಿಟಿ, ಪ್ಲೇಯಿಂಗ್ 11: ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್, ಮಿಥಾಲಿ ರಾಜ್ (ನಾಯಕಿ), ವೇದ ಕೃಷ್ಣಮೂರ್ತಿ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಸುನೆ ಲೂಸ್, ಮನಾಲಿ ದಕ್ಷಿಣಿ, ಶಿಖಾ ಪಾಂಡೆ, ಏಕ್ತಾ ಬಿಶ್ತ್, ಲೇ ಕಾಸ್ಪೆರೆಕ್, ಜಹನಾರಾ ಆಲಂ

Story first published: Thursday, November 5, 2020, 9:42 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+