ಮಹಿಳೆಯರ ಚಾಲೆಂಜರ್ಸ್ ಟಿ 20 ಕ್ರಿಕೆಟ್: ಇಂಡಿಯಾ ರೆಡ್ ತಂಡಕ್ಕೆ ಗೆಲುವು

ಬೆಂಗಳೂರು, ಆಗಸ್ಟ್ 14: ಮಹಿಳೆಯರ ಟಿ 20 ಚಾಲೆಂಜರ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ನಾಯಕಿ ದೀಪ್ತಿ ಶರ್ಮಾ ಅವರ ಆಲ್‌ರೌಂಡ್ ಆಟದ ನೆರವಿನಿಂದ ಇಂಡಿಯಾ ವಿಮೆನ್ ರೆಡ್ ತಂಡವು, ಬ್ಲೂ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ.
ಆಲೂರು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಮೆನ್ ರೆಡ್ ತಂಡ ಬೌಲಿಂಗ್ ಆಯ್ದುಕೊಂಡಿತು.
ಮಳೆಯಿಂದ ತೇವಗೊಂಡಿದ್ದ ಪಿಚ್‌ನಲ್ಲಿ ರನ್ ಗಳಿಸಲು ಬ್ಲೂ ತಂಡ ಪರದಾಡಿತು. ನಾಯಕಿ ಮಿಥಾಲಿ ರಾಜ್ 51 (51) ಮಾತ್ರ ಹೋರಾಟದ ಆಟ ಪ್ರದರ್ಶಿಸಿದರು.
ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 100 ರನ್ ಪೇರಿಸಲು ಮಾತ್ರ ಬ್ಲೂ ತಂಡ ಶಕ್ತವಾಯಿತು.
ಗುರಿ ಬೆನ್ನತ್ತಿದ ರೆಡ್ ತಂಡ 16.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 79 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಆಗ ತಂಡಕ್ಕೆ 21 ಎಸೆತಗಳಲ್ಲಿ 22 ರನ್ ಬೇಕಿತ್ತು.
ಆದರೆ, ಪಂದ್ಯ ಮತ್ತೆ ಆರಂಭಿಸಲು ಸಾಧ್ಯವಾಗದ ಕಾರಣ ವಿಜೆಡಿ (ಜಯದೇವನ್ ಮೆಥಡ್) ನಿಯಮದಡಿ ರೆಡ್ ತಂಡವನ್ನು ವಿಜಯಿ ಎಂದು ಪ್ರಕಟಿಸಲಾಯಿತು.
ವಿಜೆಡಿ ಪ್ರಕಾರ ರೆಡ್ ತಂಡವು 72 ರನ್ ಗಳಿಸಿರಬೇಕಿತ್ತು. ಆದರೆ, ಅದು ಏಳು ರನ್‌ಗಳಿಂದ ಮುಂದಿತ್ತು.
ಸಂಕ್ಷಿಪ್ತ ಸ್ಕೋರ್
ಇಂಡಿಯಾ ವಿಮೆನ್ ಬ್ಲೂ: 100/8 (20) ಮಿಥಾಲಿ ರಾಜ್ 51, ವಿ. ವನಿತಾ 12, ದಯಾಳನ್ ಹೇಮಲತಾ 11, ಶಾಂತಿ ಕುಮಾರಿ 4/1, ಟಿ.ಪಿ. ಕನ್ವೇರ್ 16/2, ದೀಪ್ತಿ ಶರ್ಮಾ 15/2
ಇಂಡಿಯಾ ವಿಮೆನ್ ರೆಡ್: 79/3 (16.3) ದೀಪ್ತಿ ಶರ್ಮಾ 45*, ಮೋನಾ ಮೆಶ್ರಮ್ 14*, ಮಾನ್ಸಿ ಜೋಶಿ 11/1, ರಾಧಾ ಯಾದವ್ 12/1
ಫಲಿತಾಂಶ: ಇಂಡಿಯಾ ವಿಮೆನ್ ರೆಡ್ ತಂಡಕ್ಕೆ ಏಳು ವಿಕೆಟ್ ಜಯ
ಮುಂದಿನ ಪಂದ್ಯ: ಇಂಡಿಯಾ ವಿಮೆನ್ ಬ್ಲೂ ಮತ್ತು ಇಂಡಿಯಾ ವಿಮೆನ್ ಗ್ರೀನ್. ಸಂಜೆ 4.30
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications