ಚಾಲೆಂಜರ್ಸ್ ಟ್ರೋಫಿ ಟಿ20: ಸೇಡು ತೀರಿಸಿಕೊಂಡ ಇಂಡಿಯಾ ಬ್ಲೂ

ಆಲೂರು, ಆಗಸ್ಟ್ 17: ಮಹಿಳೆಯರ ಚಾಲೆಂಜರ್ಸ್ ಟ್ರೋಫಿ ಟಿ20 ಸರಣಿಯಲ್ಲಿ ಇಂಡಿಯಾ ವಿಮೆನ್ ಬ್ಲೂ ತಂಡ ಮೊದಲ ಗೆಲುವು ದಾಖಲಿಸಿದೆ.
ಆಲೂರು ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬ್ಲೂ ತಂಡವು ರೆಡ್ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತು. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬ್ಲೂ ತಂಡಕ್ಕೆ ರೆಡ್ ತಂಡ ಆಘಾತ ನೀಡಿತ್ತು.
ಟಾಸ್ ಗೆದ್ದ ಬ್ಲೂ ತಂಡದ ನಾಯಕಿ ಮಿಥಾಲಿ ರಾಜ್ ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅವರ ಸರಿಯೆನ್ನುವಂತೆ ಬೌಲರ್‌ಗಳು ಉತ್ತಮ ದಾಳಿ ಸಂಘಟಿಸಿದರು.
20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 84 ರನ್‌ಗಳನ್ನು ಮಾತ್ರ ಗಳಿಸಲು ರೆಡ್ ತಂಡಕ್ಕೆ ಸಾಧ್ಯವಾಯಿತು.
ಸುಲಭದ ಗುರಿ ಬೆನ್ನತ್ತಿದ ಬ್ಲೂ ತಂಡವು ಆರಂಭದಲ್ಲಿಯೇ ದಯಾಳನ್ ಹೇಮಲತಾ ವಿಕೆಟ್ ಕಳೆದುಕೊಂಡರೂ ವಿ. ವನಿತಾ ಅರ್ಧ ಶತಕದ ನೆರವಿನಿಂದ ಗುರಿ ಮುಟ್ಟಿತು.
ಸಂಕ್ಷಿಪ್ತ ಸ್ಕೋರ್
ಇಂಡಿಯಾ ವಿಮೆನ್ ರೆಡ್: 84/7 (20) ಪೂನಂ ರಾವತ್ 28, ದೀಪ್ತಿ ಶರ್ಮಾ 14, ಅನುಜಾ ಪಾಟೀಲ್ 15/2, ದಯಾಳನ್ ಹೇಮಲತಾ 11/2, ಮಾನ್ಸಿ ಜೋಶಿ 22/2
ಇಂಡಿಯಾ ವಿಮೆನ್ ಬ್ಲೂ: 86/2 (17.4) ವಿ. ವನಿತಾ 51, ಮಿಥಾಲಿ ರಾಜ್ 23*, ಶಿಖಾ ಪಾಂಡೆ 11/1, ದೀಪ್ತಿ ಶರ್ಮಾ 16/1
ಫಲಿತಾಂಶ: ಇಂಡಿಯಾ ವಿಮೆನ್ ಬ್ಲೂ ತಂಡಕ್ಕೆ ಎಂಟು ವಿಕೆಟ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications