Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಚಾಲೆಂಜರ್ಸ್ ಟ್ರೋಫಿ: ಕೇವಲ 46 ರನ್‌ಗೆ ಗ್ರೀನ್ ತಂಡ ಆಲೌಟ್

womens t20 challengers trophy India women blue vs india women green 5th match report

ಆಲೂರು, ಆಗಸ್ಟ್ 18: ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಚಾಲೆಂಜರ್ಸ್ ಟ್ರೋಫಿಯ ಐದನೇ ಪಂದ್ಯದಲ್ಲಿ ಅನುಜಾ ಪಾಟೀಲ್ ಮತ್ತು ಪ್ರೀತಿ ಬೋಸ್ ಅವರ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಇಂಡಿಯಾ ವಿಮೆನ್ ಬ್ಲೂ ತಂಡವು ವಿಮೆನ್ ಗ್ರೀನ್ ತಂಡದ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗ್ರೀನ್ ತಂಡ ಕೇವಲ 46 ರನ್‌ಗಳಿಗೆ ಆಲೌಟ್ ಆಯಿತು. ಸುಲಭ ಗುರಿಯನ್ನು ಬ್ಲೂ ತಂಡ 9.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.

ಗ್ರೀನ್ ತಂಡದ ಪರ ಸಿ. ಪ್ರತ್ಯೂಷಾ ಮತ್ತು ಸುಷ್ಮಾ ವರ್ಮಾ ಹೊರತುಪಡಿಸಿ ಯಾವ ಆಟಗಾರ್ತಿಯೂ ಎರಡಂಕಿ ಗಡಿ ದಾಟಲಿಲ್ಲ. ನಾಲ್ವರು ಆಟಗಾರ್ತಿಯರು ಸೊನ್ನೆ ಸುತ್ತಿದರು.

ಟಿ20 ಪಂದ್ಯವನ್ನು ಟೆಸ್ಟ್ ಮಾದರಿಯಲ್ಲಿ ಆಡಿದ ಗ್ರೀನ್ ತಂಡದ ಆಟಗಾರ್ತಿಯರು ರನ್ ಪೇರಿಸಲು ಪರದಾಡಿದರು. ಅನುಜಾ ಪಾಟೀಲ್ 4 ಓವರ್‌ಗಳಲ್ಲಿ 4 ರನ್ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದರೆ, ಪ್ರೀತಿ ಬೀಸ್ 1.4. ಓವರ್‌ಗಳಲ್ಲಿ ಕೇವಲ 1 ರನ್ ನೀಡಿ 3 ವಿಕೆಟ್ ಕಿತ್ತರು.

ಇದು ಮಹಿಳಾ ಟಿ20 ಚಾಲೆಂಜರ್ಸ್ ಟ್ರೋಫಿಯಲ್ಲಿ ದಾಖಲಾದ ಅತಿ ಕಡಿಮೆ ಮೊತ್ತವಾಗಿದೆ. ಬ್ಲೂ ತಂಡ ವಿ. ವನಿತಾ ಮತ್ತು ದಯಾಳನ್ ಹೇಮಲತಾ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ವಿಕೆಟ್ ಕೀಪರ್ ತಾನಿಯಾ ಭಾಟಿಯಾ 27 ಎಸೆತಗಳಲ್ಲಿ 29 ರನ್ ಗಳಿಸಿ ತಂಡದ ಗೆಲುವನ್ನು ಸುಗಮಗೊಳಿಸಿದರು, ಅವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳಿದ್ದವು.

ಸಂಕ್ಷಿಪ್ತ ಸ್ಕೋರ್
ಇಂಡಿಯಾ ವಿಮೆನ್ ಗ್ರೀನ್: 46/10 (19.4) ಸಿ. ಪ್ರತ್ಯೂಷಾ 18, ಸುಷ್ಮಾ ವರ್ಮಾ 14, ಅನುಜಾ ಪಾಟೀಲ್ 4/3, ಪ್ರೀತಿ ಬೋಸ್ 1/3

ಇಂಡಿಯಾ ವಿಮೆನ್ ಬ್ಲೂ: 47/2 (9.5) ದಯಾಳನ್ ಹೇಮಲತಾ 13, ತಾನಿಯಾ ಭಾಟಿಯಾ 29*, ರಾಜೇಶ್ವರಿ ಗಾಯಕ್‌ವಾಡ್ 15/2

ಫಲಿತಾಂಶ: ಇಂಡಿಯಾ ವಿಮೆನ್ ಬ್ಲೂ ತಂಡಕ್ಕೆ ಎಂಟು ವಿಕೆಟ್ ಜಯ

Story first published: Saturday, August 18, 2018, 12:54 [IST]
Other articles published on Aug 18, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+