Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup 2026: ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್, ಈ ಪ್ಲೇಯರ್‌ಗೆ ಸ್ಥಾನ

ಇಂಗ್ಲೆಂಡ್‌ನಲ್ಲಿ ಸದ್ಯ 10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ ನಡೆಯುತ್ತಿದೆ. ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಲ್ಲದೆ ಭರ್ಜರಿ ನೆಟ್‌ ರನ್‌ ರೇಟ್‌ ಹೊಂದಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ಟೂರ್ನಿಯಲ್ಲಿ ಹಲವು ಪಂದ್ಯಗಳು ಬಾಕಿ ಉಳಿದಿವೆ. ಚಾಂಪಿಯನ್‌ ಪಟ್ಟದ ಮೇಲೆ ಕಣ್ಣು ನೆಟ್ಟಿರುವ ಟೀಮ್ ಇಂಡಿಯಾಕ್ಕೆ ಆರಂಭದಲ್ಲೇ ದೊಡ್ಡ ಪೆಟ್ಟು ಬಿದ್ದಿದೆ.

ನೆದರ್‌ಲ್ಯಾಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್‌, ಅವರು ಟಿ20 ವಿಶ್ವಕಪ್‌ನಿಂದ ಹೊರ ನಡೆದಿದ್ದಾರೆ. ಇವರ ಬದಲಿಗೆ ಬಿಸಿಸಿಐ ಬದಲಿ ಆಟಗಾರ್ತಿಯನ್ನು ಘೋಷಣೆ ಮಾಡಿದೆ.

Women s T20 World Cup 2026

ಟೀಮ್ ಇಂಡಿಯಾ ಪರ ಪ್ರಸಕ್ತ ವಿಶ್ವಕಪ್‌ನಲ್ಲಿ ಶ್ರೇಯಾಂಕಾ ಪಾಟೀಲ್ ಭರವಸೆ ಮೂಡಿಸಿದ ಆಟಗಾರ್ತಿ. ಇವರು ಪಾಕ್‌ ಹಾಗೂ ನೆದರ್‌ಲ್ಯಾಂಡ್ಸ್‌ ವಿರುದ್ಧ ಭರ್ಜರಿ ದಾಳಿ ನಡೆಸಿದ್ದರು. ಎರಡನೇ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್‌ ಫೀಲ್ಡಿಂಗ್ ಮಾಡುವಾಗ ಪಾದಕ್ಕೆ ಗಾಯವಾಯಿತು. ಪರಿಣಾಮ ಎದ್ದು ನಿಲ್ಲದ ಸ್ಥಿತಿ. ಹೀಗಾಗಿ ಇವರನ್ನು ಕರೆದುಕೊಂಡು ಹೋಗಲು ಮೈದಾನಕ್ಕೆ ಸ್ಟ್ರೆಕ್ಟರ್‌ ಬರಬೇಕಾಯಿತು. ಇದೇ ಗಾಯದ ಕಾರಣದಿಂದ ಇವರು ಬಿಗ್‌ ಇವೇಂಟ್‌ನಿಂದ ದೂರ ಸರಿದಿದ್ದಾರೆ. ಶ್ರೇಯಾಂಕಾ ಅವರ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಅವರು ಅದ್ಭುತವಾಗಿ ಬೌಲಿಂಗ್ ಮಾಡುವುದು ಮಾತ್ರವಲ್ಲದೆ ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದಾರೆ.

ಯಾರಿಗೆ ಸ್ಥಾನ?

ಶ್ರೇಯಾಂಕಾ ಪಾಟೀಲ್‌ ಅವರಿಗೆ ಬದಲಿ ಆಟಗಾರ್ತಿಯಾಗಿ ಅನ್‌ಕ್ಯಾಪ್ಡ್ ಆಟಗಾರ್ತಿ ಪ್ರೇಮಾ ರಾವತ್‌ ತಂಡದಲ್ಲಿ ಸ್ಥಾನ ಪಡೆಯುವುದು ದಟ್ಟವಾಗಿದೆ. 24 ವರ್ಷದ ಪ್ರೇಮಾ ರಾವತ್ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದಕ್ಕಾಗಿಯೇ ಅವರನ್ನು ಬದಲಿಯಾಗಿ ಸೇರಿಸಿಕೊಳ್ಳಲಾಗಿದೆ. ಪ್ರೇಮಾ ಉತ್ತರಾಖಂಡ್ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ ಮತ್ತು ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಪ್ಲೇಯಿಂಗ್‌ ಇಲೆವೆನ್‌ ಯಾರಿಗೆ ಸಿಗಲಿದೆ ಸ್ಥಾನ?

ಶ್ರೇಯಾಂಕ ಪಾಟೀಲ್ ಅವರ ಬದಲಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ. ಈಗಾಗಲೇ ತಂಡದಲ್ಲಿ ಸ್ಥಾನ ಪಡೆದಿರುವ ರಾಧಾ ಯಾದವ್ ಹಾಗೂ ಪ್ರೇಮಾ ರಾವತ್ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಪ್ಲೇಯಿಂಗ್ ಹನ್ನೊಂದರಲ್ಲಿ ಯಾರನ್ನು ಸೇರಿಸಬೇಕೆಂದು ನಿರ್ಧರಿಸಲಿದ್ದಾರೆ. ಟೀಮ್ ಇಂಡಿಯಾ ತನ್ನ ಲೀಗ್‌ ಹಂತದ ಮುಂದಿನ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜೂನ್ 21 ರಂದು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಇದು ಲೀಗ್ ಹಂತದ ಭಾರತದ ಪ್ರಮುಖ ಪಂದ್ಯವಾಗಿರಲಿದ್ದು, ಟೀಮ್ ಇಂಡಿಯಾ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರುವ ಕನಸು ಕಾಣುತ್ತಿದೆ.

Story first published: Friday, June 19, 2026, 8:56 [IST]
Other articles published on Jun 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+