Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಭಾರತೀಯ ವನಿತೆಯರ ಆಟಕ್ಕೆ ಮನಸೋತ ಬ್ರೇಟ್‌ ಲೀ

womens t20 world cup: brett lee praise team india

ಮಹಿಳೆಯರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರು ಭರ್ಜರಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಆಟಗಾರ್ತಿಯರು ಸೆಮಿ ಫೈನಲ್ ಪ್ರವೇಶವನ್ನು ಪಡೆದಿದ್ದಾರೆ. ಟೀಮ್ ಇಂಡಿಯಾ ಆಟಗಾರ್ತಿಯ ಪ್ರದರ್ಶನಕ್ಕೆ ಆಸ್ಟ್ರೇಲಿಯಾದ ಮಾಜಿ ಸ್ಪೀಡ್ ಸ್ಟಾರ್ ಬ್ರೇಟ್‌ಲಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಟೀಮ್ ಇಂಡಿಯಾ ಯುವ ಆಟಗಾರ್ತಿ ಶೆಫಾಲಿ ವರ್ಮ ಆಟದ ಬಗ್ಗೆಯೂ ಬ್ರೆಟ್‌ಲೀ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಟೀಮ್ ಇಂಡಿಯಾದ ಅಗ್ರ ಕ್ರಮಾಂಕದಲ್ಲಿ ಶೆಫಾಲಿ ಅದ್ಭುತವಾಗಿ ಆಡುತ್ತಿದ್ದಾರೆ. ಭಯರಹಿತವಾಗಿ ಆಡುವ ಶೆಫಾಲಿ ಟೀಮ್ ಇಂಡಿಯಾಗೆ ಶಕ್ತಿಯನ್ನು ತುಂಬುತ್ತಾರೆ ಆಕೆಯ ಆಟಸೋಡಲು ಸೊಗಸು ಎಂದಿದ್ದಾರೆ ಬ್ರೇಟ್‌ ಲೀ.

ಟೀಮ್ ಇಂಡಿಯಾ ವನಿತೆಯರು ಈವರೆಗೆ ಫೈನಲ್‌ ಹಂತಕ್ಕೇರದಿರಬಹುದು. ಆದರೆ ಈ ಬಾರಿ ಟೀಮ್ ಇಂಡಿಯಾ ಆಟಗಾರ್ತಿಯರು ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅನೇಕ ಮ್ಯಾಚ್ ವಿನ್ನರ್‌ಗಳು ಟೀಮ್ ಇಂಡಿಯಾದಲ್ಲಿದ್ದಾರೆ ಎಂಬ ಮಾತನ್ನು ಬ್ರೆಟ್ ಲೀ ಹೇಳಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಸಮತೋಲನದಿಂದ ಕೂಡಿದೆ. ಶಫಾಲಿ ವರ್ಮಾ ಮತ್ತು ಪೂನಮ್ ಪಾಂಡೆಯಂತಾ ಆಟಗಾರ್ತಿಯರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ನಿರಂತರವಾಗಿ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಇದು ಭಾರತದ ನಾಯಕಿ ಹರ್ಮನ್ ಪ್ರೀತ್‌ಗೆ ದೊಡ್ಡ ಬಲವನ್ನು ನೀಡುತ್ತದೆ ಎಂದಿದ್ದಾರೆ ಬ್ರೇಟ್ ಲೀ.

ಗ್ರೂಪ್‌ 'ಎ' ನಲ್ಲಿರುವ ಎರಡು ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಈಗಾಗಲೆ ಸೆಮಿ ಫೈನಲ್ ಪ್ರವೇಶವನ್ನು ಪಡೆದುಕೊಂಡಿದೆ. ಎರಡೂ ತಂಡಗಳು ಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳಾಗಿದ್ದು ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತದ ವನಿತೆಯರಿಗೆ ಉತ್ಸಹ ಹೆಚ್ಚುವಂತೆವ ಮಾಡಿದೆ.

Story first published: Tuesday, March 3, 2020, 18:44 [IST]
Other articles published on Mar 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+