Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup: ನೆದರ್‌ಲ್ಯಾಂಡ್‌ ವಿರುದ್ಧ ಅಬ್ಬರಿಸಿದ ಟೀಮ್ ಇಂಡಿಯಾ

ಲೀಡ್ಸ್‌: ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (74) ಹಾಗೂ ಆಲ್‌ರೌಂಡರ್‌ ಶಫಾಲಿ ವರ್ಮಾ (55 ರನ್‌, 3 ವಿಕೆಟ್‌) ಇವರುಗಳ ಭರ್ಜರಿ ಆಟದ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ 95 ರನ್‌ಗಳಿಂದ ನೆದರ್‌ಲ್ಯಾಂಡ್‌ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ.

ಟೀಮ್ ಇಂಡಿಯಾ ನೀಡಿದ್ದ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನೆದರ್‌ಲ್ಯಾಂಡ್‌ ತಂಡದ ಆಟಗಾರ್ತಿಯರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಟಾಪ್‌ ಆರ್ಡರ್ ಬ್ಯಾಟರ್‌ಗಳು ಹೀದರ್ ಸೀಗರ್ಸ್ 21, ಫೆಬೆ ಮೊಲ್ಕೆನ್‌ಬೋರ್ 15, ಬಾಬೆಟ್ಟೆ ಡಿ ಲೀಡೆ 28, ಸ್ಟೆರೆ ಕಾಲಿಸ್ 18 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ ಎಲ್ಲ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ನೆದರ್‌ಲ್ಯಾಂಡ್‌ 114 ರನ್‌ಳಿಗೆ ಆಲೌಟ್ ಆಯಿತು.

Women s T20 World Cup

ಟೀಮ್ ಇಂಡಿಯಾದ ಪರ ನಂದಿನಿ ಶರ್ಮಾ 2, ಆಲ್‌ರೌಂಡರ್ ಶಫಾಲಿ ವರ್ಮಾ 3, ಶ್ರೀ ಚರಣಿ 4 ವಿಕೆಟ್‌ ಪಡೆದು ಗೆಲುವಿನಲ್ಲಿ ಮಿಂಚಿದರು.

ಶತಕದ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಾಖಲೆಯ ಮೊತ್ತ ಕಲೆಹಾಕಿತು. ಆರಂಭಿಕರಾದ ಶಫಾಲಿ ವರ್ಮಾ (55 ರನ್, 38 ಎಸೆತ) ಮತ್ತು ಉಪನಾಯಕಿ ಸ್ಮೃತಿ ಮಂಧಾನ (74 ರನ್, 47 ಎಸೆತ, 11 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್‌ಗೆ 11.4 ಓವರ್‌ಗಳಲ್ಲಿ 115 ರನ್‌ಗಳ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು.

Women s T20 World Cup

ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ 19 ರನ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ 12 ರನ್ ಗಳಿಸಿದರೆ, ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 209 ರನ್ ಸಿಡಿಸಿತು.

ಈ ಪಂದ್ಯದಲ್ಲಿ ದಾಖಲಾದ ಪ್ರಮುಖ ದಾಖಲೆಗಳು

  • ಟಿ20 ಕ್ರಿಕೆಟ್‌ನಲ್ಲಿ ಭಾರತ 5ನೇ ಬಾರಿಗೆ 200ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದೆ.
  • ವಿಶ್ವಕಪ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ 200ರ ಗಡಿ ದಾಟಿದೆ.
  • ಪ್ರಸಕ್ತ ವಿಶ್ವಕಪ್‌ನಲ್ಲಿ ದಾಖಲಾದ ಎರಡನೇ 200+ ಮೊತ್ತ ಇದಾಗಿದೆ.
  • ನೆದರ್‌ಲ್ಯಾಂಡ್‌ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ, ಸ್ಮೃತಿ ಮಂಧಾನಾ ಅರ್ಧಶತಕ ಬಾರಿಸುತ್ತಿದ್ದಂತೆ, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸ್ಮೃತಿ ಮಂಧಾನ ಅವರ ಆರನೇ ಬಾರಿ ಐವತ್ತು ಪ್ಲಸ್ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ಇವರು ಹರ್ಮನ್‌ ಪ್ರೀತ್ ಕೌರ್‌ ಹಾಗೂ ಮಿಥಾಲಿ ರಾಜ್‌ ಸಾಧನೆಯನ್ನು ಹಿಂದಿಕ್ಕಿದರು.
  • ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಇನ್ನಿಂಗ್ಸ್‌ಗಳ ಪಟ್ಟಿಯಲ್ಲಿ ಮಂಧಾನಾ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸೂಜಿ ಬೇಟ್ಸ್ ಮೊದಲ ಸ್ಥಾನದಲ್ಲಿದ್ದಾರೆ.

ಭಾರತಕ್ಕೆ ಅಗ್ರಸ್ಥಾನ

ನೆದರ್‌ಲ್ಯಾಂಡ್‌ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಹರ್ಮನ್‌ಪ್ರೀತ್ ಕೌರ್ ಪಡೆ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ 4 ಅಂಕಗಳನ್ನು ಕಲೆ ಹಾಕಿದ್ದು, 3.975 ನೆಟ್‌ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಇದೇ ಗುಂಪಿನಲ್ಲಿರುವ ಆಸ್ಟ್ರೇಲಿಯಾ ಆಡಿದ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 3.875 ರನ್‌ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

Story first published: Wednesday, June 17, 2026, 23:45 [IST]
Other articles published on Jun 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+