Womens t20 world cup: ಭಾರತಕ್ಕೆ ಗೆಲ್ಲು 150 ರನ್‌ಗಳ ಗುರಿ ನೀಡಿದ ಪಾಕ್ ವನಿತೆಯರು!

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಪಾಕಿಸ್ತಾನ ತಂಡ ಭಾರತದಕ್ಕೆ 150 ರನ್‌ಗಳ ಸವಾಲಿನ ಗುರಿ ನಿಗದಿಪಡಿಸಿದೆ. ಟೀಮ್ ಇಂಡಿಯಾದ ಆಟಗಾರ್ತಿಯರು ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಯಾವ ರೀತಿಯಾಗಿ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆರಂಭದಲ್ಲಿಯೇ ಯಶಸ್ಸು ಗಳಿಸಲು ಸಾಧ್ಯವಾಯಿತು. ರಾಧಾ ಯಾದವ್ ಜವೇರಿಯಾ ಖಾನ್ ಅವರನ್ನು ಪಂದ್ಯದ ಎರಡನೇ ಓವರ್‌ನಲ್ಲಿಯೇ ಪೆವಿಲಿಯಮ್‌ಗೆ ಅಟ್ಟಿದರು. ಬಳಿಕ ತಂಡದ ಮೊತ್ತ 42 ರನ್‌ಗಳಾಗಿದ್ದಾಗ ಪಾಕಿಸ್ತಾನ ತನ್ನ ಎರಡನೇ ವಿಕೆಟ್ ಕಳೆದುಕೊಂಡರೆ 43 ರನ್‌ಗೆ ಮೂರನೇ ವಿಕೆಟ್ ಕಳೆದುಕೊಂಡಿತು. ಈ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತ್ತು. 12.1 ಓವರ್‌ಗಳಾದಾದ ಪಾಕಿಸ್ತಾನ 68 ರನ್‌ಗೆ 4ನೇ ವಿಕೆಟ್ ಕಳೆದುಕೊಂಡಿತು.
ಆದರೆ ಬಳಿಕ ನಾಯಕಿ ಮರೂಫ್ ಹಾಗೂ ಆಯೆಶಾ ನಸೀಮ್ ಅದ್ಭುತ ಜೊತೆಯಾಟ ನೀಡುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 82 ರನ್‌ಗಳನ್ನು ಕಲೆಹಾಕಿದ್ದು ತಂಡದ ಮೊತ್ತ 149ಕ್ಕೆ ತಂದು ನಿಲ್ಲಿಸಿದರು. ಹೀಗಾಗಿ ಭಾರತ ತಂಡಕ್ಕೆ 150 ರನ್‌ಗಳನ್ನು ಗಳಿಸುವ ಸವಾಲು ಮುಂದಿದೆ. ನಾಯಕಿ ಮರೂಫ್ 55 ಎಸೆತಗಳಲ್ಲಿ 68 ರನ್‌ಗಳಿಸಿದರೆ ಆಯೆಶಾ ನಸೀಮ್ 43 ರನ್‌ಗಳಿಸಿದರು.
ಭಾರತ ಆಡುವ ಬಳಗ: ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ರೇಣುಕಾ ಠಾಕೂರ್ ಸಿಂಗ್
ಬೆಂಚ್: ಸ್ಮೃತಿ ಮಂಧಾನ, ಶಿಖಾ ಪಾಂಡೆ, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ
ಪಾಕಿಸ್ತಾನ ಆಡುವ ಬಳಗ: ಸಿದ್ರಾ ಅಮೀನ್, ಜವೇರಿಯಾ ಖಾನ್, ಮುನೀಬಾ ಅಲಿ (ವಿಕೆಟ್ ಕೀಪರ್), ಬಿಸ್ಮಾ ಮರೂಫ್ (ನಾಯಕ), ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಫಾತಿಮಾ ಸನಾ, ಐಮನ್ ಅನ್ವರ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್
ಬೆಂಚ್: ಒಮೈಮಾ ಸೊಹೈಲ್, ಸಿದ್ರಾ ನವಾಜ್, ತುಬಾ ಹಸನ್, ಸದಾಫ್ ಶಮಾಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications