Womens t20 world cup: ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತದ ವನಿತೆಯರು

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಗೆಲುವು ಸಾಧಿಸಿದ್ದು ಟಿ20 ವಿಶ್ವಕಪ್‌ನಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ. ಜಮಿಮಾ ರೋಡ್ರಿಗಸ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ ತಂಡ ಪಾಕಿಸ್ತಾನ ನೀಡಿದ್ದ 150 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ. ಶಫಾಲಿ ವರ್ಮ ಹಾಗೂ ರಿಚಾ ಘೋಷ್ ಕೂಡ ಅದ್ಭುತ ಬ್ಯಾಟಿಂಗ್ ನಡೆಸಿದ್ದು 7 ವಿಕೆಟ್‌ಗಳ ಅಂತರದಿಂದ ಭಾರತ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಪಾಕಿಸ್ತಾನ ತಂಡ ಭಾರತಕ್ಕೆ 150 ರನ್‌ಗಳ ಸವಾಲಿನ ಗುರಿ ನಿಗದಿಪಡಿಸಿತು. ಈ ಮೊತ್ತವನ್ನು ಅದ್ಭುತವಾಗಿ ಬೆನ್ನಟ್ಟಿದ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಪಾಕಿಸ್ತಾನದ ವಿರುದ್ಧ ಭಾರತ ತಂಡ ಆರಂಭದಲ್ಲಿಯೇ ಯಶಸ್ಸು ಗಳಿಸಲು ಸಾಧ್ಯವಾಯಿತು. ರಾಧಾ ಯಾದವ್ ಜವೇರಿಯಾ ಖಾನ್ ಅವರನ್ನು ಪಂದ್ಯದ ಎರಡನೇ ಓವರ್‌ನಲ್ಲಿಯೇ ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ತಂಡದ ಮೊತ್ತ 42 ರನ್‌ಗಳಾಗಿದ್ದಾಗ ಪಾಕಿಸ್ತಾನ ತನ್ನ ಎರಡನೇ ವಿಕೆಟ್ ಕಳೆದುಕೊಂಡರೆ 43 ರನ್‌ಗೆ ಮೂರನೇ ವಿಕೆಟ್ ಕಳೆದುಕೊಂಡಿತು. ಈ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತ್ತು. 12.1 ಓವರ್‌ಗಳಾದಾದ ಪಾಕಿಸ್ತಾನ 68 ರನ್‌ಗೆ 4ನೇ ವಿಕೆಟ್ ಕಳೆದುಕೊಂಡಿತು.
ಆದರೆ ಬಳಿಕ ನಾಯಕಿ ಮರೂಫ್ ಹಾಗೂ ಆಯೆಶಾ ನಸೀಮ್ ಅದ್ಭುತ ಜೊತೆಯಾಟ ನೀಡುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 82 ರನ್‌ಗಳನ್ನು ಕಲೆಹಾಕಿದ್ದು ತಂಡದ ಮೊತ್ತ 149ಕ್ಕೆ ತಂದು ನಿಲ್ಲಿಸಿದರು. ಹೀಗಾಗಿ ಭಾರತ ತಂಡಕ್ಕೆ 150 ರನ್‌ಗಳನ್ನು ಗಳಿಸುವ ಸವಾಲು ಮುಂದಿಟ್ಟಿತು. ನಾಯಕಿ ಮರೂಫ್ 55 ಎಸೆತಗಳಲ್ಲಿ 68 ರನ್‌ಗಳಿಸಿದರೆ ಆಯೆಶಾ ನಸೀಮ್ 43 ರನ್‌ಗಳಿಸಿದರು.
ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಸಾಧಾರಣ ಆರಂಭವನ್ನು ಪಡೆಯಿತು. ಶಫಾಲಿ ವರ್ಮ 25 ಎಸೆತಗಳಲ್ಲಿ 33 ರನ್‌ಗಳ ಕೊಡುಗೆ ನೀಡಿದರೆ ನಾಯಕಿ ಹರ್ನ್‌ಪ್ರೀತ್ ಕೌರ್ 16 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಜಮಿಮಾ ರೋಡ್ರಿಗಸ್ ಹಾಗೂ ರಿಚಾ ಘೋಷ್ ಅಜೇಯ ಬ್ಯಾಟಿಂಗ್ ಪ್ರದರ್ಶಿಸಿ ಭಾರತ ತಂಡವನ್ನು ಗೆಲುವಿನ ದಟ ದಾಟಿಸಿದರು. ಜಮಿಮಾ 38 ಎಸೆತಗಳಲ್ಲಿ 53 ರನ್‌ಗಳಿಸಿದರೆ ರಿಚಾ ಘೋಷ್ 20 ಎಸೆತಗಳಲ್ಲಿ 31 ರನ್ ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಇನ್ನೂ ಒಂದು ಓವರ್ ಬಾ
ಭಾರತ ಆಡುವ ಬಳಗ: ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ರೇಣುಕಾ ಠಾಕೂರ್ ಸಿಂಗ್
ಬೆಂಚ್: ಸ್ಮೃತಿ ಮಂಧಾನ, ಶಿಖಾ ಪಾಂಡೆ, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ
ಪಾಕಿಸ್ತಾನ ಆಡುವ ಬಳಗ: ಸಿದ್ರಾ ಅಮೀನ್, ಜವೇರಿಯಾ ಖಾನ್, ಮುನೀಬಾ ಅಲಿ (ವಿಕೆಟ್ ಕೀಪರ್), ಬಿಸ್ಮಾ ಮರೂಫ್ (ನಾಯಕ), ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಫಾತಿಮಾ ಸನಾ, ಐಮನ್ ಅನ್ವರ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್
ಬೆಂಚ್: ಒಮೈಮಾ ಸೊಹೈಲ್, ಸಿದ್ರಾ ನವಾಜ್, ತುಬಾ ಹಸನ್, ಸದಾಫ್ ಶಮಾಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications