
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಅಭಿಯಾನವನ್ನು ಇಂದು ಆರಂಭಿಸಿದೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ತಂಡ ಎದುರಾಳಿಯಾಗಿದ್ದು ಪಾಕಿಸ್ತಾನ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದೆ. ಹೀಗಾಗಿ ಟೀಮ್ ಇಂಡಿಯಾ ಬೌಲಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಬಹು ನಿರೀಕ್ಷಿತ ಪಂದ್ಯಕ್ಕೆ ಟೀಮ್ ಇಂಡಿಯಾದ ಉಪನಾಯಕಿ ಸ್ಮೃತಿ ಮಧಾನ ಗಾಯದ ಕಾರಣದಿಂದಾಗಿ ಅಲಭ್ಯವಾಗಿದ್ದಾರೆ. ಹಾಗಾಗಿ ಆರಂಭಿಕ ಆಟಗಾರ್ತಿಯಾಗಿ ಶಫಾಲಿ ವರ್ಮಾಗೆ ಯಾಸ್ತಿಕಾ ಭಾಟಿಯಾ ಸಾತ್ ನೀಡಲಿದ್ದಾರೆ. ಉಳಿದಂತೆ ಜೆಮಿಮಾ ರಾಡ್ರಿಗಸ್, ಹರ್ಲಿನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್, ಹಾಗೂ ದೀಪ್ತಿ ಶರ್ಮಾ ಕಣಕ್ಕಿಳಿಯಲಿದ್ದಾರೆ. ಇನ್ನು ಪೂಜಾ ವಸ್ತ್ರಾಕರ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್ ಮತ್ತು ರೇಣುಕಾ ಸಿಂಗ್ ಬೌಲಿಂಗ್ ವಿಭಾಗದಲ್ಲಿಕಣಕ್ಕಿಳಿಯುತ್ತಿದ್ದಾರೆ.
Live ಸ್ಕೋರ್ ಹೀಗಿದೆ
ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ. ತ್ರಿಕೋನ ಸರಣಿಯಲ್ಲಿ ಉತ್ತಮ ಪ್ರದರ್ಶನ ನಿಡಿದ್ದು ಬೌಲಿಂಗ ವಿಭಾಗ ಸಾಕಷ್ಟು ಆತ್ಮವಿಶ್ವಾಸದಲ್ಲಿದೆ ಎಂದಿದ್ದಾರೆ. ಅಲ್ಲದೆ ಕೇಪ್‌ಟೌನ್‌ನ ಪಿಚ್‌ನ ಲಾಭ ತಮಗೆ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ.
ಭಾರತ ಆಡುವ ಬಳಗ: ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ರೇಣುಕಾ ಠಾಕೂರ್ ಸಿಂಗ್
ಬೆಂಚ್: ಸ್ಮೃತಿ ಮಂಧಾನ, ಶಿಖಾ ಪಾಂಡೆ, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ
ಪಾಕಿಸ್ತಾನ ಆಡುವ ಬಳಗ: ಸಿದ್ರಾ ಅಮೀನ್, ಜವೇರಿಯಾ ಖಾನ್, ಮುನೀಬಾ ಅಲಿ (ವಿಕೆಟ್ ಕೀಪರ್), ಬಿಸ್ಮಾ ಮರೂಫ್ (ನಾಯಕ), ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಫಾತಿಮಾ ಸನಾ, ಐಮನ್ ಅನ್ವರ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್
ಬೆಂಚ್: ಒಮೈಮಾ ಸೊಹೈಲ್, ಸಿದ್ರಾ ನವಾಜ್, ತುಬಾ ಹಸನ್, ಸದಾಫ್ ಶಮಾಸ್