Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind W vs WI W: ತ್ರಿಕೋನ ಸರಣಿ: ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ: Live ಸ್ಕೋರ್

Womens T20I Tri-Series: India Women vs West Indies Women, 3rd Match Toss report, playing XI

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ತಂಡಗಳ ತ್ರಿಕೋನ ಸರಣಿಯಲ್ಲಿ ಇಂದು ಭಾರತದ ಮಹಿಳೆಯರು ಹಾಗೂ ವೆಸ್ಟ್ ಇಂಡೀಸ್ ತಂಡ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾದ ಈಸ್ಟ್ ಲಂಡನ್‌ನ ಬಫೆಲೋ ಪಾರ್ಕ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ.

ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ ಟಿ20 ತ್ರಿಕೋನ ಸರಣಿ ಇದಾಗಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿದ್ದ ಭಾರತ ತಂಡ 27 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಬಳಿಕ ಎರಡನೇ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮೂಖಾಮುಖಿಯಾಗಿದ್ದು ಇದರಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿತ್ತು. ಇದೀಗ ಭಾರತಕ್ಕೆ ವೆಸ್ಟ್ ಇಂಡೀಸ್ ತಂಡ ಸವಾಲೊಡ್ಡಿದೆ.

ಭಾರತ ಆಡುವ ಬಳಗ ಹೀಗಿದೆ: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕ), ಜೆಮಿಮಾ ರಾಡ್ರಿಗಸ್, ದೇವಿಕಾ ವೈದ್ಯ, ದೀಪ್ತಿ ಶರ್ಮಾ, ಅಮಂಜೋತ್ ಕೌರ್, ರಾಧಾ ಯಾದವ್, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್‌ವಾಡ್
ಬೆಂಚ್: ಸ್ನೇಹ ರಾಣಾ, ಅಂಜಲಿ ಸರ್ವಾಣಿ, ರೇಣುಕಾ ಠಾಕೂರ್ ಸಿಂಗ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ

ವೆಸ್ಟ್ ಇಂಡೀಸ್ ಆಡುವ ಬಳಗ ಹೀಗಿದೆ: ಹೇಯ್ಲಿ ಮ್ಯಾಥ್ಯೂಸ್ (ನಾಯಕ), ಬ್ರಿಟ್ನಿ ಕೂಪರ್, ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್), ಶೆಮೈನ್ ಕ್ಯಾಂಪ್ಬೆಲ್ಲೆ, ಶಬಿಕಾ ಗಜ್ನಬಿ, ಚೆಡಿಯನ್ ನೇಷನ್, ಅಫಿ ಫ್ಲೆಚರ್, ಶಾಮಿಲಿಯಾ ಕೊನ್ನೆಲ್, ಶಾನಿಕಾ ಬ್ರೂಸ್, ಕರಿಷ್ಮಾ ರಾಮ್ಹರಾಕ್, ಕೇಸಿಯಾ ಶುಲ್ಟ್ಜ್
ಬೆಂಚ್: ಷಕೇರಾ ಸೆಲ್ಮನ್, ಚೆರ್ರಿ ಆನ್ ಫ್ರೇಸರ್, ಆಲಿಯಾ ಅಲೀನ್, ಶೆನೆಟಾ ಗ್ರಿಮ್ಮಂಡ್, ಚಿನೆಲ್ಲೆ ಹೆನ್ರಿ, ಸ್ಟಾಫಾನಿ ಟೇಲರ್

Story first published: Monday, January 23, 2023, 22:52 [IST]
Other articles published on Jan 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+