For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್: ಗೆಲ್ಲಬೇಕಾದ ಪಂದ್ಯದಲ್ಲಿ ಮಿಂಚಿದ ಭಾರತ: ಬೃಹತ್ ಗೆಲುವು ಸಾಧಿಸಿದ ಮಿಥಾಲಿ ಪಡೆ

Womens world cup 2022: Ind W vs Bangla W, India win by 110 runs, Highlights

ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ವನಿತೆಯರು ಇಂದು ಬಾಂಗ್ಲಾದೇಶ ತಂಡವನ್ನು ಎದುರಿಸಿದ್ದಾರೆ. ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು 110 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಮೂರು ಸೋಲು ಅನುಭವಿಸಿ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ಈ ಗೆಲುವಿನಿಂದಾಗಿ ಸೆಮಿಫೈನಲ್ ರೇಸ್‌ನಲ್ಲಿ ಮುಂದುವರಿದಿದೆ.

ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದಕ್ಕೆ ಪೂರಕವಾಗಿ ಉತ್ತಮ ಆರಂಭ ಭಾರತ ತಂಡಕ್ಕೆ ದೊರೆಯಿತು. ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮ ಮೊದಲ ವಿಕೆಟ್‌ಗೆ 74 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಮಂಧಾನ 30 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ಸಂದರ್ಭದಲ್ಲಿ ಭಾರತ ತಂಡ ದಿಢೀರ್ ಕುಸಿತವನ್ನು ಕಂಡಿತು. ಶಫಾಲಿ ವರ್ಮಾ ಹಾಗೂ ನಾಯಕಿ ಮಿಥಾಲಿ ರಾಜ್ ಸತತ ಎರಡು ಎಸೆತಗಳಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತು.

ಟೂರ್ನಿಯ್ಲಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚುತ್ತಿರುವ ಹರ್ಮನ್‌ಪ್ರೀತ್ ಕೌರ್ ರನೌಟ್ ಆಗುವ ಮೂಲಕ ವಿಕೆಟ್ ಕಳೆದು ಕೊಂಡಿದ್ದಾರೆ. ಅಂತಿಮ ಹಂತದಲ್ಲಿ ಪೂಜಾ ವಸ್ತ್ರೇಕರ್, ರಿಚಾ ಘೋಷ್ ಹಾಗೂ ಸ್ನೇಹ್ ರಾಣಾ ಅವರಿಂದ ಉತ್ತಮ ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ಬಂದ ಕಾರಣ ಭಾರತ 7 ವಿಕೆಟ್ ಕಳೆದುಕೊಂಡು 227 ರನ್‌ಗಳಿಸಿತು.

ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡದ ವಿರುದ್ಧ ಭಾರತೀಯ ಬೌಲರ್‌ಗಳು ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಬಾಂಗ್ಲಾದೇಶದ ಪರವಾಗಿ ಲತಾ ಮೊಂಡಾಲ್ ಹಾಗೂ ಸಲ್ಮಾ ಕತೌ ಹೊರತುಪಡಿಸಿ ಉಳಿದ ಯಾವ ಆಟಗಾರ್ತಿಯರಿಂದಲೂ ಗಮನಾರ್ಹ ಪ್ರದರ್ಶನ ಬಾರಲಿಲ್ಲ.

ಇತ್ತ ಭಾರತದ ಪರವಾಗಿ ಬೌಲಿಂಗ್ ವಿಭಾಗದಲ್ಲಿ ಎಲ್ಲಾ ಆಟಗಾರ್ತಿಯರು ಕೂಡ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಸ್ನೇಹ್ ರಾಣಾ 4 ವಿಕೆಟ್ ಪಡೆಯುವ ಮೂಲಕ ಬಾಂಗ್ಲಾ ದಾಂಡಿಗರಿಗೆ ಕಂಟಕವಾದರು. ಜೂಲನ್ ಗೋಸ್ವಾಮಿ ಹಾಗೂ ಪೂಜಾ ವಸ್ತ್ರೇಕರ್ ತಲಾ 2 ವಿಕೆಟ್ ಕಬಳಿಸಿದರು. ರಾಜೇಶ್ವರಿ ಗಾಯಕ್ವಾಡ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೂ ಕೇವಲ 1.50ರ ಸರಾಸರಿಯಲ್ಲಿ ಬೌಲಿಂಗ್ ದಾಳಿ ನಡೆಸುವ ಮೂಲಕ ಎದುರಾಳಿಗಳಿಗೆ ಸವಾಲಾದರು. ಪೂನಮ್ ಯಾದವ್ ಕೂಡ 1 ವಿಕೆಟ್ ಪಡೆದು ಮಿಂಚಿದ್ದಾರೆ

ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್‌ವಾಡ್, ಪೂನಂ ಯಾದವ್
ಬೆಂಚ್: ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ, ರೇಣುಕಾ ಸಿಂಗ್, ಮೇಘನಾ ಸಿಂಗ್

ಬಾಂಗ್ಲಾದೇಶ ಪ್ಲೇಯಿಂಗ್ XI: ಶರ್ಮಿನ್ ಅಖ್ತರ್, ಮುರ್ಷಿದಾ ಖಾತುನ್, ಫರ್ಗಾನಾ ಹೊಕ್, ನಿಗರ್ ಸುಲ್ತಾನಾ (ನಾಯಕಿ & ವಿಕೆಟ್ ಕೀಪರ್), ರುಮಾನಾ ಅಹ್ಮದ್, ರಿತು ಮೋನಿ, ಲತಾ ಮೊಂಡಲ್, ಸಲ್ಮಾ ಖಾತುನ್, ನಹಿದಾ ಅಕ್ಟರ್, ಫಾಹಿಮಾ ಖಾತುನ್, ಜಹಾನಾರಾ ಆಲಂ
ಬೆಂಚ್: ಶಂಜಿದಾ ಅಕ್ಟರ್, ಸೋಭಾನಾ ಮೊಸ್ತರಿ, ಸುರೈಯಾ ಅಜ್ಮಿನ್, ಫರಿಹಾ ತ್ರಿಸ್ನಾ, ಶಮೀಮಾ ಸುಲ್ತಾನಾ

Story first published: Tuesday, March 22, 2022, 16:09 [IST]
Other articles published on Mar 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+