ಮಹಿಳಾ ವಿಶ್ವಕಪ್ 2022: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮುಖಾಮುಖಿಯಲ್ಲಿ ಯಾರು ಬಲಿಷ್ಟರು?

ಕಳೆದ ಮಾರ್ಚ್ 4ರಂದು ನಡೆದ ನ್ಯೂಜಿಲೆಂಡ್ ವನಿತೆಯರ ತಂಡ ಮತ್ತು ವೆಸ್ಟ್ ಇಂಡೀಸ್ ವನಿತೆಯರ ತಂಡಗಳ ನಡುವಿನ ಉದ್ಘಟನಾ ಪಂದ್ಯದ ಮೂಲಕ ಪ್ರತಿಷ್ಟಿತ ಮಹಿಳಾ ಐಸಿಸಿ ಏಕದಿನ ವಿಶ್ವಕಪ್ 2022ರ ಟೂರ್ನಿ ಆರಂಭವಾಗಿದ್ದು, ಮಾರ್ಚ್ 15ರ ಮಂಗಳವಾರದವರೆಗೂ ಒಟ್ಟು 14 ಗ್ರೂಪ್ ಹಂತದ ಪಂದ್ಯಗಳು ನಡೆದಿವೆ. ಈ ಪಂದ್ಯಗಳ ಪೈಕಿ ತಾನು ಆಡಿತುವ ಎಲ್ಲಾ ಪಂದ್ಯಗಳಲ್ಲಿ ಗೆದ್ದಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ತಾನದಲ್ಲಿದ್ದು, ಇಲ್ಲಿಯವರೆಗೂ ತಾನು ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಸೋಲುಂಡಿರುವ ಪಾಕಿಸ್ತಾನ ವನಿತೆಯರ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇನ್ನು ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿಯ 15ನೇ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಮತ್ತು ಇಂಗ್ಲೆಂಡ್ ವನಿತೆಯರ ತಂಡ ಸೆಣಸಾಟ ನಡೆಸಲಿದ್ದು, ಈ ಪಂದ್ಯ ಮಾರ್ಚ್ 16ರ ಬುಧವಾರದಂದು ನಡೆಯಲಿದೆ. ಇನ್ನು ಭಾರತ ವನಿತೆಯರ ತಂಡ ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಒಟ್ಟು 3 ಪಂದ್ಯಗಳನ್ನಾಡಿದ್ದು, 2 ಪಂದ್ಯಗಳಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋತು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅತ್ತ ಇಂಗ್ಲೆಂಡ್ ವನಿತೆಯರ ತಂಡ ಕೂಡ ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇಲ್ಲಿಯವರೆಗೂ 3 ಪಂದ್ಯಗಳನ್ನಾಡಿದ್ದು, ಎಲ್ಲಾ ಪಂದ್ಯಗಳಲ್ಲಿಲಯೂ ಸೋತು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಭಾರತ ವನಿತೆಯರ ತಂಡ ಮತ್ತು ಇಂಗ್ಲೆಂಡ್ ವನಿತೆಯರ ತಂಡಗಳ ನಡುವಿನ ಮುಖಾಮುಖಿ ಫಲಿತಾಂಶ
ಒಟ್ಟಾರೆ ಏಕದಿನ ಪಂದ್ಯಗಳ ಮುಖಾಮುಖಿಯ ವಿಚಾರಕ್ಕೆ ಬಂದರೆ ಭಾರತ ವನಿತೆಯರ ತಂಡದ ವಿರುದ್ಧ ಇಂಗ್ಲೆಂಡ್ ವನಿತೆಯರ ತಂಡ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 72 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿದ್ದು ಇಂಗ್ಲೆಂಡ್ ವನಿತೆಯರ ತಂಡ 39 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಭಾರತ ವನಿತೆಯರ ತಂಡ 31 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೂ ಉಳಿದೆರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿವೆ.
ಇನ್ನು ಭಾರತ ವನಿತೆಯರ ತಂಡ ಮತ್ತು ಇಂಗ್ಲೆಂಡ್ ವನಿತೆಯರ ತಂಡಗಳ ನಡುವೆ ಇದುವರೆಗೂ ಒಟ್ಟು 11 ಮುಖಾಮುಖಿ ವಿಶ್ವಕಪ್ ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್ ವನಿತೆಯರ ತಂಡ 7 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಭಾರತ ವನಿತೆಯರ ತಂಡ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಇತ್ತಂಡಗಳ ನಡುವಿನ ವಿಶ್ವಕಪ್ ಮುಖಾಮುಖಿಯಲ್ಲಿ ಭಾರತ ವನಿತೆಯರ ತಂಡದ ವಿರುದ್ಧ ಇಂಗ್ಲೆಂಡ್ ವನಿತೆಯರ ತಂಡ ಮೇಲುಗೈ ಸಾಧಿಸಿದೆ.
ಪಂದ್ಯ ನಡೆಯುವ ಸ್ಥಳ ಮತ್ತು ಆರಂಭದ ಸಮಯ:
ಭಾರತ ವನಿತೆಯರ ತಂಡ ಮತ್ತು ಇಂಗ್ಲೆಂಡ್ ವನಿತೆಯರ ತಂಡಗಳ ನಡುವಿನ ಈ ಪಂದ್ಯ ನಾಳೆ ( ಮಾರ್ಚ್ 16 ) ನ್ಯೂಜಿಲೆಂಡ್‌ನ ಮೌಂಟ್ ಮೌಂಗಾನುಯಿಯ ಬೇ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಗೂ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 6.30ಕ್ಕೆ ಆರಂಭವಾಗಲಿದೆ.
ಭಾರತ ಸಂಭಾವ್ಯ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್.
ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ: ಲಾರೆನ್ ವಿನ್‌ಫೀಲ್ಡ್ ಹಿಲ್, ಟಮ್ಮಿ ಬ್ಯೂಮಾಂಟ್, ಹೀದರ್ ನೈಟ್ (ನಾಯಕಿ), ನಟಾಲಿ ಸ್ಕಿವರ್, ಆಮಿ ಎಲ್ಲೆನ್ ಜೋನ್ಸ್ (ವಿಕೆಟ್ ಕೀಪರ್), ಡೇನಿಯಲ್ ವ್ಯಾಟ್, ಸೋಫಿಯಾ ಡಂಕ್ಲಿ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್, ಅನ್ಯಾ ಶ್ರಬ್‌ಸೋಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications