ಮಹಿಳಾ ವಿಶ್ವಕಪ್: ಲಾಸ್ಟ್ ಓವರ್ ಥ್ರಿಲ್ಲರ್! ಭಾರತದ ಸೆಮಿಫೈನಲ್ ಕನಸು ಭಗ್ನಗೊಳಿಸಿದ ದ. ಆಫ್ರಿಕಾ!

ಮಹಿಳಾ ವಿಶ್ವಕಪ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಪ್ರದರ್ಶನ ನೀಡಿದರೂ ಅಂತಿಮ ಎಸೆತದಲ್ಲಿ ಸೋಲು ಅನುಭವಿಸಿದ್ದಾರೆ. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತದ ಹೋರಾಟ ಲೀಗ್ ಹಂತದಲ್ಲಿಯೇ ಮುಕ್ತಾಯವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಮಾತ್ರವೇ ಸೆಮಿಫೈನಲ್‌ಗೆ ಪ್ರವೇಶ ಸಾಧ್ಯವಿತ್ತು. ಆಸರೆ ಭಾರತ ಅಂತಿಮ ಎಸೆತದಲ್ಲಿ ಪಂದ್ಯವನ್ನು ಕಳೆದುಕೊಂಡು ನಿರಾಸೆ ಅನುಭವಿಸಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ನಾಯಕಿ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್‌ಕೌರ್ ಅವರಿಂದ ಭರ್ಜರಿ ಪ್ರದರ್ಶನದ ಕಾರಣದಿಂದ 274 ರನ್‌ಗಳ ಸವಾಲಿನ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಇದನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಸಾಕಷ್ಟು ಏರಿಳಿತಗಳೊಂದಿಗೆ ಅಂತಿಮ ಎಸೆತದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತದ ವನಿತೆಯರ ಹೋರಾಟ ಲೀಗ್ ಹಂತಕ್ಕೆ ಅಂತ್ಯವಾಗಿದೆ.
ಭಾರತದಿಂದ ಅದ್ಭುತ ಬ್ಯಾಟಿಂಗ್: ಗೆಲ್ಲಲೇ ಬೇಕಿದ್ದ ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅದ್ಭುತವಾಗಿತ್ತು. ಶಫಾಲಿ ವರ್ಮ ಹಾಗೂ ಸ್ಮೃತಿ ಮಂಧಾನ ಉತ್ತಮ ನೀಡಿದರು. ಮೊದಲ ವಿಕೆಟ್‌ಗೆ 91 ರನ್‌ಗಳನ್ನು ಕಲೆಹಾಕಿದ ಇಬ್ಬರು ಆಟಗಾರ್ತಿಯರು ಕೂಡ ಅರ್ಧ ಶತಕಗಳಿಸಿದರು. ನಂತರ ನಾಯಕಿ ಮಿಥಾಲಿ ರಾಜ್ ಕೂಡ 68 ರನ್‌ಗಳ ಕೊಡುಗೆ ನೀಡಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದಲ್ಲಿ 48 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್‌ಗಳಿಸಿದೆ.
ಸಮರ್ಥವಾಗಿ ರನ್ ಬೆನ್ನಟ್ಟಿದ ದ. ಆಫ್ರಿಕಾ: ಇನ್ನು ಭಾರತ ನೀಡಿದ 275 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮೊದಲ ವಿಕೆಟ್ ಶೀಘ್ರವಾಗಿ ಕಳೆದುಕೊಂಡಿದ್ದರೂ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ ಬಂದಿತ್ತು. ಆರಂಭಿಕ ಆಟಗಾರ್ತಿ ಲೌರಾ ಒಲ್ವಾರ್ಡ್ತ್ 80 ರನ್‌ಗಳ ಕೊಡುಗೆ ನೀಡಿದರು. ಅಲ್ಲದೆ ಮೈಗ್ನನ್ ಡು ಪ್ರೀಸ್ ದಕ್ಷಿಣ ಆಫ್ರಿಕಾ ಪರವಾಗಿ ಅಂತಿಮಹಂತದ ವರೆಗೂ ಹೋರಾಡಿ ಗೆಲುವಿಗೆ ಕಾರಣವಾದರು.
ಎಲ್ಲಾ ವಿಭಾಗಗಳಲ್ಲಿಯೂ ಮಿಂಚಿದ ಹರ್ಮನ್‌ಪ್ರೀತ್ ಕೌರ್: ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪ್ರದರ್ಶನ ಅದ್ಭುತವಾಗಿತ್ತು. ಈ ಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಕೌರ್ ಈ ಪಂದ್ಯದಲ್ಲಿಯೂ 48 ರನ್‌ಗಳ ಕೊಡುಗೆ ನೀಡಿದರು. ಇನ್ನು ಬೌಲಿಂಗ್‌ನಲ್ಲಿಯೂ 8 ಓವರ್‌ಗಳಲ್ಲಿ ಕೇವಲ 42 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಮೂರು ರನೌಟ್‌ಗಳನ್ನು ಮಾಡುವ ಮೂಲಕ ಫೀಲ್ಡಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಜೂಲನ್ ಗೋಸ್ವಾಮಿ, ಪೂನಂ ಯಾದವ್, ತನಿಯಾ ಭಾಟಿಯಾ, ರೇಣುಕಾ ಸಿಂಗ್
ದಕ್ಷಿಣ ಆಫ್ರಿಕಾ ಪ್ಲೇಯಿಂಗ್ XI: ಲಿಜೆಲ್ಲೆ ಲೀ, ಲಾರಾ ವೊಲ್ವಾರ್ಡ್ಟ್, ಲಾರಾ ಗುಡಾಲ್, ಸುನೆ ಲೂಸ್ (ನಾಯಕಿ), ಮಿಗ್ನಾನ್ ಡು ಪ್ರೀಜ್, ಮರಿಜಾನ್ನೆ ಕಪ್, ಕ್ಲೋಯ್ ಟ್ರಯಾನ್, ತ್ರಿಶಾ ಚೆಟ್ಟಿ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಮಸಾಬಟಾ ಕ್ಲಾಸ್, ಅಯಾಬೊಂಗಾ ಖಾಕಾ
ಬೆಂಚ್: ತಜ್ಮಿನ್ ಬ್ರಿಟ್ಸ್, ತುಮಿ ಸೆಖುಖುನೆ, ನಾನ್ಕುಲುಲೆಕೊ ಮ್ಲಾಬಾ, ಸಿನಾಲೋ ಜಫ್ತಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications