
ಲಂಡನ್, ಜುಲೈ 3: ಸೆಮಿಫೈನಲ್ ಪ್ರವೇಶದ ಅವಕಾಶವನ್ನು ಕೈಚೆಲ್ಲುವುದರಲ್ಲಿದ್ದ ಆತಿಥೇಯ ಇಂಗ್ಲೆಂಡ್ ಹೇಗೂ ಭಾರತದೆದುರು ಗೆದ್ದು ನಿಟ್ಟುಸಿರುವ ಬಿಟ್ಟಿದೆ. ಬುಧವಾರ (ಜುಲೈ 3) ವಿಶ್ವಕಪ್ 41ನೇ ಪಂದ್ಯಕ್ಕಾಗಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿವೆ. ಈ ಪಂದ್ಯದ ಗೆಲುವು ಎರಡೂ ತಂಡಗಳಿಗೂ ಅಗತ್ಯವೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಸದ್ಯದ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದಾಗಿದೆ. 3ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 11 ಅಂಕ ಕಲೆ ಹಾಕಿದ್ದು, ಇನ್ನೊಂದು ಪಂದ್ಯ ಗೆದ್ದರೆ ಸೆಮಿಫೈನಲ್‌ಗೆ ಪ್ರವೇಶಿಸಲಿದೆ. + ನೆಟ್ ರನ್ ರೇಟ್ ಹೊಂದಿರುವ ಇಂಗ್ಲೆಂಡ್‌ಗೆ ಕೂಡ ಕಿವೀಸ್ ಮಣಿಸಿದರೆ ಸೆಮಿಫೈನಲ್ ಹಾದಿ ಸುಲಭವಾಗಲಿದೆ, ಪಂದ್ಯ ಸೋತರೆ ಆಂಗ್ಲರಿಗೆ ಮತ್ತೆ ಸೆಮಿಫೈನಲ್ ಹಾದಿ ದುರ್ಗಮವೆನಿಸಲಿದೆ.
ನ್ಯೂಜಿಲೆಂಡ್ vs ಇಂಗ್ಲೆಂಡ್, ಜುಲೈ 3, Live ಸ್ಕೋರ್‌ಕಾರ್ಡ್
ಇಂಗ್ಲೆಂಡ್ ಖಾತೆಯಲ್ಲಿ ನ್ಯೂಜಿಲೆಂಡ್‌ಗಿಂತ ಒಂದು ಅಂಕ ಕಡಿಮೆಯಿದೆಯಾದರೂ ನೆಟ್ ರನ್ ರೇಟ್ ಜಾಸ್ತಿಯಿದೆ. 5ನೇ ಸ್ಥಾನದಲ್ಲಿರುವ ಪಾಕಿಸ್ತಾನ 9 ಅಂಕಗಳಿಸಿದ್ದರೂ ಪಾಕ್ ತಂಡ ನೆಗೆಟಿವ್ ನೆಟ್ ರನ್ ರೇಟ್ ಹೊಂದಿದೆ. ಅಂತೂ ಸೆಮಿಫೈನಲ್ ನಿಟ್ಟಿಯನಲ್ಲಿ ಇಂಗ್ಲೆಂಡ್, ಕಿವೀಸ್ ಎರಡಕ್ಕೂ ಪಂದ್ಯ ಪ್ರಮುಖವಾಗಿರುವುದರಿಂದ ಪಂದ್ಯ ಕುತೂಹಲ ಮೂಡಿಸಿದೆ.
ನ್ಯೂಜಿಲೆಂಡ್ ತಂಡ: ಹೆನ್ರಿ ನಿಕೋಲ್ಸ್, ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಟಾಮ್ ಲಾಥಮ್, ಕಾಲಿನ್ ಡೆ ಗ್ರ್ಯಾಂಡ್‌ಹೋಮ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ / ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜಾನಿ ಬೇರ್ಸ್ಟೋವ್, ಜೋ ರೂಟ್, ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಜೋಫ್ರಾ ಆರ್ಚರ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್.
{headtohead_cricket_2_4}