Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇನ್ನೆಷ್ಟು ವರ್ಷ ಆಡ್ತಾರೆ ವಿರಾಟ್ ಕೊಹ್ಲಿ?, ಅವರೇ ಹೇಳ್ತಾರೆ ಕೇಳಿ: ವೀಡಿಯೋ

Workload takes toll but will play all formats for at least 3 more years: Virat Kohli

ನವದೆಹಲಿ, ಫೆಬ್ರವರಿ 19: ಇನ್ನೆಷ್ಟು ಕಾಲ ತಾನು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆಡಲಿದ್ದೇನೆ ಎಂಬುದನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಇನ್ನೂ ಕನಿಷ್ಠ 3 ವರ್ಷಗಳ ಕಾಲ ತಾನು ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದಾಗಿ ಕೊಹ್ಲಿ ಹೇಳಿದ್ದಾರೆ.

ಕೆಲಸದ ಹೊರೆ ಕಷ್ಟ ಅನ್ನಿಸುತ್ತಿದೆ. ಆದರೆ ಇನ್ನೂ ಕನಿಷ್ಠ ಮೂರು ವರ್ಷಗಳ ಕಾಲ ಮೂರು ಮಾದರಿಯ ಕ್ರಿಕೆಟ್‌ ಆಡಲಿರುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಅಂದರೆ ಕೊಹ್ಲಿ ಮುಂದಿನ ಎರಡು ಟಿ20 ವಿಶ್ವಕಪ್ ಟೂರ್ನಿ ಮತ್ತು ಒಂದು 50 ಓವರ್‌ಗಳ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಯೋಚನೆ ಇಟ್ಟುಕೊಂಡಂತಿದೆ.

ಭಾರತದಲ್ಲಿ 2021ರಲ್ಲಿ ನಡೆಯುವ ಟಿ20 ವಿಶ್ವಕಪ್‌ ಬಳಿಕ ಯಾವುದಾದರೂ ಒಂದು ಕ್ರಿಕೆಟ್ ಮಾದರಿಗೆ ನಿವೃತ್ತಿ ನೀಡುವ ಯೋಚನೆಯಿದೆಯೇ ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, 'ಇವತ್ತಿನಿಂದ ಇನ್ನೂ ಮೂರು ವರ್ಷಗಳಿಗೆ ನನ್ನನ್ನು ನಾನು ತಯಾರುಗೊಳಿಸಿಕೊಂಡಿದ್ದೇನೆ. ನನ್ನ ಯೋಚನೆಯಲ್ಲಿ ದೊಡ್ಡ ಚಿತ್ರಣವಿದೆ. ಆ ಬಳಿಕ ಬೇಕಾದರೆ ನಾವು ಬೇರೆ ಮಾತನಾಡಬಹುದು,' ಎಂದರು.

ನ್ಯೂಜಿಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ದಿನ (ಫೆಬ್ರವರಿ 19) ಸುದ್ದಿಗಾರರ ಜೊತೆ ಮಾತನಾಡಿದ ಕೊಹ್ಲಿ ವಿಚಾರಗಳನ್ನು ಹಂಚಿಕೊಂಡರು. ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಶುಕ್ರವಾರ (ಫೆಬ್ರವರಿ 21) ಆರಂಭವಾಗಲಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ 5 ಪಂದ್ಯಗಳ ಟಿ20 ಸರಣಿಯಲ್ಲಿ 5-0ಯಿಂದ ಗೆದ್ದು, 3 ಪಂದ್ಯಗಳ ಏಕದಿನದಲ್ಲಿ 3-0ಯಿಂದ ಸೋತಿತ್ತು. (ಕೊಹ್ಲಿ ಇನ್ನೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೇಲಿನ ವೀಡಿಯೋ ವೀಕ್ಷಿಸಿ).

Story first published: Wednesday, February 19, 2020, 17:34 [IST]
Other articles published on Feb 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+