T20 World Cup 2024: ಒಮಾನ್ ಬಳಿಕ ಟೂರ್ನಿಯಿಂದ ಹೊರಬಿದ್ದ ಮಾಜಿ ವಿಶ್ವ ಚಾಂಪಿಯನ್ ತಂಡ!
ಜೂನ್ 12 ಬುಧವಾರ, ಈ ಬಾರಿಯ 2024ರ ಟಿ20 ವಿಶ್ವಕಪ್ ಟೂರ್ನಿ ಆನೇಕ ರೋಚಕತೆಯಿಂದ ಕೂಡಿದೆ. ಗುಂಪು ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಿದ್ದು, ಸೂಪರ್-8 ಗೆ ಆರ್ಹತೆ ಪಡೆಯಲು ಕೆಲವು ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ.
ಮತ್ತೊಂದೆಡೆ ಈಗಾಗಲೇ ಬಿ ಗುಂಪಿನಲ್ಲಿರುವ ಒಮನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಮತ್ತೊಂದು ವಿಶ್ವ ಚಾಂಪಿಯನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಇದು ಅಧಿಕೃತವಾಗದಿದ್ದರೂ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ.

ಆ ತಂಡ ಬೇರೆ ಯಾವುದೂ ಅಲ್ಲ, 2014ರಲ್ಲಿ ಭಾರತವನ್ನು ಸೋಲಿಸಿ ಟಿ20 ವಿಶ್ವಕಪ್ ಗೆದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಹೊರಗುಳಿಯಲಿದೆ. ಪ್ರಸಕ್ತ ಋತುವಿನಲ್ಲಿ ಡಿ ಗುಂಪಿನಲ್ಲಿರುವ ಈ ತಂಡವು ಸೂಪರ್-8 ಅನ್ನು ತಲುಪುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ.
ಲಂಕಾ ತಂಡಕ್ಕೆ ಮಳೆ ವಿಲನ್
ಮಾಜಿ ಚಾಂಪಿಯನ್ ಶ್ರೀಲಂಕಾ 3 ಪಂದ್ಯಗಳನ್ನು ಆಡಿದ್ದು ಕೇವಲ 1 ಅಂಕ ಹೊಂದಿದೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಸೋಲು ಕಂಡಿತ್ತು. ಇದಾದ ನಂತರ ನೇಪಾಳ ವಿರುದ್ಧದ ಪಂದ್ಯವನ್ನು ಗೆದ್ದು ಟೂರ್ನಿಯಲ್ಲಿ ಉಳಿಯುವ ನಿರೀಕ್ಷೆಯಲ್ಲಿದ ಲಂಕಾ ತಂಡಕ್ಕೆ ಮಳೆ ವಿಲನ್ ಆಯಿತು.
ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆಯಬೇಕಿದ ಶ್ರೀಲಂಕಾ ಮತ್ತು ನೇಪಾಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರೊಂದಿಗೆ ಶ್ರೀಲಂಕಾ ಸೂಪರ್-8 ತಲುಪುವ ಆಸೆಯೂ ಅಂತ್ಯಗೊಂಡಿದೆ. ಇನ್ನುಳಿದ ಪಂದ್ಯಗಳನ್ನು ಗೆಲ್ಲುವ ಮೂಲಕ ಶ್ರೀಲಂಕಾ ಕೇವಲ 3 ಅಂಕಗಳನ್ನು ತಲುಪಲು ಸಾಧ್ಯವಾಗುತ್ತದೆ.
ನೆದರ್ಲೆಂಡ್ಸ್-ಬಾಂಗ್ಲಾದೇಶ 2-2 ಅಂಕಗಳನ್ನು ಹೊಂದಿದೆ. ಈ ಎರಡು ತಂಡಗಳ ನಡುವೆ ಪಂದ್ಯ ನಡೆಯಬೇಕಿದ್ದು, ಅದರಲ್ಲಿ ಗೆದ್ದವರು ಶ್ರೀಲಂಕಾವನ್ನು ಟೂರ್ನಿಯಿಂದ ಹೊರಹಾಕಲಿದ್ದಾರೆ.

ಸೂಪರ್-8 ಆರ್ಹತೆ ಪಡೆದ ಹರಿಣಗಳ ಪಡೆ
ಪ್ರಸ್ತುತ ಟಿ20 ವಿಶ್ವಕಪ್‌ನ ಡಿ ಗುಂಪಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಸೂಪರ್-8ಗೆ ಅರ್ಹತೆ ಪಡೆದಿದೆ. ದಕ್ಷಿಣ ಆಫ್ರಿಕಾ ಇದುವರೆಗೆ ಆಡಿದ ಮೂರೂ ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಐಡೆನ್ ಮಾರ್ಕ್ರಾಮ್ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಆಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಬಳಿಕ ನೆದರ್ಲ್ಯಾಂಡ್ಸ್ ವಿರುದ್ಧ 4 ವಿಕೆಟ್‌ಗಳಿಂದ ಗೆಲುವು ಕಂಡಿತು.
ತಮ್ಮ ಮೂರನೇ ಪಂದ್ಯದಲ್ಲಿ ಹರಿಣಗಳ ಪಡೆ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶವನ್ನು 4 ರನ್‌ಗಳಿಂದ ಸೋಲಿಸಿದರು. ಮುಂದಿನ ಪಂದ್ಯವನ್ನು ನೇಪಾಳ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications