For Quick Alerts
ALLOW NOTIFICATIONS  
For Daily Alerts
 

ಭಾರತದ ದಾಖಲೆ ಮೂಲೆಗಟ್ಟಿದ ಆಸ್ಟ್ರೇಲಿಯಾ

By Mahesh

ಪರ್ತ್, ಮಾ.4: ಅತಿಥೇಯ ಆಸ್ಟ್ರೇಲಿಯಾ ತಂಡ ವಿಶ್ವಕಪ್ 2015 ಟೂರ್ನಿಯಲ್ಲಿ ಮತ್ತೊಮ್ಮೆ ದಾಖಲೆಯ ಪುಟ ಸೇರಿದೆ. 400ರನ್ ಗಡಿ ದಾಟಿ ಅತಿ ಹೆಚ್ಚು ಸ್ಕೋರ್ ಮಾಡಿದ ತಂಡ ಎನಿಸಿದ್ದ ಭಾರತದ ದಾಖಲೆಯನ್ನು ಆಸ್ಟ್ರೇಲಿಯಾ ಮೂಲೆಗಟ್ಟಿದೆ.

ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಭಾರತದ ದಾಖಲೆ ಮುರಿಯಲ್ಪಟ್ಟಿದೆ. ವಾಕಾ ಮೈದಾನದಲ್ಲಿ ದುರ್ಬಲ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ತಂಡ 417ರನ್ ಸ್ಕೋರಿ ಮಾಡಿ ದಾಖಲೆ ನಿರ್ಮಿಸಿದೆ. 2007ರ ವಿಶ್ವಕಪ್ ಟೂರ್ನಿಯಲ್ಲಿ ಬರ್ಮುಡಾ ತಂಡದ ವಿರುದ್ಧ ಟೀಂ ಇಂಡಿಯಾ 413/5 ಸ್ಕೋರ್ ಮಾಡಿ ವಿಶ್ವಕಪ್ ದಾಖಲೆ ಬರೆದಿತ್ತು. []

World Cup 2015, Australia break India's record

ವಿಶ್ವಕಪ್ 2015 ಟೂರ್ನಿಯಲ್ಲಿ ಸತತ ಮೂರು ಬಾರಿ 400ಕ್ಕೂ ಅಧಿಕ ರನ್ ಪೇರಿಸಲ್ಪಟ್ಟಿದೆ. 40 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ 400 ಪ್ಲಸ್ ರನ್ ಹರಿದು ಬಂದಿದೆ.

ಡೇವಿಡ್ ವಾರ್ನರ್ 178ರನ್, ಗ್ಲೆನ್ ಮ್ಯಾಕ್ಸ್ ವೆಲ್ 39 ಎಸೆತಗಳಲ್ಲಿ 88ರನ್ ಹಾಗೂ ಸ್ಟೀವ್ ಸ್ಮಿತ್ 95 ರನ್ ಚೆಚ್ಚಿ ತಂಡದ ಮೊತ್ತವನ್ನು 417/6, 50 ಓವರ್ಸ್ ಗೇರಿಸಿದರು. ಮ್ಯಾಕ್ಸ್ ವೆಲ್ ತ್ವರಿತ ಗತಿ ಶತಕ ಹಾಗೂ ಸ್ಮಿತ್ ಶತಕ ಎಲ್ಲವೂ ಮಿಸ್ ಆಯಿತು.

ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಟೀಂ ಸ್ಕೋರ್ (ಟಾಪ್ 5)
417/6, 50 ಓವರ್ಸ್, ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ (2015)
413/5, 50 ಓವರ್ಸ್, ಭಾರತ vs ಬರ್ಮುಡಾ, 2007
411/4, 50 ಓವರ್ಸ್, ದಕ್ಷಿಣ ಆಫ್ರಿಕಾ vs ಐರ್ಲೆಂಡ್, 2015
408/5, 50 ಓವರ್ಸ್, ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, 2015
398/5, 50 ಓವರ್ಸ್, ಶ್ರೀಲಂಕಾ vs ಕೀನ್ಯಾ (1996)

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+