ವಿಶ್ವಕಪ್ ಅಂತಿಮ ಹಣಾಹಣಿ: ಶತಕ ವೀರರ ಪಟ್ಟಿ
ಮೆಲ್ಬೋರ್ನ್, ಮಾ.29: ಎಂಸಿಜಿಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ 11ನೇ ವಿಶ್ವಕಪ್ ಟೂರ್ನಿಯ ಅಂತಿಮ ಹಣಾಹಣಿ ನಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪರ ಶತಕ ಗಳಿಸುವ ಅವಕಾಶದಿಂದ ಗ್ರ್ಯಾಂಟ್ ಎಲಿಯಟ್ 83ರನ್ ಗಳಿಸಿ ಶತಕ ವಂಚಿತರಾಗಿದ್ದಾರೆ. ಆಸ್ಟ್ರೇಲಿಯಾ ಪರ ಯಾರಾದರೂ 100ರನ್ ಗಡಿ ದಾಟುವರೇ ಕಾದು ನೋಡಬೇಕಿದೆ.
ಸದ್ಯಕ್ಕೆ 11 ವಿಶ್ವಕಪ್ ನ ಅಂತಿಮ ಹಣಾಹಣಿಯಲ್ಲಿ ಶತಕ ಗಳಿಸಿರುವವರ ವಿವರ ಇಲ್ಲಿದೆ. ಇದುವರೆವಿಗೂ 6ಶತಕಗಳು ಬಂದಿವೆ.2007ರಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಬಾರಿಸಿದ ರೋಚಕ 149ರನ್ ಸದಾ ಸ್ಮರಣೀಯ. [1975-2011: ವಿಶ್ವಕಪ್ ಫೈನಲ್ ಪಂದ್ಯಗಳ ಮೆಲುಕು]

ವಿಶ್ವಕಪ್ ಅಂತಿಮ ಹಣಾಹಣಿ: ಶತಕ ವೀರರ ಪಟ್ಟಿ ಇಂತಿದೆ:
* ಕ್ಲೈವ್ ಲಾಯ್ಡ್ (ವೆಸ್ಟ್ ಇಂಡೀಸ್) 102 (85 ಎಸೆತ) vs ಆಸ್ಟ್ರೇಲಿಯಾ, 1975 [ವೆಸ್ಟ್ ಇಂಡೀಸ್ ಗೆ ಜಯ]
* ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್) 138 ಅಜೇಯ (157 ಎಸೆತ) vs ಇಂಗ್ಲೆಂಡ್, 1979 [ವೆಸ್ಟ್ ಇಂಡೀಸ್ ಗೆ ಜಯ]
* ಅರವಿಂದ್ ಡಿಸಿಲ್ವಾ (ಶ್ರೀಲಂಕಾ) 107 ಅಜೇಯ (85 ಎಸೆತ) vs ಆಸ್ಟ್ರೇಲಿಯಾ, 1996 [ಶ್ರೀಲಂಕಾಕ್ಕೆ ಜಯ]
* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 140 (121 ಎಸೆತ) vs ಭಾರತ, 2003 [ಆಸ್ಟ್ರೇಲಿಯಾಕ್ಕೆ ಜಯ]
* ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ) 149 (104 ಎಸೆತ) vs ಶ್ರೀಲಂಕಾ, 2007 [ಆಸ್ಟ್ರೇಲಿಯಾಕ್ಕೆ ಜಯ]
* ಮಹೇಲ ಜಯವರ್ದನೆ (ಶ್ರೀಲಂಕಾ) 103 (88 ಎಸೆತ) vs ಭಾರತ, 2011 [ಭಾರತಕ್ಕೆ ಜಯ]
ಒನ್ ಇಂಡಿಯಾಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications