Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲ ವಿಶ್ವಕಪ್ ನಲ್ಲೇ ವಿಕ್ರಮ ಸಾಧಿಸಿದ ವೇಗಿ ಬೌಲ್ಟ್

ಆಕ್ಲೆಂಡ್, ಮಾ.24: ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡ ನ್ಯೂಜಿಲೆಂಡ್ ನ ಯುವ ವೇಗಿ ಟ್ರೆಂಟ್ ಬೌಲ್ಟ್ ಅದ್ಭುತವನ್ನೇ ಸಾಧಿಸಿದ್ದಾರೆ. ಎಡಗೈ ವೇಗದ ಬೌಲರ್ ಬೌಲ್ಟ್ ಮಂಗಳವಾರ ಸೆಮಿಫೈನಲ್ ಪಂದ್ಯದಲ್ಲಿ 2ನೇ ವಿಕೆಟ್ ಪಡೆಯುತ್ತಿದ್ದಂತೆ ಶೇನ್ ವಾರ್ನ್ ದಾಖಲೆಯನ್ನು ಸರಿಗಟ್ಟಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ವೇಗಿ ಬೌಲ್ಟ್ ಅವರು 9 ಓವರ್ ಗಳಲ್ಲಿ 53ಕ್ಕೆ 2 ವಿಕೆಟ್ ಪಡೆದುಕೊಂಡರು. ಈ ಮೂಲಕ ವಿಶ್ವಕಪ್ ಟೂರ್ನಿ 2015ರಲ್ಲಿ 21 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುನ್ನಡೆ ಗಳಿಸಿದರು. ಇಲ್ಲಿ ತನಕ 14 ಮೇಡನ್ ಓವರ್ ಎಸೆದಿರುವ ಬೌಲ್ಟ್ ಕಿವೀಸ್ ತಂಡಕ್ಕೆ ಹೊಸ ಹುರುಪು ತಂದಿದ್ದಾರೆ.

ಜೆಫ್ ಅಲಾಟ್ ದಾಖಲೆ ಧೂಳಿಪಟ: ಇಂಗ್ಲೆಂಡ್ ನಲ್ಲಿ ನಡೆದ 1999ರ ವಿಶ್ವಕಪ್ ನಲ್ಲಿ ಜೆಫ್ ಅಲಾಟ್ 20 ವಿಕೆಟ್ ಪಡೆದುಕೊಂಡು ಕಿವೀಸ್ ದಾಖಲೆ ಬರೆದಿದ್ದರು. ಇದನ್ನು ಬೌಲ್ಟ್ ಅಳಿಸಿ ಹಾಕಿದ್ದಾರೆ.

WC 2015: Boult becomes New Zealander with most wickets in single edition

ಆದರೆ, ವಿಶ್ವಕಪ್ ಸಾರ್ವಕಾಲಿಕ ದಾಖಲೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾ ಎಲ್ಲರಿಗಿಂತ ಮುಂದಿದ್ದು, ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದ್ದಾರೆ. (26ವಿಕೆಟ್, 2007)

ವಿಶ್ವಕಪ್ ನಲ್ಲಿ ಅದ್ಭುತ ಬೌಲಿಂಗ್ ಸಾಧನೆ ಮಾಡಿದ ಬೌಲರ್ ಗಳ ಪಟ್ಟಿ:
* 11 ವಿಕೆಟ್- ಗ್ಯಾರಿ ಗಿಲ್ಮೋರ್ (ಆಸ್ಟ್ರೇಲಿಯಾ) -1975.
* 10- ಮೈಕ್ ಹೆಂಡ್ರಿಕ್ (ಇಂಗ್ಲೆಂಡ್)- 1979.
* 18- ರೋಜರ್ ಬಿನ್ನಿ (ಭಾರತ)-1983.
* 18- ಕ್ರೇಗ್ ಮೆಕ್ ಡರ್ಮಟ್(ಆಸ್ಟ್ರೇಲಿಯಾ)-1987
* 18- ವಾಸೀಂ ಅಕ್ರಂ (ಪಾಕಿಸ್ತಾನ)- 1992.
* 15-ಅನಿಲ್ ಕುಂಬ್ಳೆ(ಭಾರತ)-1996
* 20- ಜೆಫ್ ಅಲಾಟ್ (ನ್ಯೂಜಿಲೆಂಡ್), ಶೇನ್ ವಾರ್ನ್ (ಆಸ್ಟ್ರೇಲಿಯಾ) -1999.
* 23-ಚಮಿಂಡಾ ವಾಸ್ (ಶ್ರೀಲಂಕಾ) -2003.
* 26- ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ)-2007.
* 21-ಶಹೀದ್ ಅಫ್ರಿದಿ(ಪಾಕಿಸ್ತಾನ, ಜಾಹೀರ್ ಖಾನ್ (ಭಾರತ) -2011

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+