Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಕ್ಯಾಪ್ಟನ್ಸ್ : ಹಿರಿಯರಿಂದ ಕಿರಿಯ ನಾಯಕರ ಪಟ್ಟಿ

ಬೆಂಗಳೂರು, ಫೆ.17: ಪಾಕಿಸ್ತಾನದ ನಾಯಕ ಮಿಸ್ಬಾ ಉಲ್ ಹಕ್ ಅವರೇ ಈ ಬಾರಿಯ ವಿಶ್ವಕಪ್ ಟೂರ್ನಿಯ ಹಿರಿಯ ನಾಯಕ ಎಂದುಕೊಂಡರೆ ಅವರಿಗೂ ಹಿರಿಯನಾದ ಆಟಗಾರ ಯುಎಇ ತಂಡದಲ್ಲಿದ್ದಾರೆ. ಈ ಬಾರಿ ವಿಶ್ವಕಪ್ ನ ಹಿರಿಯ -ಕಿರಿಯ ನಾಯಕರ ಪಟ್ಟಿ ಇಲ್ಲಿದೆ

ಪಾಕಿಸ್ತಾನದ ನಾಯಕ ಮಿಸ್ಬಾ ಅವರು ವಿಶ್ವಕಪ್ ನಲ್ಲಿ ಸೆಂಚುರಿ ಬಾರಿಸಲು ಸಾಧ್ಯವಾಗಿಲ್ಲ. ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ವೃತ್ತಿ ಬದುಕಿನ 39ನೇ ಅರ್ಧ ಶತಕ ಬಾರಿಸಿದರು. ಒಂದು ವೇಳೆ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದರೆ ಹೊಸ ದಾಖಲೆ ನಿರ್ಮಾಣವಾಗುವುದಂತೂ ನಿಜ.

ಫೆ.17, 2015ರ ಲೆಕ್ಕಾಚಾರದಂತೆ ವಿಶ್ವಕಪ್ ಆಡುತ್ತಿರುವ 14 ತಂಡಗಳ ನಾಯಕರ ವಯೋಮಿತಿ ಏರಿಕೆಯಿಂದ ಇಳಿಕೆ ಕ್ರಮದಲ್ಲಿ ಪಟ್ಟಿ ಮಾಡಿದರೆ ಮಿಸ್ಬಾ ಅವರನ್ನು ಯುಎಇ ತಂಡದ ನಾಯಕ ಮಹಮ್ಮದ್ ತಾಕೀರ್ (43 ವರ್ಷ) ಹಿಂದಿಕ್ಕುತ್ತಾರೆ. ವೆಸ್ಟ್ ಇಂಡೀಸ್ ನ ನಾಯಕ ಹೋಲ್ಡರ್ (23) ಅತ್ಯಂತ ಕಿರಿಯ ನಾಯಕ ಎನಿಸಿದ್ದಾರೆ. ವಿಶ್ವಕಪ್ ನಾಯಕರ ವಯೋಮಿತಿ 23 ರಿಂದ 43 ರ ತನಕ ಇದೆ.

World Cup 2015, Captains, from oldest to youngest

* ಮಹಮ್ಮದ್ ತಾಕೀರ್ (ಯುಎಇ) ವಯಸ್ಸು: 43 ವರ್ಷ 34 ದಿನಗಳು, 5 ಪಂದ್ಯಗಳು.
* ಮಿಸ್ಬಾ ಉಲ್ ಹಕ್ (ಪಾಕಿಸ್ತಾನ), 40 ವರ್ಷ 265 ದಿನಗಳು, 156 ಪಂದ್ಯಗಳು.
* ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ), 33 ವರ್ಷ 321 ದಿನಗಳು, 238 ಪಂದ್ಯಗಳು.
* ಮಹೇಂದ್ರ ಸಿಂಗ್ ಧೋನಿ (ಭಾರತ), 33 ವರ್ಷ 225 ದಿನಗಳು, 255 ಪಂದ್ಯಗಳು.
* ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್), 33 ವರ್ಷ 143 ದಿನಗಳು, 242 ಪಂದ್ಯಗಳು.
* ಮಶ್ರಾಫೆ ಮೊರ್ತಾಜಾ (ಬಾಂಗ್ಲಾದೇಶ), 31 ವರ್ಷ 135 ದಿನಗಳು, 144 ಪಂದ್ಯಗಳು.
* ವಿಲಿಯಂ ಪೋರ್ಟರ್ಫೀಲ್ಡ್ (ಐರ್ಲೆಂಡ್), 30 ವರ್ಷ 164 ದಿನಗಳು, 74 ಪಂದ್ಯಗಳು.
* ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), 30 ವರ್ಷ 47 ದಿನಗಳು, 45 ಪಂದ್ಯಗಳು.
* ಎಬಿ ಡಿ ವಿಲೆಯರ್ಸ್ (ದಕ್ಷಿಣ ಆಫ್ರಿಕಾ), 30 ವರ್ಷ, 180 ಪಂದ್ಯಗಳು.
* ಎಲ್ಟಾನ್ ಚಿಂಗುಬರಾ (ಜಿಂಬಾಬ್ವೆ), 28 ವರ್ಷ 340 ದಿನಗಳು, 170 ಪಂದ್ಯಗಳು.
* ಇಯಾನ್ ಮಾರ್ಗನ್ (ಇಂಗ್ಲೆಂಡ್), 28 ವರ್ಷ 160 ದಿನಗಳು, 136 ಪಂದ್ಯಗಳು.
* ಏಂಜೆಲೋ ಮ್ಯಾಥ್ಯೂಸ್ (ಶ್ರೀಲಂಕಾ), 27 ವರ್ಷ 260 ದಿನಗಳು, 150 ಪಂದ್ಯಗಳು.
* ಪ್ರೆಸ್ಟನ್ ಮೊಮ್ಸೆನ್ (ಸ್ಕಾಟ್ಲೆಂಡ್), 27 ವರ್ಷ 126 ದಿನಗಳು, 31 ಪಂದ್ಯಗಳು.
* ಜಾಸನ್ ಹೋಲ್ಡರ್ (ವೆಸ್ಟ್ ಇಂಡೀಸ್), 23 ವರ್ಷ 104 ದಿನಗಳು, 27 ಪಂದ್ಯಗಳು

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+