ವಿಶ್ವಕಪ್ : ಭಾರತಕ್ಕೆ ಆಸ್ಟ್ರೇಲಿಯಾ ಮೊದಲ ಎದುರಾಳಿ
ದುಬೈ, ಡಿ.1: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ನ ಅಭ್ಯಾಸ ಪಂದ್ಯಗಳ ಪಟ್ಟಿ ಸೋಮವಾರ ಬಿಡುಗಡೆ ಮಾಡಲಾಗಿದೆ. ಲೀಗ್ ಪಂದ್ಯಗಳಿಗೂ ಮುನ್ನ ಟೀಂ ಇಂಡಿಯಾ ಮೊದಲಿಗೆ ಅಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಐಸಿಸಿ ವಿಶ್ವಕಪ್ 2015ರಲ್ಲಿ ಫೆ.15ರಂದು ಅಡಿಲೇಡ್ ನಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಲೀಗ್ ಪಂದ್ಯವನ್ನು ಆಡಲಿದೆ. ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ದ ಫೆ.8 ಹಾಗೂ ಅಫ್ಘಾನಿಸ್ತಾನ ವಿರುದ್ಧ ಫೆ. 10ರಂದು(ಎರಡು ಪಂದ್ಯ ಅಡಿಲೇಡ್ ಒವಲ್) ಆಡಲಿದೆ.

ಐಸಿಸಿ ಸೋಮವಾರ ಹೊರಡಿಸಿರುವ ಪ್ರಕಟಣೆಯಂತೆ ಒಟ್ಟಾರೆ 14 ಅಭ್ಯಾಸ ಪಂದ್ಯಗಳು ಅಡಿಲೇಡ್, ಕ್ರೈಸ್ಟ್ ಚರ್ಚ್, ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಫೆ.8 ರಿಂದ 13ರ ತನಕ ನಡೆಯಲಿದೆ.ಅದರೆ, ಈ ಅಭ್ಯಾಸ ಪಂದ್ಯಗಳನ್ನು ಅಧಿಕೃತ ಪಂದ್ಯಗಳೆಂದು ಐಸಿಸಿ ಪರಿಗಣಿಸುತ್ತಿಲ್ಲ. ಆಟದ ವೇಳೆ 11 ಆಟಗಾರರ ಬದಲಿಗೆ 15 ಆಟಗಾರರನ್ನು ಬಳಸುವ ಹೊಸ ಅವಕಾಶವನ್ನು ಈ ಅಭ್ಯಾಸ ಪಂದ್ಯಗಳಲ್ಲಿ ನೀಡಲಾಗುತ್ತಿದೆ.
ಫೆ.14ರಿಂದ ವಿಶ್ವಕಪ್ ಆರಂಭಗೊಳ್ಳಲಿದೆ. ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವೆ ಮೊದಲ ಪಂದ್ಯ ಹಾಗೂ ಅದೇ ದಿನ ಹಗಲು ರಾತ್ರಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸೆಣಸಲಿದೆ. ಮಾ.29 ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿದೆ.
ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಹೀಗಿದೆ
ಫೆ. 8, ಭಾನುವಾರ
* ಭಾರತ vs ಆಸ್ಟ್ರೇಲಿಯಾ
ಫೆ. 9 ಸೋಮವಾರ
* ದಕ್ಷಿಣ ಆಫ್ರಿಕಾ vs ಶ್ರೀಲಂಕಾ, ಕ್ರೈಸ್ಟ್ ಚರ್ಚ್
* ನ್ಯೂಜಿಲೆಂಡ್ vs ಜಿಂಬಾಬ್ವೆ, ಕ್ರೈಸ್ಟ್ ಚರ್ಚ್
* ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ಸಿಡ್ನಿ
* ಪಾಕಿಸ್ತಾನ vs ಬಾಂಗ್ಲಾದೇಶ, ಸಿಡ್ನಿ
ಫೆ. 10, ಮಂಗಳವಾರ
* ಐರ್ಲೆಂಡ್ vs ಸ್ಕಾಟ್ಲೆಂಡ್, ಸಿಡ್ನಿ
* ಭಾರತ vs ಅಫ್ಘಾನಿಸ್ತಾನ, ಅಡಿಲೇಡ್
ಫೆ. 11, ಬುಧವಾರ
* ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ, ಕ್ರೈಸ್ಟ್ ಚರ್ಚ್
* ಶ್ರೀಲಂಕಾ vs ಜಿಂಬಾಬ್ವೆ, ಕ್ರೈಸ್ಟ್ ಚರ್ಚ್
* ಆಸ್ಟ್ರೇಲಿಯಾ vs ಯುಎಇ, ಮೆಲ್ಬೋರ್ನ್
* ಇಂಗ್ಲೆಂಡ್ vs ಪಾಕಿಸ್ತಾನ, ಸಿಡ್ನಿ
ಫೆ. 12, ಗುರುವಾರ
* ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್, ಸಿಡ್ನಿ
* ಐರ್ಲೆಂಡ್ vs ಬಾಂಗ್ಲಾದೇಶ, ಸಿಡ್ನಿ
ಫೆ. 13, ಶುಕ್ರವಾರ
* ಅಫ್ಘಾನಿಸ್ತಾನ vs ಯುಎಇ, ಮೆಲ್ಬೋರ್ನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications