ಈ ಬಾರಿಯ ವಿಶ್ವಕಪ್ ಅಂಕ ಗಳಿಕೆ ಪಟ್ಟಿ ಹೇಗಿರುತ್ತದೆ?
ಬೆಂಗಳೂರು, ಜ. 9: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) 2015 ರ ವಿಶ್ವಕಪ್ ಅಂಕ ಮತ್ತು ಕ್ವಾಟರ್ ಫೈನಲ್ ಗೆ ತಲುಪುವ ದಾರಿಯ ಬಗೆಗಿನ ಮಾಹಿತಿ ಬಿಡುಗಡೆ ಮಾಡಿದೆ. ಗ್ರೂಪ್ ಹಂತದಲ್ಲಿ ಯಾವುದೇ ಎರಡು ತಂಡಗಳು ಸಮನಾದ ಅಂಕ ಗಳಿಸಿದರೆ ಮುಂದಿನ ಹಂತಕ್ಕೆ ಯಾವ ತಂಡ ತೆರಳಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ.
ಪ್ರತಿಯೊಂದು ಜಯಕ್ಕೆ 2 ಅಂಕ ಲಭ್ಯವಾಗುತ್ತದೆ. ಪಂದ್ಯ ಟೈ ಆದರೆ ಅಥವಾ ಫಲಿತಾಂಶ ಬಾರದಿದ್ದರೆ ಒಂದು ಅಂಕ ದೊರೆಯುತ್ತದೆ. ಸೂಪರ್ ಓವರಗೆ ಅವಕಾಶ ಕಲ್ಪಿಸಲಾಗಿಲ್ಲ. ಒಂದು ವೇಳೆ ಫೈನಲ್ ಪಂದ್ಯ ಟೈ ಆದರೂ ಅಥವಾ ಫಲಿತಾಂಶ ಬಾರದಿದ್ದರೂ ಟ್ರೋಫಿಯನ್ನು ಎರಡು ತಂಡಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕ ಕಲೆಹಾಕಿದ ತಂಡ ಸುಲಭವಾಗಿ ಕ್ವಾಟರ್ ಫೈನಲ್ ಆಡುವ ಅವಕಾಶ ಗಿಟ್ಟಿಸಿಕೊಳ್ಳುತ್ತದೆ. ಅಂಕಗಳು ಸಮನಾಗಿದ್ದರೆ ರನ್ ರೇಟ್ ಲೆಕ್ಕ ಹಾಕಲಾಗುವುದು.[ಐಸಿಸಿ ವಿಶ್ವಕಪ್ 2015: ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]
ಅಂಕ ಗಳಿಕೆ ಪಟ್ಟಿ ಹೀಗಿರುತ್ತದೆ
ಜಯ - 2 ಅಂಕ
ಟೈ ಅಥವಾ ಫಲಿತಾಂಶ ಬಾರದಿದ್ದರೆ - 1 ಅಂಕ
ಸೋಲು- 0
ಸಮನಾದ ಅಂಕ ಬಂದರೆ ಏನು ಮಾಡುತ್ತಾರೆ?
ಯಾವುದೇ ಎರಡು ತಂಡಗಳು ಲೀಗ್ ಹಂತದ ನಂತರ ಸಮನಾದ ಅಂಕ ಗಳಿಸಿದರೆ ಈ ಕೆಳಗಿನ ತಂತ್ರ ಅನುಸರಿಸಲಾಗುವುದು
ಅತಿ ಹೆಚ್ಚು ನೆಟ್ ರನ್ ರೇಟ್ ಹೊಂದಿರುವ ತಂಡಕ್ಕೆ ಮೊದಲು ಅವಕಾಶ ದೊರೆಯುತ್ತದೆ. ಒಂದು ವೇಳೆ ಇಲ್ಲೂ ಎರಡೂ ತಂಡಗಳ ಸಮನಾದ ಅಂಕ ಗಳಿಸಿದರೆ ಅವುಗಳ ನಡುವಿನ ಪಂದ್ಯದ ಫಲಿತಾಂಶ ಮತ್ತು ರನ್ ರೇಟ್ ಲೆಕ್ಕ ಹಾಕಲಾಗುತ್ತದೆ.[ರಾಹುಲ್ ದ್ರಾವಿಡ್ ಕನಸಿನ ತಂಡ ವಿಶ್ವಕಪ್ ಗೆಲ್ಲುವುದೇ?]
ಸಾಧ್ಯತೆ ಕಡಿಮೆ ತುಂಬಾ ಕಡಿಮೆ
ಇಷ್ಟೆಲ್ಲಾ ಪ್ರಕ್ರಿಯೆಗಳು ನಡೆದಾಗ ಯಾವ ತಂಡ ಮುನ್ನಡೆಯುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಒಂದು ವೇಳೆ ಇಲ್ಲಿಯೂ ಎರಡು ತಂಡಗಳನ್ನು ಪ್ರತ್ಯೇಕಿಲು ಸಾಧ್ಯವಾಗದಿದ್ದರೆ ಅವುಗಳ ಶ್ರೇಯಾಂಕದ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಲೀಗ್ ಹಂತದ ಎಲ್ಲಾ ಪಂದ್ಯಗಳಲ್ಲೂ ಫಲಿತಾಂಶ ಹೊರಹೊಮ್ಮದಿದ್ದರೆ ಶ್ರೇಯಾಂಕವೇ ತಂಡಗಳಿಗೆ ಆಧಾರ.
ಕ್ವಾಟರ್ ಫೈನಲ್ ಟೈ ಆದರೆ ಏನು ಮಾಡ್ತಾರೆ?
ಕ್ವಾಟರ್ ಫೈನಲ್ ಟೈ ಆದರೆ ಅಥವಾ ಫಲಿತಾಂಶ ಬಾರದಿದ್ದರೆ ಲೀಗ್ ಹಂತದಲ್ಲಿ ಯಾವ ತಂಡ ಹೆಚ್ಚಿನ ಅಂಕ ಗಳಿಸಿರುತ್ತದೆಯೋ ಅದು ಸುಲಭವಾಗಿ ಸೆಮಿಪೈನಲ್ ತಲುಪುತ್ತದೆ.[ವಿಶ್ವಕಪ್ ವೇಳಾಪಟ್ಟಿ]
ಸೆಮಿಫೈನಲ್ ಫಲಿತಾಂಶ ಬಾರದಿದ್ದರೆ ಏನು ಮಾಡ್ತಾರೆ?
ಇಲ್ಲಿಯೂ ಸಹ ಲೀಗ್ ಹಂತದ ಅಂಕಗಳೇ ತಂಡದ ನೆರವಿಗೆ ಬರುತ್ತವೆ. ಪಂದ್ಯ ಸಮನಾದರೆ ಮೊದಲ ಹಂತದಲ್ಲಿ ಹೆಚ್ಚಿನ ಅಂಕ ದಾಖಲು ಮಾಡಿದ್ದ ತಂಡ ಫೈನಲ್ ಗೆ ಅರ್ಹತೆ ಪಡೆದುಕೊಳ್ಳುತ್ತದೆ.
ಅಂತಿಮ ಪಂದ್ಯವೇ ಟೈ ಆದರೆ?
ಒಂದು ವೇಳೆ ಅಂತಿಮ ಪಂದ್ಯದಲ್ಲಿ ಫಲಿತಾಂಶ ಹೊರಹೊಮ್ಮದಿದ್ದರೆ ಎರಡು ತಂಡಗಳನ್ನು ಜಾಯಿಂಟ್ ವಿನ್ನರ್ಸ್ ಎಂದು ಘೋಷಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications