Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ನಲ್ಲಿ ಮೊದಲ ಜಯ ದಾಖಲಿಸಿದ ಇಂಗ್ಲೆಂಡ್

ಕ್ರೈಸ್ಟ್ ಚರ್ಚ್, ಫೆ. 23 : ಏಕದಿನ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ದುರ್ಬಲ ಸ್ಕಾಟ್ ಲ್ಯಾಂಡ್ ವಿರುದ್ಧ ತನ್ನ ಮೊದಲ ಜಯ ದಾಖಲಿಸಿದೆ. ಇಂಗ್ಲೆಂಡ್ ಆರಂಭಿಕ ಆಟಗಾರ ಮೋಯಿನ್ ಅಲಿ ಸಿಡಿಸಿದ (107 ಬಾಲ್) 128 ರನ್ ನೆರವಿನಿಂದ ಸ್ಕಾಟ್ ಲ್ಯಾಂಡ್ ನ್ನು 119 ರನ್ ಗಳಿಂದ ಬಗ್ಗು ಬಡಿದಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 303 ರನ್ ಗಳಿಸಿತು. ಇದನ್ನು ಬೆನ್ನು ಹತ್ತಿದ ಸ್ಕಾಟ್ ಲ್ಯಾಂಡ್ 42.2 ಓವರ್ ಗಳಲ್ಲಿ 184 ರನ್ ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿದ್ದ 'ಎ' ಗುಂಪಿನಲ್ಲಿರುವ ಇಂಗ್ಲೆಂಡ್ ಗೆ ಇದು ಮೊದಲ ಜಯವಾಗಿದೆ.[ಹರಿಣಗಳ ಕೈಯಿಂದ ಪಂದ್ಯ ಕಸಿದುಕೊಂಡ ರನೌಟ್ ಗಳು]

england

ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್ ಬೌಲರ್ ಗಳು ಸ್ಕಾಟ್ ಲ್ಯಾಂಡ್ ಗೆ ಯಾವ ಕ್ಷಣದಲ್ಲೂ ಹಿಡಿತ ಸಾಧಿಸಲು ಬಿಡಲಿಲ್ಲ. ಸ್ಕಾಟ್ ಲ್ಯಾಂಡ್ ಆರಂಭಿಕ ದಾಂಡಿಗ ಕೈಲ್ ಕೊಟ್ಜರ್ (84) ಏಕಾಂಗಿ ಹೋರಾಟ ಗೆಲುವು ದಾಖಲಿಸಲು ನೆರವಾಗಲಿಲ್ಲ.

ಬ್ಯಾಟಿಂಗ್ ನಲ್ಲಿ 128 ರನ್ ಸಿಡಿಸಿ, ಬೌಲಿಂಗ್ ನಲ್ಲಿ 47 ರನ್ ಗೆ 2 ವಿಕೆಟ್ ಕಿತ್ತು ಆಲ್ ರೌಂಡ್ ಪ್ರದರ್ಶನ ನೀಡಿದ ಮೊಯಿನ್ ಅಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+