Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೌಲ್ಟ್ ದಾಳಿಗೆ ಆಸೀಸ್ ತತ್ತರ, ಕಿವೀಸ್ ಗೆ ರೋಚಕ ಜಯ

ಆಕ್ಲೆಂಡ್, ಫೆ.28: ವಿಶ್ವಕಪ್ ಟೂರ್ನಿಯ 20ನೇ ಪಂದ್ಯದಲ್ಲಿ ಬದ್ಧವೈರಿಗಳ ಕಾದಾಟ ಪ್ರೇಕ್ಷಕರ ಕಣ್ತುಂಬಿಸಿದೆ. ಬೌಲರ್ ಗಳು ಮಿಂಚಿದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ 151ಸ್ಕೋರಿಗೆ ಆಲೌಟ್ ಆಯ್ತು. ಇದಕ್ಕೆ ಉತ್ತರವಾಗಿ ಕಿವೀಸ್ ತಂಡ ನಾಯಕ ಮೆಕಲಮ್ ತ್ವರಿತ ಗತಿ ಅರ್ಧಶತಕದ ನೆರವಿನಿಂದ ಸುಲಭ ಜಯ ಪಡೆಯುವ ಹೊಸ್ತಿಲಿಗೆ ಬಂದಿತು. ಅದರೆ ಅನಗತ್ಯವಾಗಿ ವಿಕೆಟ್ ಕಳೆದುಕೊಂಡು ಕೊನೆ ಓವರ್ ನಲ್ಲಿ ರೋಚಕವಾಗಿ 1 ವಿಕೆಟ್ ಜಯ ಸಾಧಿಸಿತು.

152 ಸ್ಕೋರ್ ಬೆನ್ನತ್ತಿದ ಕಿವೀಸ್ ತಂಡ ಬ್ರೆಂಡನ್ ಮೆಕಲಮ್ ರಿಂದ ಭರ್ಜರಿ ಆರಂಭ ಪಡೆದುಕೊಂಡಿತು. ಇನ್ನೊಂದೆಡೆ ಗಪ್ಟಿಲ್ 11 ರನ್ ಗಳಿಸಿ ಸ್ಟಾರ್ಕ್ ಗೆ ಬಲಿಯಾದರು.

World Cup Match 20 New Zealand vs Australia, Auckland

ಬ್ರೆಂಡನ್ ಮೆಕಲಮ್ 24 ಎಸೆತಗಳಲ್ಲಿ 50 ರನ್ (7X4, 3X6) ಸ್ಟ್ರೈಕ್ ರೇಟ್ 208.3 ನಂತೆ ಗಳಿಸಿ ಕಮಿನ್ಸ್ ಎಸೆತದಲ್ಲಿ ಸ್ಟಾರ್ಕಿಗೆ ಕ್ಯಾಚಿತ್ತು ಔಟಾಗಿದ್ದಾರೆ. 8 ಓವರ್ ಗಳಲ್ಲಿ 79/3 ಸ್ಕೋರ್ ಮಾಡಿತು. ನಂತರ ನಿರಂತರವಾಗಿ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತು.

ಆಸೀಸ್ ಪರ ಮಿಚೆಲ್ ಸ್ಟಾರ್ಕ್ 9-0-28-6 ಅದ್ಭುತ ಬೌಲಿಂಗ್ ಮಾಡಿ ಪಂದ್ಯದ ರೋಚಕತೆ ಹೆಚ್ಚಿಸಿದರು. ಅದರೆ, ಕೋರೆ ಆಂಡರ್ಸನ್ 26, ಕೇನ್ ವಿಲಿಯಮ್ಸನ್ 45 (42ಎಸೆತ, 5 ಬೌಂಡರಿ, 1ಸಿಕ್ಸ್) ರನ್ ಬಾರಿಸಿ ಅಜೇಯರಾಗಿ ಉಳಿದು ತಂಡಕ್ಕೆ ಜಯ ತಂದಿತ್ತರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತದ ನಂತರ ಚೇತರಿಸಿಕೊಳ್ಳಲು ಹೆಣಗಾಡಿತು. ಟ್ರೆಂಟ್ ಬೌಲ್ಟ್ 10-3-27-5 ಉತ್ತಮ ಬೌಲಿಂಗ್ ಮೂಲಕ ಆಸೀಸ್ ಬ್ಯಾಟ್ಸ್ ಮನ್ ಗಳನ್ನು ಕಂಗೆಡಿಸಿದರು. ವೆಟ್ಟೋರಿ ಹಾಗೂ ಸೌಥಿ 2 ವಿಕೆಟ್ ಕಿತ್ತರು.

ಆಸೀಸ್ ಪರ ವಾರ್ನರ್ 34, ವಾಟ್ಸನ್ 23, ವಿಕೆಟ್ ಕೀಪರ್ ಹಡ್ಡಿನ್ 43(41ಎ, 4x4, 2x6) ಗಳಿಸಿ ಹಾಗೂ ಹೀಗೂ ತಂಡದ ಮೊತ್ತವನ್ನು 32.2 ಓವರ್ ಗಳಲ್ಲಿ 151ಕ್ಕೇರಿಸಿದರು.

ಈ ಹಿಂದೆ 2011ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಎಲೆಂಡ್ ನಾಗ್ಪುರದಲ್ಲಿ ಮುಖಾಮುಖಿಯಾಗಿತ್ತು. ಆಸ್ಟ್ರೇಲಿಯ ತಂಡ ನ್ಯೂಜಿಲೆಂಡ್ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿತ್ತು. ಈ ಸೇಡನ್ನು ಸಕತ್ತಾಗಿ ಕಿವೀಸ್ ತೀರಿಸಿಕೊಂಡಿದೆ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+