ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸುಲಭ ತುತ್ತಾದ ಸ್ಕಾಟ್ಲೆಂಡ್
ಹೋಬಾರ್ಟ್, ಮಾ.14: ಆಸ್ಟ್ರೇಲಿಯಾದ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸುಲಭ ಜಯ ದಾಖಲಿಸಿ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ತಲುಪಿದೆ. 130 ಅಲ್ಪ ಸ್ಕೋರ್ ಚೇಸ್ ಮಾಡಿದ ಆಸ್ಟ್ರೇಲಿಯಾ ತಂಡ 15.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಜಯ ದಾಖಲಿಸಿತು.
ಟಾಸ್ ಗೆದ್ದ ಮೈಕಲ್ ಕ್ಲಾರ್ಕ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ದಾಳಿಗೆ ಸಿಲುಕಿ ಸ್ಕಾಟ್ಲೆಂಡ್ ತಂಡ 130ಸ್ಕೋರಿಗೆ ಆಲೌಟ್ ಆಯಿತು. 130 ರನ್ ಚೇಸ್ ಮಾಡಿದ ಆಸ್ಟ್ರೇಲಿಯಾಕ್ಕೆ ನಾಯಕ ಮೈಕಲ್ ಕ್ಲಾರ್ಕ್ ಆರಂಭಿಕರಾಗಿ ಕಣಕ್ಕಿಳಿದರು.
ಕ್ಲಾಕ್ 47ರನ್ ಹಾಗೂ ಅರೋನ್ ಫಿಂಚ್ 20 ರನ್ ಗಳಿಸಿ ಔಟಾದರೆ, ವಾಟ್ಸನ್ 24ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ನಂತರ ಬಂದ ವಾರ್ನರ್ ಹಾಗೂ ಫಾಲ್ಕ್ ನರ್ ಅವರು ಗೆಲುವಿನ ದಡ ಮುಟ್ಟಿಸಿದರು.

ಇದಕ್ಕೂ ಮುನ್ನ ಸ್ಕಾಟ್ಲೆಂಡ್ ತಂಡ 25.4 ಓವರ್ ಗಳಲ್ಲಿ 130ಸ್ಕೋರಿಗೆ ಸರ್ವಪತನ ಕಂಡಿತು. ಸ್ಕಾಟ್ಲೆಂಡ್ ಪರ ಮಾಚನ್ 40, ಮೆಕ್ ಲೊಯಿಡ್ 22 ಹಾಗೂ ಡೇವಿ 26 ಮತ್ತು ಲೀಸ್ಕ್ 23ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ಕಾಟ್ಲೆಂಡ್ ತಂಡದಲ್ಲಿ ಐವರು ಶೂನ್ಯ ಸುತ್ತಿದ್ದು ವಿಶೇಷವಾಗಿತ್ತು.

ಆಸ್ಟ್ರೇಲಿಯಾ ಪರ ಮಾರಕ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ 4.4-1-14-4, ಕಮಿನ್ಸ್ 42ಕ್ಕೆ3 ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ಉಳಿದಂತೆ, ವಾಟ್ಸನ್, ಜಾನ್ಸನ್ ಹಾಗೂ ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಗಳಿಸಿ ಸ್ಕಾಟ್ಲೆಂಡ್ ಸರ್ವಪತನಕ್ಕೆ ಕಾರಣವಾದರು.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications