ಕ್ವಾರ್ಟರ್ ಫೈನಲ್ : ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ಅಪ್ಡೇಟ್ಸ್
ಸಿಡ್ನಿ, ಮಾ.18 : ವಿಶ್ವಕಪ್ ಟೂರ್ನಿಯ ಲೀಗ್ ಹಂತಗಳು ಮುಗಿದು ಈಗ ನಾಕೌಟ್ ಹಂತದ ಪಂದ್ಯಗಳು ಇಂದಿನಿಂದ ಆರಂಭಗೊಂಡಿದೆ. ದಕ್ಷಿಣ ಆಫ್ರಿಕಾ ಸ್ಪಿನ್ ದಾಳಿಗೆ ತತ್ತರಿಸಿದ ಲಂಕಾ 37.2 ಓವರ್ ಗಳಲ್ಲಿ 133 ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು, ಸುಲಭ ಮೊತ್ತದ ಗುರಿಯನ್ನು ಪಡೆದ ಎಬಿ ಡಿವಿಲೆಯರ್ಸ್ ಪಡೆ 18 ಓವರ್ ಗಳಲ್ಲಿ ಗುರಿ ತಲುಪಿ 9 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿತು. ಆದರೆ, ಎರಡನೇ ಓವರ್ ನಲ್ಲೇ ಆರಂಭಿಕ ಆಟಗಾರ ಪೆರೆರಾ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಪಂದ್ಯದ ಅಪ್ದೇಟ್ಸ್ ಇಲ್ಲಿದೆ:
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:
* ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತ ತಲುಪಿದ ಸಾಧನೆ ಮಾಡಿದೆ.
* 133ರನ್ ಚೇಸ್ ಮಾಡಿದ ದಕ್ಷಿಣ ಆಫ್ರಿಕಾ 18 ಓವರ್ ಗಳಲ್ಲಿ 134/1 ಸ್ಕೋರ್ ಮಾಡಿ ಜಯ ದಾಖಲಿಸಿದೆ.
* ಡಿ ಕಾಕ್ ಅಮೋಘ ಬ್ಯಾಟಿಂಗ್ 57 ಎಸೆತಗಳಲ್ಲಿ 78ರನ್ (12 ಬೌಂಡರಿ) ಸಿಡಿಸಿ ತಂಡಕ್ಕೆ ಜಯ ತಂದಿತ್ತರು.
* ಹಶೀಂ ಆಮ್ಲಾ 16 ರನ್ ಗಳಿಗೆ ಮಾಲಿಂಗಗೆ ಬಲಿ. ಡುಫ್ಲೆಸಿಸ್ ಕಣಕ್ಕೆ
* ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಅದ್ಭುತ ಆರಂಭ ಒದಗಿಸಿದ ಡಿ ಕಾಕ್

***
* ಜೆಪಿ ಡುಮಿನಿ 9-1-29-3 ಉತ್ತಮ ಬೌಲಿಂಗ್, ಸ್ಟೇನ್, ಅಬಾಟ್, ಮಾರ್ಕೆಲ್ ಗೆ ತಲಾ 1 ವಿಕೆಟ್
* ಸ್ಪಿನ್ನರ್ ಇಮ್ರಾನ್ ತಾಹೀರ್ ಅದ್ಭುತ ಬೌಲಿಂಗ್ 8.2-0-26-4.
* ಆಲೌಟ್! ಶ್ರೀಲಂಕಾ ತಂಡ 37.2 ಓವರ್ ಗಳಲ್ಲಿ 133 ಸ್ಕೋರಿಗೆ ಆಲೌಟ್.
* ಕುಮಾರ್ ಸಂಗಕ್ಕಾರ ಕೊನೆಗೂ ಔಟ್. 96 ಎಸೆತಗಳಲ್ಲಿ 45ರನ್(3ಬೌಂಡರಿ)
* ಇಮ್ರಾನ್ ತಾಹೀರ್ 34ನೇ ಓವರ್ ನಲ್ಲಿ ಮತ್ತೊಂದು ವಿಕೆಟ್ ಕಿತ್ತರು. 115/6.
* ನಾಯಕ ಏಂಜಲೋ ಮ್ಯಾಥ್ಯೂಸ್ 19( ಎಸೆತ)ಗಳಿಸಿ ಜೆಪಿ ಡುಮುನಿ ಬೌಲಿಂಗ್ ನಲ್ಲಿ ಔಟ್. ಲಂಕಾ 114/5
* 32 ಓವರ್ ಅಂತ್ಯಕ್ಕೆ 109/4 ಸ್ಕೋರ್ ಮಾಡಿರುವ ಶ್ರೀಲಂಕಾ ತ್ವರಿತಗತಿ ರನ್ ಗಳಿಸಲು ಪರದಾಡುತ್ತಿದೆ.
* 28.1 ಓವರ್ ಗಳಲ್ಲಿ 100 ರನ್ ಸ್ಕೋರ್ ಮಾಡಿದ ಶ್ರೀಲಂಕಾ ಈ ವಿಶ್ವಕಪ್ ಟೂರ್ನಿಯ ಅತ್ಯಂತ ನಿಧಾನಗತಿಯ ತಂಡದ ಸ್ಕೋರ್ ಎನಿಸಿದೆ.
* ಆರಂಭಿಕ ಆಟಗಾರನಾಗಿ ಕಣಕ್ಕಿಳಿಯದೆ ಎರಡು ವಿಕೆಟ್ ಬಿದ್ದ ನಂತರ ಬಂದ ತಿರಿಮನ್ನೆ 48 ಎಸೆತಗಳಲ್ಲಿ 41 ರನ್ ಚೆಚ್ಚಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ, ಇಮ್ರಾನ್ ತಾಹೀರ್ ಗೆ ಕ್ಯಾಚಿತ್ತು ಔಟಾದರು
* ಟೂರ್ನಿಯ ವೈಫಲ್ಯ ಎನಿಸಿರುವ ಜಯವರ್ದನೆ 16 ಎಸೆತಗಳಲ್ಲಿ 4 ರನ್ ಗಳಿಸಿ ಇಮ್ರಾನ್ ತಾಹೀರ್ ಗೆ ಬಲಿಯಾದರು.
ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾ ತಂಡ ಸೇರಿರುವ ಅಬಾಟ್ ತಮ್ಮ ಮೊದಲ ಓವರ್ ನಲ್ಲೇ ವಿಕೆಟ್ ಪಡೆದರು. ನಂತರ ಡೇಲ್ ಸ್ಟೇನ್ ಅವರು ಪಂದ್ಯದ ಐದನೇ ಓವರ್ ನಲ್ಲಿ ದಿಲ್ಶನ್ ಅವರನ್ನು ಪೆವಿಲಿಯನ್ ಗೆ ಕಳಿಸಿದರು.

ಶ್ರೀಲಂಕಾ ತಂಡ ನಿಗೂಢ ಶೈಲಿ ಬೌಲಿಂಗ್ ವುಳ್ಳ ಮುತ್ತಯ್ಯ ಮುರಳೀಧರನ್ ನಕಲು ಎನ್ನಲಾಗುವ ಥರಿಂಡು ಕೌಶಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಗಾಯಗೊಂಡಿರುವ ಹೇರಾತ್ ತಂಡದಿಂದ ಹೊರಬಿದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications