ಬಾಂಗ್ಲಾ vs ಭಾರತ: ವಿಶ್ವಕಪ್ ಹಿಂದಿನ ಪಂದ್ಯಗಳಲ್ಲಿ ಗೆದ್ದವರು-ಬಿದ್ದವರ್ಯಾರು!?

ಬರ್ಮಿಂಗ್‌ಹ್ಯಾಮ್, ಜುಲೈ 2: ಕ್ರಿಕೆಟ್ ರಂಗದಲ್ಲಿ ಭಾರತಕ್ಕೆ ಪಾಕಿಸ್ತಾನ ಬದ್ಧ ಎದುರಾಳಿ ತಂಡವಾಗಿ ಕಾಣಿಸಿಕೊಂಡರೆ, ಪಾಕ್ ಬಳಿಕ ಭಾರತ ಮತ್ತು ಬಾಂಗ್ಲಾ ಕದನ ಹೆಚ್ಚು ಕುತೂಹಲಕಾರಿ ಅನ್ನಿಸೋದಿದೆ. ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ಮಣಿಸಿರುವ ಕೊಹ್ಲಿ ಬಳಗ ಮಂಗಳವಾರ (ಜುಲೈ 2) ವಿಶ್ವಕಪ್ 40ನೇ ಪಂದ್ಯದಲ್ಲಿ ಬಾಂಗ್ಲಾವನ್ನು ಎದುರುಗೊಳ್ಳಲಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಇತ್ತಂಡಗಳ ಈ ಕದನವನ್ನು ಭಾರತ ಗೆದ್ದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಬಳಿಕ ಸೆಮಿಫೈನಲ್ ಪ್ರವೇಶಿಸಿದ ಎರಡನೇ ತಂಡವಾಗಿ ಗುರುತಿಸಿಕೊಳ್ಳಲಿದೆ. ಬಾಂಗ್ಲಾ ಗೆದ್ದರೆ, ಬಾಂಗ್ಲಾದ ಸೆಮಿಫೈನಲ್ ಕನಸಿಗೆ ಮತ್ತಷ್ಟು ಶಕ್ತಿ ಬರಲಿದೆ. ಇಂದಿನ ಪಂದ್ಯದ ಫಲಿತಾಂಶ ಸೆಮಿಫೈನಲ್ ನಿಟ್ಟಿನಲ್ಲಿಂತೂ ಪ್ರಮುಖ ಪರಿಣಾಮ ಬೀರಲಿದೆ.
ಭಾರತ vs ಬಾಂಗ್ಲಾದೇಶ, ಜುಲೈ 2, Live ಸ್ಕೋರ್‌ಕಾರ್ಡ್
ವಿಶ್ವಕಪ್ ಈ ಹಿಂದಿನ ಬಾಂಗ್ಲಾ-ಭಾರತ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ್ದು ಭಾರತವೆ. ವಿಶ್ವಕಪ್‌ನಲ್ಲಿ ಬಾಂಗ್ಲಾ ಮತ್ತು ಭಾರತ ತಂಡಗಳು ಇಲ್ಲೀವರೆಗೆ ಒಟ್ಟಿಗೆ 3 ಸಾರಿ ಕಾದಾಡಿವೆ. ಇದರಲ್ಲಿ ಭಾರತ 2 ಬಾರಿ ಗೆದ್ದಿದ್ದರೆ, ಬಾಂಗ್ಲಾ 1 ಸಾರಿ ಜಯ ದಾಖಲಿಸಿದೆ.
ಟ್ರಿನಿಡಾಡ್ ಆ್ಯಂಡ್ ಟೊಬಾಗೊದಲ್ಲಿ 2007ರಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಭಾರತ, ಬಾಂಗ್ಲಾ ವಿರುದ್ಧ 5 ವಿಕೆಟ್ ಸೋಲನುಭವಿಸಿತ್ತು. ಆ ಬಳಿಕ ಬಾಂಗ್ಲಾ ವಿರುದ್ಧ ಭಾರತ ಸೋತಿದ್ದೇ ಇಲ್ಲ. 2011ರಲ್ಲಿ 87 ರನ್, 2015ರಲ್ಲಿ 109 ರನ್ ಗೆಲುವು ದಾಖಲಿಸಿದ ಹಿರಿಮೆ ಭಾರತದ್ದು.
ಬಾಂಗ್ಲಾ ತಂಡ: ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಲಿಟಾನ್ ದಾಸ್, ಮಹಮ್ಮದುಲ್ಲಾ, ಮೊಸದ್ದೇಕ್ ಹುಸೇನ್, ಮೊಹಮ್ಮದ್ ಸೈಫುದ್ದೀನ್, ಮೆಹಿದಿ ಹಸನ್, ಮಶ್ರಫ್ ಮೊರ್ತಾಜಾ, ಮುಸ್ತಾಫಿಜುರ್ ರಹಮಾನ್.
ಭಾರತ ತಂಡ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಎಂ.ಎಸ್.ಧೋನಿ, ಕೇದಾರ್ ಜಾಧವ್/ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ.
{headtohead_cricket_10_3}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications