Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ICC World Cup 2019 : ವಿಶ್ವಕಪ್ ಗೆಲ್ಲುವ ಸೂಚನೆ ನೀಡಿದ ಆಸಿಸ್ ತಂಡ..! | Oneindia Kannada
World cup 2019: England vs Australia, Match 32 - Live Score

ಲಂಡನ್, ಜೂನ್ 25: ಐಸಿಸಿ ವಿಶ್ವಕಪ್ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಗುರುತಿಸಿಕೊಂಡಿದೆ. ಮಂಗಳವಾರ (ಜೂನ್ 25) ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 32ನೇ ಪಂದ್ಯದಲ್ಲಿ ಆಸೀಸ್ ತಂಡ ಆತಿಥೇಯ ಇಂಗ್ಲೆಂಡ್‌ ತಂಡವನ್ನು 64 ರನ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ನಾಯಕ ಆ್ಯರನ್ ಫಿಂಚ್ ಶತಕ, ಡೇವಿಡ್ ವಾರ್ನರ್ ಅರ್ಧಶತಕ ಮತ್ತು ಜೇಸನ್ ಬೆಹ್ರೆಂಡೋರ್ಫ್, ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಕಾಂಗರೂ ಬಳಗ ಲೀಗ್ ಹಂತದ ಸ್ಪರ್ಧೆಯಲ್ಲಿ ಮುನ್ನಡೆ ಗಿಟ್ಟಿಸಿಕೊಂಡಿದೆ. ಇತ್ತ ಆತಿಥೇಯ ಇಂಗ್ಲೆಂಡ್ ಸತತ 2 ಸೋಲು ಅನುಭವಿಸಿದಂತಾಗಿದೆ. ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಅಗ್ರ ಸ್ಥಾನ ಆವರಿಸಿಕೊಂಡಿದೆ.

ಇಂಗ್ಲೆಂಡ್ vs ಆಸ್ಟ್ರೇಲಿಯಾ, ಜೂನ್ 25, Live ಸ್ಕೋರ್‌ಕಾರ್ಡ್

1
43675

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸೀಸ್‌ಗೆ ನಾಯಕ ಆ್ಯರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಅವರ ಉತ್ತಮ ಜೊತೆಯಾಟದ ನೆರವು ಲಭಿಸಿತು. ಫಿಂಚ್ 100, ವಾರ್ನರ್ 53, ಉಸ್ಮಾನ್ ಖವಾಜಾ 23, ಗ್ಲೆನ್ ಮ್ಯಾಕ್ಸ್‌ವೆಲ್ 12, ಸ್ಟೀವ್ ಸ್ಮಿತ್ 38, ಮಾರ್ಕಸ್ ಸ್ಟೋಯ್ನಿಸ್ 8, ಅಲೆಕ್ಸ್ ಕ್ಯಾರಿ 38 ರನ್ ಕೊಡುಗೆಯಿತ್ತರು.

ಕಾಂಗರೂ ಪಡೆ 50 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ನಷ್ಟದಲ್ಲಿ 285 ರನ್ ಬಾರಿಸಿತು. ಆಸೀಸ್ ಇನ್ನಿಂಗ್ಸ್ ವೇಳೆ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ 2, ಜೋಫ್ರಾ ಆರ್ಚರ್, ಮಾರ್ಕ್‌ವುಡ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ ತಲಾ ಒಂದೊಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬಿಟ್ಟರೆ ಯಾರ ಬೆಂಬಲವೂ ದೊರೆಯಲಿಲ್ಲ. ಸ್ಟೋಕ್ಸ್ 89 ರನ್‌ ಗಳೊಂದಿಗೆ ತಂಡದ ಪರ ಕೊಂಚ ಹೋರಾಟ ನಡೆಸಿದರು. ಇನ್ನುಳಿದಂತೆ ಜಾನಿ ಬೇರ್ಸ್ಟೋವ್ 27, ಜೋಸ್ ಬಟ್ಲರ್ 25, ಕ್ರಿಸ್ ವೋಕ್ಸ್ 26, ಆದಿಲ್ ರಶೀದ್ 25 ರನ್ ಬಾರಿಸಿದ್ದೇ ಹೆಚ್ಚೆನಿಸಿತು.

ಇಂಗ್ಲೆಂಡ್ 44.4 ಓವರ್‌ ಮುಕ್ತಾಯಕ್ಕೆ ಸರ್ವ ಪತನ ಕಂಡು, 221 ರನ್ ಬಾರಿಸಲಷ್ಟೇ ಶಕ್ತವಾಯ್ತು. ಎಲ್ಲದಕ್ಕಿಂತ ಮುಗಿಲಾಗಿ ಆಸ್ಟ್ರೇಲಿಯಾ ಬೌಲರ್‌ಗಳು ಇಂಗ್ಲೆಂಡ್ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಬೆಹ್ರೆಂಡೋರ್ಫ್ 44 ರನ್‌ಗೆ 5, ಸ್ಟಾರ್ಕ್ 43 ರನ್‌ಗೆ 4, ಮಾರ್ಕಸ್ ಸ್ಟೋಯ್ನಿಸ್ 1 ವಿಕೆಟ್ ಪಡೆದು ಪಾರಮ್ಯ ಮೆರೆದರು. ಆ್ಯರನ್ ಫಿಂಚ್ ಪಂದ್ಯಶ್ರೇಷ್ಠರೆನಿಸಿದರು.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೇಸನ್ ಬೆಹ್ರೆಂಡೋರ್ಫ್.

ಇಂಗ್ಲೆಂಡ್ ತಂಡ: ಜೇಮ್ಸ್ ವಿನ್ಸ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಇಯಾನ್ ಮಾರ್ಗಾನ್ (ಸಿ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ಪ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.

{headtohead_cricket_2_1}

Story first published: Tuesday, June 25, 2019, 23:29 [IST]
Other articles published on Jun 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+