ವಿಶ್ವಕಪ್: ಸೋಲಿಗೆ ಕಾರಣ ಹೇಳಿದ ದ.ಆಫ್ರಿಕಾ ನಾಯಕ ಫಾಫ್ ಡು'ಪ್ಲೆಸಿಸ್

ಲಂಡನ್, ಮೇ 31: ಕ್ರಿಕೆಟ್‌ನ ಎಲ್ಲಾ ವಿಭಾಗಗಳಲ್ಲಿಯೂ ಇಂಗ್ಲೆಂಡ್ ತಂಡ ನಮ್ಮ ತಂಡಕ್ಕಿಂತಲೂ ಉತ್ತಮವಾಗಿ ಆಡಿತು ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡು'ಪ್ಲೆಸಿಸ್ ಹೇಳಿದ್ದಾರೆ. ಇದೀಗ ಮೊದಲ ಸೋಲಿನ ಕಹಿ ಮರೆತು ಮುಂದಿನ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಳ್ಳುವ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.
ಓವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ತಂಡ 104 ರನ್‌ಗಳ ಹಿನಾಯ ಸೋಲನುಭವಿಸಿತು. ಪಂದ್ಯದಲ್ಲಿ 312 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಹರಿಣ ಪಡೆ 40 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲ್ಔಟ್ ಆಯಿತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು
"ಇದು ಅತ್ಯಂತ ಮಹತ್ವದ ಹಂತ. ಅತ್ಯಂತ ಗುಣಮಟ್ಟದ ಎದುರಾಳಿಗಳ ವಿರುದ್ಧ ಪೈಪೋಟಿ ನಡೆಸುವಂತಾಗುತ್ತದೆ. ಅಂತೆಯೇ ಇಂಗ್ಲೆಂಡ್ ನಮ್ಮೆದುರು ಕ್ರಿಕೆಟ್‌ನ ಮೂರೂ ವಿಭಾಗಗಳಲ್ಲಿ ಪ್ರಾಬಲ್ಯ ಮೆರೆಯಿತು. ಇಂಗ್ಲೆಂಡ್ ತಾವೇಕೆ ಫೇವರಿಟ್ಸ್ ಎಂಬುದನ್ನು ತೋರಿಸಿಕೊಟ್ಟಿತು. ಈಗ ನಮ್ಮ ಗುರಿಯೇನಿದ್ದರೂ ಲೀಗ್‌ನ ಮುಂದಿನ ಪಂದ್ಯಗಳತ್ತ ಗಮನ ನೀಡುವುದಾಗಿದೆ,'' ಎಂದು ಫಾಫ್ ಹೇಳಿದ್ದಾರೆ.
ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಪ್ರಿಡಿಕ್ಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
"ಮೊದಲ ಪಂದ್ಯದಲ್ಲಿನ ಪ್ರದರ್ಶನ ನಮಗೇ ಬೇಸರ ತಂದಿದೆ. ಇದರಿಂದ ಬಹುಬೇಗನೆ ಪಾಠ ಕಲಿತು ಚೇತರಿಸಬೇಕಿದೆ. ಏಕೆಂದರೆ, ಮುಂದಿನ ಪಂದ್ಯವನ್ನಾಡಲು ಸಜ್ಜಾಗಬೇಕಿದೆ. ಇಲ್ಲಿ ಉತ್ತಮ ಕ್ರಿಕೆಟ್ ಆಡುವುದರ ಕಡೆಗೆ ಎಚ್ಚರಿಕೆ ವಹಿಸಬೇಕಿದೆ,'' ಎಂದು ಫಾಫ್ ಡು'ಪ್ಲೆಸಿಸ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಪಂದ್ಯದಲ್ಲಿ ಬ್ಯಾಟಿಂಗ್ ಬಲಿಷ್ಠ ಇಂಗ್ಲೆಂಡ್ ತಂಡವನ್ನು 50 ಓವರ್‌ಗಳಲ್ಲಿ 311/8 ರನ್‌ಗಳಿಗೆ ನಿಯಂತ್ರಿಸುವಲ್ಲಿ ಹರಿಣ ಪಡೆ ಯಸಸ್ವಿಯಾಗಿತ್ತು. ಇಲ್ಲಿ ಕೊನೆಯ 10 ಓವರ್‌ಗಳಲ್ಲಿ ಕೇವಲ 76 ರನ್‌ಗಳನ್ನು ಮಾತ್ರವೇ ಬಿಟ್ಟುಕೊಟ್ಟಿದ್ದು ಗಮನಾರ್ಹ. ಲುಂಗಿ ಎನ್ಗಿಡಿ ಮೂರು ವಿಕೆಟ್ ಉರುಳಿಸಿದರೆ, ಕಗಿಸೊ ರಬಾಡ ಮತ್ತು ಅನುಭವಿ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಪಡೆದು ಇಂಗ್ಲೆಂಡ್‌ಗೆ ಆಸರೆಯಾಗಿದ್ದರು.
"310 ರನ್‌ಗಳ ಗುರಿ ಬೆನ್ನತ್ತಿದಾಗ ಉತ್ತಮ ಆರಂಭ ಅನಿವಾರ್ಯವಾಗಿರುತ್ತದೆ. ಆದರೆ, ಇದು ನಮ್ಮ ತಂಡಕ್ಕೆ ಸಿಗಲಿಲ್ಲ. ಮೊದಲಿಗೆ ಹಶೀಮ್ ಆಮ್ಲಾ ಗಾಯಗೊಂಡರೆ, ಅದರ ಬೆನ್ನಲ್ಲೇ ಏಡನ್ ಮಾರ್ಕ್ರಮ್ ಕೂಡ ಪೆವಿಲಿಯನ್ ಸೇರಿದರು. ದೊಡ್ಡ ಮೊತ್ತ ಬೆನ್ನತ್ತಿದಾಗ ಈ ರೀತಿಯ ಆರಂಭಿಕ ಆಘಾತ ಎದುರಾದರೆ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ," ಎಂದು ಡು'ಪ್ಲೆಸಿಸ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧ ಜೂನ್ 2ರಂದು ಓವಲ್ ಕ್ರೀಡಾಂಗಣದಲ್ಲೇ ಪೈಪೋಟಿ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications