Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ನ ಪೂನಂ ಪಾಂಡೆಯೆಂದು ಫ್ಯಾನ್ಸ್‌ ನಾಮಕರಣ ಮಾಡಿದ್ದೇಕೆ?

world cup 2019: Fans call a model as UKs Poonam Pandey

ಲಂಡನ್‌, ಜುಲೈ 21: ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಬರೆಯಿತು. ಕಳೆದ ಭಾನುವಾರ (ಜುಲೈ 14) ನಡೆದ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿದ ಇಂಗ್ಲೆಂಡ್‌ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಇತಿಹಾಸ ಪ್ರಸಿದ್ಧ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡರ್‌ ತಂಡಗಳು ಸೀಮಿತ ಓವರ್‌ಗಳು ಮತ್ತು ಸೂಪರ್‌ ಓವರ್‌ ಎರಡರಲ್ಲೂ ಸಮಬಲ ಸಾಧಿಸಿದ್ದವು. ಅಂತಿಮವಾಗಿ ಟೈ ಬ್ರೇಕರ್‌ ನಿಯಮದ ಅನುಗುಣವಾಗಿ ಅತಿ ಹೆಚ್ಚು ಬೌಂಡರಿಗಳನ್ನು (26-17) ಗಳಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಪ್ರಶಸ್ತಿ ಒಲಿದಿತ್ತು.

2019ರ ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ ಹಲವು ಬಾರಿ ಫೈನಲ್‌ ತಲುಪಿತ್ತಾದರೂ ಪ್ರಸಸ್ತಿ ಗೆಲುವು ಮಾತ್ರ ಸಾಧ್ಯವಾಗಿರಲಿಲ್ಲ. ಅದರಲ್ಲೂ 1992ರ ವಿಶ್ವಕಪ್‌ ಫೈನಲ್‌ನಲ್ಲಿ ಇಮ್ರಾನ್‌ ಖಾನ್‌ ಸಾರಥ್ಯದ ಪಾಕಿಸ್ತಾನ ತಂಡದ ಎದುರು ಸೋತ ಇಂಗ್ಲೆಂಡ್‌ ತಂಡ ಬಳಿಕ 2019ರ ವಿಶ್ವಕಪ್‌ ವರೆಗೆ ಅಂತಹ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಆದರೆ, 2019ರ ವಿಶ್ವಕಪ್‌ನಲ್ಲಿ ಆತಿಥ್ಯ ವಹಿಸುವುದರ ಜೊತೆಗೆ ಏಕದಿನ ಕ್ರಿಕೆಟ್‌ನ ನಂ.1 ತಂಡವಾಗಿ ಕಣಕ್ಕಿಳಿದಿದ್ದ ಐಯಾನ್‌ ಮಾರ್ಗನ್‌ ಸಾರಥ್ಯದ ಇಂಗ್ಲೆಂಡ್‌ ತಂಡ ಚಾಂಪಿಯನ್ಸ್‌ ಪಟ್ಟ ಪಡೆದು 44 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದೆ.

ಇಂಗ್ಲೆಂಡ್‌ ತಂಡದ ಈ ಐತಿಹಾಸಿಕ ಸಾಧನೆಗೆ ವಿಶ್ವದಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ. ಈ ಸಂದರ್ಭದಲ್ಲಿ ಬ್ರಿಟನ್‌ನ ಜನಪ್ರಿಯ ಮಾಡೆಲ್‌ ಆಗಿರುವ ಬೆಥನಿ ಲಿಲ್ಲಿ ಏಪ್ರಿಲ್‌ ಎಂಬಾಕೆ ತಮ್ಮದೇ ಶೈಲಿಯಲ್ಲಿ ವಿಶ್ವ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ 129.7 ಸಾವಿರ ಫಾಲೋವರ್ಸ್‌ ಹೊಂದಿರುವ ಬೆಥನಿ ಲಿಲ್ಲಿ ಏಪ್ರಿಲ್‌, ಕ್ರಿಕೆಟ್‌ ಬ್ಯಾಟ್‌ ಹಿಡಿದು ತಮ್ಮ ಅರೆನಗ್ನ ಫೋಟೊಗಳನ್ನು ಪ್ರಕಟಿಸುವ ಮೂಲಕ "ವೆಲ್‌ ಡನ್‌ ಇಂಗ್ಲೆಂಡ್‌" ಎಂದು ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಹ್ಯಾಷ್‌ ಟ್ಯಾಗ್‌ ಬಳಸಿ ಶುಭ ಕೋರಿದ್ದಾರೆ.

ಇದರ ಬೆನ್ನಲ್ಲೇ ರೀ ಟ್ವೀಟ್‌ಗಳನ್ನು ಮಾಡಲು ಆರಂಭಿಸಿದ ಅಭಿಮಾನಿಗಳು, ಬೆಥನಿಯನ್ನು ಬ್ರಿಟನ್‌ನ ಪೂನಂ ಪಾಂಡೆ ಎಂದೇ ಕರೆದಿದ್ದಾರೆ. 2011ರಲ್ಲಿ ಭಾರತ, ಶ್ರೀಲಂಕಾದ ಹಾಗೂ ಬಾಂಗ್ಲಾದೇಶ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿ ವೇಳೆ ಭಾರತ ತಂಡ ಟ್ರೋಫಿ ಗೆದ್ದರೆ ಬೆತ್ತಲೆ ಫೋಟೊ ಪ್ರಕಟಿಸುವುದಾಗಿ ಹೇಳಿದ್ದ ಭಾರತದ ಸೋಷಿಯಲ್‌ ಮೀಡಿಯಾ ಸೆಲೆಬ್ರಿಟಿ ಮಾಡೆಲ್‌ ಪೂನಮ್‌ ಪಾಂಡೆ ರಾತ್ರೋ ರಾತ್ರಿ ಹೆಸರು ಗಿಟ್ಟಿಸಿದ್ದರು. ಅದರೆ, ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದರೂ ಪೂನಂ ಮಾತ್ರ ತಮ್ಮ ನಗ್ನ ಫೋಟೊ ಪ್ರಕಟಿಸದೆ ಪಡ್ಡೆ ಹುಎಉಗರಿಗೆ ಭಾರಿ ನಿರಾಸೆಯನ್ನೇ ಮೂಡಿಸಿದ್ದರು.

View this post on Instagram

A Pic for Team India. #WCW2019

A post shared by Poonam Pandey (@ipoonampandey) on

ಆದರೂ ಆಗಿಂದಾಗ ತಮ್ಮ ಅರೆ ನಗ್ನ ಫೋಟೊಗಳನ್ನು ಟೀಮ್‌ ಇಂಡಿಯಾಗೆ ಮುಡಿಪಾಗಿಸುವ ಮೂಲಕ ಅಭಿಮಾನಿಗಳನ್ನು ತಮ್ಮತ್ತ ಸೆಳೆಯುತ್ತಿದ್ದರು. ಪ್ರಸಕ್ತ ವಿಶ್ವಕಪ್‌ ವೇಳೆಯೂ ಪಾಕಿಸ್ತಾನ ತಂಡವನ್ನು ಭಾರತ ತಂಡ ಬಗ್ಗುಬಡಿದ ಬಳಿಕ ಪೂನಮ್‌ ತಮ್ಮದೊಂದು "ಹಾಟ್‌ ಪಿಕ್ಟಚರ್‌" ಪ್ರಕಟಿಸಿ ಟೀಮ್‌ ಇಂಡಿಯಾಗೆ ಶುಭ ಕೋರಿದ್ದರು.

ಇದೀಗ ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಬ್ರಿಟನ್‌ ಮೂಲದ ಮಾಡೆಲ್‌ಗೆ ಅಭಿಮಾನಿಗಳಿ ಯುಕೆಯ ಪೂನಂ ಪಾಂಡೆ ಎಂದು ನಾಮಕರಣ ಮಾಡಿದ್ದಾರೆ.

Story first published: Sunday, July 21, 2019, 19:31 [IST]
Other articles published on Jul 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+