ವಿಶ್ವಕಪ್: ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ವಿಶ್ವಾಸದಲ್ಲಿ ಆಮ್ಲಾ

ಲಂಡನ್, ಜೂನ್ 02: ಆತಿಥೇಯ ಇಂಗ್ಲೆಂಡ್ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್‌ನ 12ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹೆಲ್ಮೆಟ್‌ಗೆ ಚೆಂಡು ಬಡಿದರಿಂದ ಗಾಯಗೊಂಡಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಶೀಮ್ ಆಮ್ಲಾ, ಲೀಗ್ ಹಂತದಲ್ಲಿ ತಂಡದ ಮೂರನೇ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ಸ್ ಭಾರತ ತಂಡದ ವಿರುದ್ಧ ಆಡುವ ವಿಶ್ವಾಸದಲ್ಲಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು
ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ವೇಗಿ ಜೋಫ್ರಾ ಆರ್ಚರ್ ಎಸೆದ ಬೌನ್ಸರ್‌ನಲ್ಲಿ ಗಾಯಗೊಂಡು ನಿವೃತ್ತಿ ಹೊಂದಿದ್ದ ಆಮ್ಲಾ, ಬಳಿಕ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಮೊರೆ ಹೋಗಿದ್ದರು. ಇದೀಗ ಸೌತ್ ಹ್ಯಾಂಪ್ಟನ್‌ನಲ್ಲಿ ಜೂನ್ 5ರಂದು ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಡುವುದನ್ನು ಎದುರು ನೋಡುತ್ತಿದ್ದಾರೆ.
"ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹೆಲ್ಮೆಟ್‌ಗೆ ಚೆಂಡು ಬಡಿದು ಅದರಿಂದ ಆಮ್ಲಾ ಈವರೆಗೆ ಚೇತರಿಸಿಲ್ಲ. ಹೀಗಾಗಿ ಬಾಂಗ್ಲಾ ವಿರುದ್ಧ ಪಂದ್ಯಕ್ಕೆ ಆಟಗಾರರ ಆಯ್ಕೆಯಲ್ಲಿ ಅವರನ್ನು ಪರಿಗಳಿಸಲಿಲ್ಲ,'' ಎಂದು ಹರಿಣ ಪಡೆಯ ಮ್ಯಾನೇಜರ್ ಮೊಹಮ್ಮದ್ ಮೂಸಾಜಿ ಹೇಳಿದ್ದಾರೆ.
"ಭಾರತ ವಿರುದ್ಧದ ಮುಂದಿನ ಪಂದ್ಯದ ಹೊತ್ತಿಗೆ ಅವರು ಸಂಪೂರ್ಣ ಚೇತರಿಸಿ ತಂಡ ಸೇರಿಕೊಳ್ಳುತ್ತಾರೆ ಎಂಬ ಆಶಯದಲ್ಲಿದ್ದಾವೆ,'' ಎಂದು ಹೇಳಿದ್ದರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಗಾಯಗೊಂಡು ನಿವೃತ್ತಿ ಹೊಂದಿದ ಆಮ್ಲಾ, ಬಳಿಕ 7 ವಿಕೆಟ್ ಪತನದ ನಂತರ ಆಡಲು ಕಣಕ್ಕಿಳಿದರಾದರೂ ತಂಡಕ್ಕೆ ಎದುರಾದ 104 ರನ್‌ಗಳ ಹೀನಾಯ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications