For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್, ಸೆ.ಫೈ.: ಭಾರತದ ಎದುರು ಬ್ಯಾಟಿಂಗ್ ಆರಿಸಿದ ನ್ಯೂಜಿಲೆಂಡ್

World cup 2019: India vs New Zealand, 1st Semi-Final-Preview

ಮ್ಯಾಂಚೆಸ್ಟರ್, ಜುಲೈ 9: ಸುಮಾರು 11 ವರ್ಷಗಳ ಹಿಂದೆ ಅಂದರೆ 2008ರಲ್ಲಿ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದ ಭಾರತ, 'ಅಂಡರ್ 19 ಟ್ರೋಫಿ'ಯಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಸವಾಲು ಸ್ವೀಕರಿಸಿತ್ತು. ಈ ಪಂದ್ಯದಲ್ಲಿ ಭಾರತ ಟ್ರೋಫಿ ಜಯಿಸಿತ್ತು. ಅದಾಗಿ ಈಗ 2019ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಮತ್ತೆ ಭಾರತ ಮತ್ತು ಕಿವೀಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಕಿವೀಸ್ ಬ್ಯಾಟಿಂಗ್ ಆಯ್ದುಕೊಂಡಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಂಗಳವಾರ (ಜುಲೈ 9) ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಲುವ ನಿರೀಕ್ಷೆಯಿದೆ. ವಿಶ್ವಕಪ್‌ ಲೀಗ್ ಹಂತದಲ್ಲೂ ಇತ್ತಂಡಗಳ ಪಂದ್ಯ ಮಳೆಗೆ ಅಹುತಿಯಾಗಿತ್ತು. ಇಂದು ನಡೆಲಿರುವ ಮೊದಲ ಸೆಮಿಫೈನಲ್ ಪಂದ್ಯಕ್ಕೂ ಮಳೆಯ ಭೀತಿಯಿದೆ.

ನ್ಯೂಜಿಲೆಂಡ್ vs ಭಾರತ, ಸೆಮಿಫೈನಲ್ 1, ಜುಲೈ 9, Live ಸ್ಕೋರ್‌ಕಾರ್ಡ್

1
43689

ಮಳೆ ಅಡ್ಡಿಪಡಿಸದಿದ್ದರೆ 3 pmಗೆ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಇತ್ತೀಚಿನ ಕ್ರಿಕೆಟ್ ರಂಗದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿದವರು. ಈ ಪ್ರಬಲ ನಾಯಕರ ಮುಂದಾಳತ್ವದಲ್ಲಿರುವ ಇತ್ತಂಡಗಳ ಕಾದಾಟ ಕುತೂಹಲ ಮೂಡಿಸಿದೆ.

ಸದ್ಯ ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಕ್ರಮವಾಗಿ 1ರಿಂದ 4ನೇ ಸ್ಥಾನದಲ್ಲಿವೆ. ಶ್ರೀಲಂಕಾ ವಿರುದ್ಧ ಆಡಿದ್ದ ಅದೇ ಭಾರತ ತಂಡ ಮೊದಲ ಸೆಮಿಫೈನಲ್‌ನಲ್ಲಿ ಕಿವೀಸ್ ವಿರುದ್ಧ ಕಾದಾಡುವುದನ್ನು ನಿರೀಕ್ಷಿಸಲಾಗಿದೆ. ಆದರೂ ಸಣ್ಣ ಬದಲಾವಣೆಗಳಾದರೆ ಅಚ್ಚರಿಯಿಲ್ಲ.

ಭಾರತ ತಂಡ: ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ರಿಷಭ್ ಪಂತ್, ಎಂ.ಎಸ್.ಧೋನಿ (ವಿಕೆ), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್‌ ಬೂಮ್ರಾ.

ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲಾಥಮ್ (ವಿಕೆ), ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.

{headtohead_cricket_3_4}

Story first published: Tuesday, July 9, 2019, 15:45 [IST]
Other articles published on Jul 9, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+