Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ಭಾರತ vs ನ್ಯೂಜಿಲೆಂಡ್, ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ!?

World Cup 2019: India vs New Zealand, semi-final, Rain expected to play spoilsport

ಮ್ಯಾಂಚೆಸ್ಟರ್, ಜುಲೈ 9: ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮಂಗಳವಾರ (ಜುಲೈ 9) ನಡೆಯಲಿರುವ ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದ ವೇಳೆ ಮಳೆ ಅಡ್ಡಿಪಡಿಸುವುದನ್ನು ನಿರೀಕ್ಷಿಸಲಾಗಿದೆ. ಕುತೂಹಲಕಾರಿ ಈ ಪಂದ್ಯದ ವೇಳೆ ಮಳೆ ಆಡವೇ ಮುಂದುವರೆಯುವ ಸಾಧ್ಯತೆಯಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಐಸಿಸಿ ವಿಶ್ವಕಪ್ 2019ರ ಲೀಗ್ ಹಂತದ ಪಂದ್ಯಗಳ ವೇಳೆಯೂ ನ್ಯೂಜಿಲೆಂಡ್-ಭಾರತ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಜುಲೈ 13ರಂದು ನಡೆಯಬೇಕಿದ್ದ ಇತ್ತಂಡಗಳ ಪಂದ್ಯ ಮರುಣನ ಅವಕೃಪೆಯಿಂದಾಗಿ ಟಾಸ್ ಕೂಡ ನಡೆಯದೆ ರದ್ದಾಗಿತ್ತು.

1
43689

ಅಂಕಪಟ್ಟಿಯಲ್ಲಿ ಸದ್ಯ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಕ್ರಮವಾಗಿ 1ರಿಂದ 4 ಸ್ಥಾನಗಳಲ್ಲಿವೆ. ಸೆಮಿಫೈನಲ್ ವೇಳೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತದೆ?

ಮ್ಯಾಂಚೆಸ್ಟರ್ ತಾಪಮಾನ

ಮ್ಯಾಂಚೆಸ್ಟರ್ ತಾಪಮಾನ

ಮೊದಲ ಸೆಮಿಫೈನಲ್ ನಲ್ಲಿ ಮತ್ತೆ ವಿರಾಟ್ ಕೊಹ್ಲಿ ಪಡೆ ಮತ್ತು ಕೇನ್ ವಿಲಿಯಮ್ಸನ್ ಬಳಗ ಮುಖಾಮುಖಿಯಾಗುದ್ದು, ಈ ಪಂದ್ಯಕ್ಕೂ ಮಳೆ ತೊಂದರೆ ಕೊಡುವುದು ನಿರೀಕ್ಷಿತ. ಹವಾಮಾನ ವರದಿಯ ಪ್ರಕಾರ ಮಂಗಳವಾರ ಮ್ಯಾಂಚೆಸ್ಟರ್‌ನಲ್ಲಿ ಗರಿಷ್ಠ 20 ಡಿಗ್ರಿ ಸೆಲ್ಸಿಯಸ್ ಒಳಗೆ ತಾಪಮಾನವಿರಲಿದೆ.

ಮಳೆ ಅಡ್ಡಿಪಡಿಸಿದರೆ ಮುಂದೇನು?

ಮಳೆ ಅಡ್ಡಿಪಡಿಸಿದರೆ ಮುಂದೇನು?

ಹಾಗಾದರೆ ಸೆಮಿಫೈನಲ್‌ಗೆ ನಿಜಕ್ಕೂ ಮಳೆ ತೊಂದರೆ ಕೊಟ್ಟರೆ ಮುಂದೇನು? ಲೀಗ್ ಹಂತದ ಪಂದ್ಯಗಳ ವೇಳೆ ಮಳೆ ಅಡಚಣೆಯಾದರೆ ಪಂದ್ಯ ನಿಲ್ಲಿಸಿ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತಿತ್ತು. ಸೆಮಿಫೈನಲ್‌ ವೇಳೆ ಮಳೆ ಬಂದರೆ, ಈ ಪಂದ್ಯ ನಡೆಸಲು ಕಾಯ್ದಿರಿಸಲಾದ ಹೆಚ್ಚುವರಿ ದಿನಗಳಲ್ಲಿ ನಡೆಸಲಾಗುತ್ತದೆ. ಈ ಹೆಚ್ಚುವರಿ ದಿನಗಳಲ್ಲಿ ಮಳೆಯ ಸಾಧ್ಯತೆಯಿಲ್ಲ.

ಅಗ್ರ ಸ್ಥಾನಿ ತಂಡಕ್ಕೆ ಲಾಭ

ಅಗ್ರ ಸ್ಥಾನಿ ತಂಡಕ್ಕೆ ಲಾಭ

ಇನ್ನು ಸೆಮಿಫೈನಲ್ ಪಂದ್ಯ ಆರಂಭಗೊಂಡ ಬಳಿಕ ಮಳೆ ವಕ್ಕರಿಸಿ ಕನಿಷ್ಠ 20 ಓವರ್‌ಗಳನ್ನೂ ಆಡಲು ಸಾಧ್ಯವಾಗದಿದ್ದರೆ ಫಲಿತಾಂಶಕ್ಕಾಗಿ ಸೂಪರ್ ಓವರ್‌ಗಳನ್ನು ನಡೆಸುವ ಸಾಧ್ಯತೆಯಿದೆ. ಸೂಪರ್ ಓವರ್‌ ಕೂಡ ನಡೆಸಲು ಸಾಧ್ಯವಾಗದಿದ್ದರೆ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿರುವ ತಂಡ ಫೈನಲ್ ಪ್ರವೇಶಿಸಲಿದೆ.

ಸೆಮಿಫೈನಲ್ ಸೆಣಸಾಟ

ಸೆಮಿಫೈನಲ್ ಸೆಣಸಾಟ

ಜುಲೈ 9ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ವಿಶ್ವಕಪ್ 2019ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯ ಪ್ರಥಮ ಸ್ಥಾನಿ ಭಾರತ ಮತ್ತು ನಾಲ್ಕನೇ ಸ್ಥಾನಿ ಕಿವೀಸ್ ಸೆಣಸಾಡಿದರೆ, ಜುಲೈ 11ರಂದು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ದ್ವಿತೀಯ ಸ್ಥಾನ ಆಸ್ಟ್ರೇಲಿಯಾ ಮತ್ತು ತೃತೀಯ ಸ್ಥಾನಿ ಇಂಗ್ಲೆಂಡ್ ಕಾದಾಡಲಿವೆ.

Story first published: Tuesday, July 9, 2019, 10:43 [IST]
Other articles published on Jul 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+